ರಾಜಕೀಯ

10 ಪರ್ಸೆಂಟ್ ಅಲ್ಲ, ಕಾಂಗ್ರೆಸ್'ದು 30 ಪರ್ಸೆಂಟೇಜ್ ಸರ್ಕಾರ: ಜಗದೀಶ್ ಶೆಟ್ಟರ್

ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು, 10 ಪರ್ಸೆಂಟ್ ಸರ್ಕಾರವಲ್ಲ, 30 ಪರ್ಸೆಂಟೇಜ್ ಸರ್ಕಾರವೆಂದು ಶುಕ್ರವಾರ ಹೇಳಿದ್ದಾರೆ...

10 ಪರ್ಸೆಂಟ್ ಅಲ್ಲ, ಕಾಂಗ್ರೆಸ್'ದು 30 ಪರ್ಸೆಂಟೇಜ್ ಸರ್ಕಾರ: ಜಗದೀಶ್ ಶೆಟ್ಟರ್
ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್
Published On :
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು, 10 ಪರ್ಸೆಂಟ್ ಸರ್ಕಾರವಲ್ಲ, 30 ಪರ್ಸೆಂಟೇಜ್ ಸರ್ಕಾರವೆಂದು ಶುಕ್ರವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ರಾಜ್ಯ ಭ್ರಷ್ಟಾಚಾರದ ಕೂಪವಾಗಿ ನಿರ್ಮಾಣಗೊಳ್ಳುತ್ತಿದೆ. ಯಾವುದೇ ಕಾರ್ಯವನ್ನು ಪೂರ್ಣಗೊಳಿಸಲು ಇಲ್ಲಿನ ಅಧಿಕಾರಿಗಳೂ 10 ಪರ್ಸೆಂಟ್ ಅಲ್ಲ, 30 ಪರ್ಸೆಂಟೇಜ್ ಕಮಿಷನ್ ಪಡೆದುಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ. 
10 ಪರ್ಸೆಂಟ್ ಕಮಿಷನ್ ನೀಡದೆ. ರಾಜ್ಯದಲ್ಲಿ ಯಾವುದೇ ಕಾರ್ಯಗಳು ನಡೆಯುವುದಿಲ್ಲ ಹೀಗಾಗಿ ಕರ್ನಾಟಕ ಸರ್ಕಾರ 10 ಪರ್ಸೆಂಟ್ ಸರ್ಕಾರವೆಂದು ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರೋಪಿಸಿದ್ದರು. 
ರಾಜ್ಯದಲ್ಲಿ ಯಾವುದೇ ಕೆಲಸಗಳಾಗಬೇಕಿದ್ದರೂ ಒಬ್ಬ ವ್ಯಕ್ತಿ 10 ಪರ್ಸೆಂಟ್ ಕಮಿಷನ್ ನೀಡಬೇಕಿದೆ. ಕಾರ್ಯ ಆರಂಭಗೊಂಡ ಬಳಿಕ ಮತ್ತೆ ವ್ಯಕ್ತಿ 10 ಪರ್ಸೆಂಟ್ ಕಮಿಷನ್ ನೀಡಬೇಕು. ಬಳಿಕ ಕಾರ್ಯ ಪೂರ್ಣಗೊಂಡ ಬಳಿಕವೂ 10 ಪರ್ಸೆಂಟ್ ಕಮಿಷನ್ ನೀಡಬೇಕು. ಕೆಲವೊಮ್ಮೆ ಇತರ ಮೊತ್ತ ಹೆಚ್ಚಳವೂ ಆಗಬಹುದು ಎಂದು ಆರೋಪಿಸಿದ್ದಾರೆ. 
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದ್ದರೂ, ರಾಜ್ಯ ಸರ್ಕಾರ ಗುತ್ತಿಗೆಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ನೀಡುತ್ತಾರೆ. ಆ ರಾಜ್ಯಗಳಿಂದ ಬರುವ ಗುತ್ತಿಗೆದಾರರು ರೂ.500 ಕೋಟಿ ಹಾಗೂ 2,000 ಕೋಟಿಗೂ ಹೆಚ್ಚು ಹಣವನ್ನು ಪಡೆಯುತ್ತಾರೆ. ಕರ್ನಾಟಕದಲ್ಲಿ ಉತ್ತಮವಾದ ಹಾಗೂ ಯೋಗ್ಯವಾದ ಗುತ್ತಿಗೆದಾರರೇ ಇಲ್ಲವೇ? ಹೊರಗಿನವರಿಗೆ ಗುತ್ತಿಗೆ ನೀಡುವ ಅಗತ್ಯವಾದರೂ ಏನಿದೆ? ಇಲ್ಲಿ ಭ್ರಷ್ಟಾಚಾರವೇ ಪ್ರಮುಖ ಪಾತ್ರವನ್ನು ನಿಭಾಯಿಸುತ್ತವೆ ಎಂದು ಹೇಳಿದ್ದಾರೆ. 
ಡಾ.ಸರೋಜಿನಿ ಮಹಿಷಿ ಮತ್ತು ನಂಜುಂಡಪ್ಪ ಸಮಿತಿಗಳ ವರದಿಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಳಂಬ ನೀತಿಯನ್ನೇಕೆ ಅನುಸರಿಸುತ್ತಿದೆ. ಸಾಮಾಜಿಕ-ಆರ್ಥಿಕ ಸಮೀಕ್ಷೆಯ ವರದಿ ಏನಾಯಿತು? ಇದಕ್ಕಾಗಿ ಸರ್ಕಾರ ರೂ.250 ಕೋಟಿ ಖರ್ಚು ಮಾಡಿದೆ. ಈಗಾಗಲೇ ಈ ಬಗ್ಗೆ ಚರ್ಚೆಗಳು ನಡೆಯಬೇಕಿತ್ತು. ಆದರೂ ಸರ್ಕಾರವೇಕೆ ತಡಮಾಡುತ್ತಿದೆ? ನಿಮ್ಮನ್ನು ಯಾರಾದರೂ ತಡೆಯುತ್ತಿದ್ದಾರೆಂಯೇ ಎಂದು ಪ್ರಶ್ನಿಸಿದ್ದಾರೆ. 
ಹೈದರಾಬಾದ್-ಕರ್ನಾಟಕಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. 2 ವರ್ಷಗಳ ಹಿಂದೆ ಈ ಭಾಗದ ಜನರಿಗೆ 35,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗಲೂ, ಈ ಬಗ್ಗೆ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.