ರಾಜಕೀಯ

ಸಚಿವ ಸಂಪುಟ ಸಭೆಗೆ ಚಕ್ಕರ್: ಬಿಜೆಪಿ ಡಿನ್ನರ್ ಗೆ ರಮೇಶ್ ಜಾರಕಿಹೊಳಿ ಹಾಜರ್

ದೋಸ್ತಿ ಸರಕಾರಕ್ಕೆ ಶಾಕ್‌ ನೀಡುವ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಪ್ರವೃತ್ತಿ ಮುಂದುವರಿದಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷ ದ (ಸಿಎಲ್‌ಪಿ) ಸಭೆ ...

ಸಚಿವ ಸಂಪುಟ ಸಭೆಗೆ ಚಕ್ಕರ್: ಬಿಜೆಪಿ ಡಿನ್ನರ್ ಗೆ ರಮೇಶ್ ಜಾರಕಿಹೊಳಿ ಹಾಜರ್
ರಮೇಶ್ ಜಾರಕಿಹೊಳಿ ಮತ್ತು ಸಿಎಂ ಕುಮಾರ ಸ್ವಾಮಿ (ಸಂಗ್ರಹ ಚಿತ್ರ)
Published On :
ಬೆಳಗಾವಿ:  ದೋಸ್ತಿ ಸರಕಾರಕ್ಕೆ ಶಾಕ್‌ ನೀಡುವ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಪ್ರವೃತ್ತಿ ಮುಂದುವರಿದಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷ ದ (ಸಿಎಲ್‌ಪಿ) ಸಭೆ ಹಾಗೂ ಸಂಪುಟ ಸಭೆಗೆ ಗೈರಾಗಿದ್ದ ಅವರು, ಖಾಸಗಿ ಹೋಟೆಲ್‌ನಲ್ಲಿ ರಾತ್ರಿ ನಡೆದ ಬಿಜೆಪಿಯ ಔತಣಕೂಟದಲ್ಲಿ ಭಾಗಿಯಾಗಿದ್ದು ಕಾಂಗ್ರೆಸ್ ಗೆ ಇರಿಸುಮುರಿಸು ಉಂಟು ಮಾಡಿದೆ.
ಮೇಲ್ಮನೆ ಪ್ರತಿಪಕ್ಷ ದ ಮುಖ್ಯ ಸಚೇತಕ ಬೆಳಗಾವಿಯವರೇ ಆದ ಮಹಾಂತೇಶ ಕವಟಗಿಮಠ ಈ ಔತಣಕೂಟ ಆಯೋಜಿಸಿ ವಿಧಾನಮಂಡಲದ ಉಭಯ ಸದನಗಳ ಶಾಸಕರು ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಆಮಂತ್ರಣ ನೀಡಿದ್ದರು. ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಿದೆ. ಬಿಜೆಪಿ ಮುಖಂಡರ ಭೋಜನಕೂಟದಲ್ಲಿ ಜಾರಕಿಹೊಳಿ ಕಾಣಿಸಿಕೊಂಡಿದ್ದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. 
ಈ ಭೋಜನಕೂಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಪಕ್ಷ ದ ಪ್ರಮುಖರಾದ ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ ಮತ್ತಿತರರು ಭಾಗಿಯಾಗಿದ್ದರು. ಬಿಎಸ್‌ವೈ ಜತೆಗೇ ಕುಳಿತುಕೊಂಡು ರಮೇಶ್‌ ಜಾರಕಿಹೊಳಿ ಊಟ ಮಾಡಿದರು.ಈ ವಿಷಯವನ್ನು ರಾಜಕೀಯಗೊಳಿಸಬಾರದು, ಎಲ್ಲಾ ಪಕ್ಷದವರಿಗೂ ಆಹ್ವಾನ ನೀಡಲಾಗಿತ್ತು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. 
ಕವಟಗಿಮಠ ಏರ್ಪಡಿಸಿದ್ದ ಭೋಜನಕೂಟಕ್ಕೆ ಸಚಿವೆ ಜಯಮಾಲಾ, ಪುಟ್ಟರಂಗ ಶೆಟ್ಟಿ ರಾಜಶೇಖರ್ ಪಾಟೀಲ್ ಸಂಪುಟ ಸಭೆಯ ನಂತರ ಬಿಜೆಪಿ ನಾಯಕರ ಡಿನ್ನರ್ ಪಾರ್ಟಿಗೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವ ರಮೇಶ್‌ ಜಾರಕಿಹೊಳಿ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ದೋಸ್ತಿ ಸರ್ಕಾರದ ಕುರಿತಾದ ತಮ್ಮ ಅಸಮಾಧಾನ ತೋಡಿಕೊಂಡರು ಎನ್ನಲಾಗಿದೆ. 

ಜಾರಕಿಹೊಳಿ ಅವರಿಗೆ ತಿಳಿ ಹೇಳಿದ ಸಿದ್ದರಾಮಯ್ಯ, ಬಿಜೆಪಿ ನಾಯಕರ ಸಂಪರ್ಕ ಮಾಡದಂತೆ ಸೂಚಿಸಿದರು. ಕಾಂಗ್ರೆಸ್‌ನಲ್ಲೆ ಉತ್ತಮ ಭವಿಷ್ಯವಿದ್ದು, ಯಾವುದೇ ಆತುರದ ನಿರ್ಧಾರ ಕೈಗೊಳ್ಳದಂತೆ ಕಿವಿಮಾತು ಹೇಳಿದರೆಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.