ರಾಜಕೀಯ

ನನ್ನ ಸಾವಿಗಿಂತಲೂ ಸಿದ್ದರಾಮಯ್ಯ ಸೋಲು ಹೆಚ್ಚು ನೋವಿನ ವಿಷಯ: ರಮೇಶ್ ಕುಮಾರ್

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೋಲು ಅನುಭವಿಸಿದ್ದು ನನಗೆ ನನ್ನ ಸಾವಿಗಿಂತಲೂ ಹೆಚ್ಚು ನೋವು ಕೊಡುವ ವಿಷಯ ಎಂದು ...

ನನ್ನ ಸಾವಿಗಿಂತಲೂ ಸಿದ್ದರಾಮಯ್ಯ ಸೋಲು ಹೆಚ್ಚು ನೋವಿನ ವಿಷಯ: ರಮೇಶ್ ಕುಮಾರ್
ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯ
Published On :
ಕೋಲಾರ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೋಲು ಅನುಭವಿಸಿದ್ದು ನನಗೆ ನನ್ನ ಸಾವಿಗಿಂತಲೂ ಹೆಚ್ಚು ನೋವು ಕೊಡುವ ವಿಷಯ ಎಂದು ವಿಧಾನಸಭೆ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಕಣ್ಣೀರು ಹಾಕಿದ್ದಾರೆ.
ಕೋಲಾರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಭಾವುಕರಾದ ಅವರು, ಕುರಿ ಕಾಯುವ ಸಮಾಜದಲ್ಲಿ ಹುಟ್ಟಿ 13 ಬಾರಿ ಬಜೆಟ್​ ಮಂಡಿಸಿ, ಎಲ್ಲ ಸಮಾಜದ ಒಳಿತಿಗಾಗಿ ಶ್ರಮಿಸಿರುವ ಸಿದ್ದರಾಮಯ್ಯನವರನ್ನು ಕೆಳಗೆ ಬೀಳಲು ಬಿಡಬಾರದು ಎಂದು ಹೇಳುತ್ತ ಕಂಬನಿ ಮಿಡಿದರು.
ಸತ್ಯ ಕಹಿಯಾಗಿರುತ್ತೆ, ಸತ್ಯ ಕಠಿಣವಾಗಿರುತ್ತೆ. ಆದರೆ ಸತ್ಯಕ್ಕೆ ಸಾವಿಲ್ಲ. ಕೊನೆಗೆ ಅದೇ ಗೆಲ್ಲುತ್ತೆ. ಬರಡು ಭೂಮಿಗೆ ನೀರು ಕೊಟ್ಟ ಭಗೀರಥ ಸಿದ್ಧರಾಮಯ್ಯ ಎಂದು ರಮೇಶ್ ಕುಮಾರ ಭಾವನಾತ್ಮಕವಾಗಿ ಮಾತನಾಡಿದರು.
ಸಿದ್ದರಾಮಯ್ಯ ಅವರ ಸೋಲನ್ನು ಎಂದಿಗೂ ನಾನು ಮರೆಯಲಾರೆ. ನನಗೆ ನನ್ನ ಸಾವಿಗಿಂತಲೂ ಅವರೆ ನನಗೆ ಹೆಚ್ಚು. ಆರೋಗ್ಯ ಸಚಿವನಾಗಿದ್ದಾಗ ನೀಡಿದ ಬೆಂಬಲ ಮರೆಯಲಾರೆ. ಅವರಿಗೆ ಪುತ್ರನನ್ನು ಕಳೆದುಕೊಂಡ ಸಮಯಕ್ಕಿಂತಲೂ ಹೆಚ್ಚು ನೋವನ್ನು ಚುನಾವಣೆ ಸೋಲು ನೀಡಿದೆ ಎಂದು ಹೇಳುವ ಮೂಲಕ ಬಾವುಕರಾಗಿ ಕಣ್ಣೀರು ಸುರಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.