ರಾಜಕೀಯ

ನನಗೆ ಎಲ್ಲಾ ಜನರ ಆಶೀರ್ವಾದ ಇದೆ, ಮತ್ತೆ ಮುಖ್ಯಮಂತ್ರಿಯಾಗುವೆ: ಮಾಜಿ ಸಿಎಂ ಸಿದ್ದರಾಮಯ್ಯ

ನನಗೆ ಜನರ ಆಶೀರ್ವಾದ ಇದೆ, ನಾನು ಎಲ್ಲಾ ಜಾತಿಯ ಬಡವರಿಗೆ ಸಹಾಯ ಮಾಡಿದ್ದೇನೆ. ಹೀಗಾಗಿ ನಾನು ಇನ್ನೊಮ್ಮೆ ಮುಖ್ಯಮಂತ್ರಿಯಾಗುವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನನಗೆ ಎಲ್ಲಾ ಜನರ ಆಶೀರ್ವಾದ ಇದೆ, ಮತ್ತೆ ಮುಖ್ಯಮಂತ್ರಿಯಾಗುವೆ: ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
Published On :
ಹಾಸನ: ನನಗೆ ಜನರ ಆಶೀರ್ವಾದ ಇದೆ, ನಾನು ಎಲ್ಲಾ ಜಾತಿಯ ಬಡವರಿಗೆ ಸಹಾಯ ಮಾಡಿದ್ದೇನೆ. ಹೀಗಾಗಿ ನಾನು ಇನ್ನೊಮ್ಮೆ ಮುಖ್ಯಮಂತ್ರಿಯಾಗುವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಾಸನ ಜಿಲ್ಲೆ ಹೊಳೇನರಸೀಪುರದ ಹಾಡ್ಯಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ "ರಾಜಕೀಯದಲ್ಲಿ ಇಂದು ಹಣ, ಜಾತಿಯ ಪಾರಮ್ಯವಿದೆ. ಇದು ಅಪಾಯಕಾರಿ. ಜನರಿಗಾಗಿ ಕೆಲಸ ಮಾಡುವವರನ್ನೇ ಅಧಿಕಾರಕ್ಕೆ ತರಬೇಕು. ಎಂದಿದ್ದಾರೆ.
ಈ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆ ಏರುವ ಬಯಕೆ ವ್ಯಕ್ತಪಡಿಸಿರುವ ಸಿದ್ದರಾಮಯ್ಯ  ತಾನು ಮುಖ್ಯಮಂತ್ರಿಯಾಗಿದ್ದಾಗ ಅಕ್ಕಿ, ಪಶು ಶೂ, ಸೇರಿ ಅನೇಕ ಭಾಗ್ಯಗಳ ಯೋಜನೆ ಜಾರಿಗೆ ತಂದಿದ್ದೆ. ಇದನ್ನು ನಾನು ಒಂದೇ ಜಾತಿ ಅಥವಾ ಸಮುದಾಯಕ್ಕಾಗಿ ಜಾರಿಗೆ ತಂದಿರಲಿಲ್ಲ. ಎಲ್ಲರಿಗೂ ಇದರಲ್ಲಿ ಪಾಲಿದೆ. ಎಂದರು.
"ರಾಜಕೀಯ ಹರಿವ ನಿರು. ಬದಲಾವಣೆ ಆಗಲೇಬೇಕು. ನಾನು ಹೆದರುವವನಲ್ಲ ಹೋರಾಟ ಮುಂದುವರಿಯುತ್ತದೆ. ಸಮಾಜದಲ್ಲಿ ಜಾತಿ ಭಾವನೆ ಇರದೆ ಹೋಗಬೇಕು. ಬಸವಣ್ಣ, ಅಂಬೇಡ್ಕರ್ ಹಾದಿಯಲ್ಲಿ ಎಲ್ಲರೂ ಸಾಗಬೇಕು.
"ನಾನು ಜನರ ಆಶೀರ್ವಾದದಿಂದ ಮತ್ತೆ ಅಧಿಕಾರಕ್ಕೆ ಬರುತ್ತೇನೆ.ಆಗ ಸರ್ಕಾರಿ ಯೋಜನೆ ಗುತ್ತಿಗೆಗಳಲ್ಲಿ ಮೀಸಲಾತಿಗೆ ಅವಕಾಶ ಕಲ್ಪಿಸುತ್ತೇನೆ. ಹಿಂದೆ ಪಂಚಾಯತಿ ವಿಭಾಗಗಳಲ್ಲಿ ಮೀಸಲಾತಿ ತಂದದ್ದು ನಾನು.ಆದರೆ ಇಂದು ಅದನ್ನು ತಾವು ಮಾಡಿದ್ದೆಂದು ಬೇರೆಯವರು ಹೇಳಿಕೊಂಡು ತಿರುಗುತ್ತಿದ್ದಾರೆ" ಎಂದು ವ್ಯಂಗ್ಯವಾಡುದ್ದಾರೆ.
ಹಾಡ್ಯಗ್ರಾಮದಲ್ಲಿ ಈಶ್ವರ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
"ದೇವರು ಎಲ್ಲೆಡೆಯೂ ಇದ್ದಾನೆ. ಭಕ್ತಿಯಿಂದ ಪೂಜಿಸಿದವರಿಗೆ ದೇವರು ದರ್ಶನ ಕೊಡುವನು. ವರನಟ ರಾಜ್ ಕುಮಾರ್ "ಅಭಿಮ್ಮಾನಿಗಳೇ ದೇವರು" ಎಂದಿದ್ದನ್ನು ನಾನು ಮರೆಯಬಾರದು.ಆತ್ಮ ಸಾಕ್ಷಿಗೆ ನಡೆದುಕೊಳ್ಳುವುದು ಮಹಾನ್ ಪೂಜೆಯಾಗುತ್ತದೆ" ಸಿದ್ದರಾಮಯ್ಯ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.