ರಾಜಕೀಯ

ಚುನಾವಣಾ ಪ್ರಚಾರದಲ್ಲಿ ಮಾಯಾವತಿ ಪಾಲ್ಗೊಂಡಿದ್ದರಿಂದ ಹೆಚ್ಚಿನ ದಲಿತರ ಮತ ಸಿಕ್ಕಿತು: ದೇವೇಗೌಡ

: ವಿಧಾನ ಸಭೆ ಚುನಾವಣೆಯಲ್ಲಿ ಬಿಎಸ್ ಪಿ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ದಲಿತ ಮತಗಳು ಸಿಗಲು ಕಾರಣವಾಯಿತು ಎಂದು ...

ಚುನಾವಣಾ ಪ್ರಚಾರದಲ್ಲಿ ಮಾಯಾವತಿ ಪಾಲ್ಗೊಂಡಿದ್ದರಿಂದ ಹೆಚ್ಚಿನ ದಲಿತರ ಮತ ಸಿಕ್ಕಿತು: ದೇವೇಗೌಡ
ಎಚ್.ಡಿ ದೇವೇಗೌಡ
Published On :
ಮೈಸೂರು: ವಿಧಾನ ಸಭೆ ಚುನಾವಣೆಯಲ್ಲಿ ಬಿಎಸ್ ಪಿ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ  ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ದಲಿತ ಮತಗಳು ಸಿಗಲು ಕಾರಣವಾಯಿತು ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಬಿಎಸ್ ಪಿ ನಾಯಕ ಮಾಯಾವತಿ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು, ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ  ದಲಿತರ ಮತಗಳು ನಮಗೆ ಸಿಗಲು ಕಾರಣವಾಯಿತು,. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿಯೂ ಇದೇ ಜಾತಿ ರಾಜಕೀಯ ಲೆಕ್ಕಾಚಾರದಲ್ಲಿ ದೇವೇಗೌಡರು ತೊಡಗಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಎಚ್. ವಿಶ್ವನಾಥ್ ಅವರನ್ನು ನೇಮಕ ಮಾಡಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ, ಒಂದು ಕಾಲದ ದೇವೇಗೌಡರ ರಾಜಕೀಯ ಶತೃವಾಗಿದ್ದ ವಿಶ್ವನಾಥ್ ಸದ್ಯ ಜೆಡಿಎಸ್ ಶಾಸಕರಾಗಿದ್ದಾರೆ,ತ ಜೊತೆಗೆ ಪಕ್ಷದ ಜವಾಬ್ದಾರಿ ಕೂಡ ಹೊತ್ತಿದ್ದಾರೆ, ಕುರುಬ ಸಮುದಾಯದ ನಾಯಕರೊಬ್ಬರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಪ್ರಬಲ ಸಂದೇಶ ರವಾನಿಸಿದ್ದಾರೆ, 2006 ರಲ್ಲಿ ಸಿದ್ದರಾಮಯ್ಯ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರು. ಕುರುಬ ಸಮುದಾಯದವರಿಗೆ ಮುಖ್ಯ ಹುದ್ದೆ ನೀಡುವ ಮೂಲಕ ಮೈಸೂರು ಬಾಗ ಕುರುಬ ಮತಗಳನ್ನು ಸೆಳೆಯುವುದು ಗೌಡರ ಪ್ರಮುಖ ಅಜೆಂಡವಾಗಿದೆ,.
ಕುರುಬ ನಾಯಕರ ಮೂಲಕ ಸಂಘಟನಾತ್ಮಕ ಕೆಲಸ ಮಾಡಲು ವಿಶ್ವನಾಥ್ ಜೊತೆಗೆ ಹಲವು ಯುವ ಮುಖಂಡರನ್ನು ನೇಮಿಸಲು ತಯಾರಿ ನಡೆಸಿದೆ,  ಮಧು ಬಂಗಾರಪ್ಪಸ ನಿರ್ವಾರಿ, ರಮೇಶ್ ಬಾಬು ಮತ್ತು ಬಿ.ಎಂ ಫಾರೂಕ್ , ಉಪ್ಪಾರ ಸಮುದಾಯಕ್ಕೆ ಸೇರಿದ್ದ ಬಿಬಿ ನಿಂಗಯ್ಯ, ಹಾಗೂ ನಾಯಕ್ ಸಮುದಾಯದವರನ್ನು ಪ್ರಮುಖ ಹುದ್ದಗೆಗಳಿಗೆ ನೇಮಿಸಿ, ಹಿರಿಯರ ಅನುಭವದ ಜೊತೆಗೆ ಕಿರಿಯರ ಶಕ್ತಿಯನ್ನು ಒಗ್ಗೂಡಿಸಿ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಲು ಗೌಡರು ತಂತ್ರ ರೂಪಿಸುತ್ತಿದ್ದಾರೆ.
ಸದ್ಯ ಸ್ಥಳೀಯ ಸಂಸ್ಥೆ ಚುನಾವಣೆ ಸವಾಲಾಗಿದ್ದು, ತನ್ನ ಸ್ವಂತ ಸಾಮರ್ಥ್ಯದ ಮೂಲಕ ಹೆಚ್ಚಿನ ಸ್ಥಾನ ಗಳಿಸುವುದು ಜೆಡಿಎಸ್ ಉದ್ದೇಶವಾಗಿದೆ,.ವಿಶ್ವನಾಥ್ ಅವರ ನಾಲ್ಕು ದಶಕಗಳ ರಾಜಕೀಯ ಅನುಭವ ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚಿನ ಸೀಟು ಗಳಿಸಿದರೇ ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಕಾಂಗ್ರೆಸ್ ಬಳಿ ಹೆಚ್ಚಿನ ಕ್ಷೇತ್ರ ಕೇಳಲು ಸಹಾಯವಾಗುತ್ತದೆ.
ಜಾತಿ ಆಧಾರದ ಮೇಲೆ ಪಕ್ಷ ವಿಸ್ತರಿಸಿದರೇ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಮತಗಳನ್ನು ವಿಭಜನೆಯಾಗುತ್ತದೆ. ಜೊತೆಗೆ ತಂದೆ-ಮಗನ ಪಕ್ಷ ಎಂಬ ಆರೋಪ ಕೂಡ ದೂರವಾಗುತ್ತದೆ. ಅಧಿಕಾರದ ಹಂಚಿಕೆ ಜೊತೆಗೆ ಕುಮಾರ ಸ್ವಾಮಿ ಸರ್ಕಾರದ ಕೆಲಸಗಳ ಮೂಲಕ, ಜೆಡಿಎಸ್ ಉತ್ತರ ಕರ್ನಾಟಕ ಅಭಿವೃದ್ಧಿ ವಿರೋಧಿ ಎಂದು ಹಣೆ ಪಟ್ಟಿ ಕಟ್ಟುತ್ತಿರುವ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.