ರಾಜಕೀಯ

ಸಿದ್ದರಾಮಯ್ಯ ಅಹಂಕಾರ ಅಡಗಿ, ಯಡಿಯೂರಪ್ಪ ಸಿಎಂ ಆಗುವುದನ್ನು ನೋಡಬೇಕು: ಜನಾರ್ಧನ ರೆಡ್ಡಿ

: ಬಿಜೆಪಿ ಹಾಗೂ ಶ್ರೀರಾಮುಲು ಪರ ಪ್ರಚಾರ ಮಾಡದಂತೆ ಮಾಜಿ ಸಚಿವ ಹಾಗೂ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿಯನ್ನು ಪಕ್ಷದ ವರಿಷ್ಠರು ದೂರ..

ಸಿದ್ದರಾಮಯ್ಯ ಅಹಂಕಾರ ಅಡಗಿ, ಯಡಿಯೂರಪ್ಪ ಸಿಎಂ ಆಗುವುದನ್ನು ನೋಡಬೇಕು: ಜನಾರ್ಧನ ರೆಡ್ಡಿ
ಜನಾರ್ದನ ರೆಡ್ಡಿ
Published On :
ಮೊಳಕಾಲ್ಮೂರು: ಬಿಜೆಪಿ ಹಾಗೂ ಶ್ರೀರಾಮುಲು ಪರ ಪ್ರಚಾರ ಮಾಡದಂತೆ ಮಾಜಿ ಸಚಿವ ಹಾಗೂ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿಯನ್ನು ಪಕ್ಷದ ವರಿಷ್ಠರು ದೂರ ಇಟ್ಟ ಹಿನ್ನೆಲೆಯಲ್ಲಿ ರೆಡ್ಡಿ ತೀವ್ರ ಅಸಮಾಧಾನಗೊಂಡಿದ್ದಾರೆ. ಆದರೆ ಅವರ ಬಲಗೈ ಬಂಟನಂತಿರುವ ಸ್ನೇಹಿತ ಶ್ರೀರಾಮುಲು ಗೆಲ್ಲುವ ತನಕ ಸುಮ್ಮನೆ ಕೂರುವುದಿಲ್ಲ. ಬಳ್ಳಾರಿ ಮತ್ತು ಚಿತ್ರದುರ್ಗದ ಹಲವು ಕಾರ್ಯಕರ್ತರು ಮೊಳಕಾಲ್ಮೂರಿನಲ್ಲಿರುವ ರೆಡ್ಡಿ ಫಾರ್ಮ್ ಹೌಸ್ ನಲ್ಲಿ ಬೀಡು ಬಿಟ್ಟಿದ್ದಾರೆ. ಈ ವೇಳೆ ಜನಾರ್ಧನ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದು, ತಮ್ಮ ಸ್ನೇಹಿತ ಶ್ರೀರಾಮುಲು ಬಾದಾಮಿ ಮತ್ತು ಮೊಳಕಾಲ್ಮೂರು ಕ್ಷೇತ್ರಗಳಲ್ಲಿ ಗೆದ್ದೆ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಪ್ರ: ಬಳ್ಳಾರಿಯಿಂದ ದೂರುವಿರುವುದರಿಂದ ನಿಮ್ಮ ತವರು ಕ್ಷೇತ್ರದ ಮೇಲೆ ಹಿಡಿತ ತಪ್ಪುತ್ತಿದೆಯೇ?
ಉ: ಬಳ್ಳಾರಿಯಿಂದ ನನ್ನ ಶಕ್ತಿ ಮತ್ತು ಪ್ರಭಾವ ಮತ್ತಷ್ಟು ಹೆಚ್ಚುತ್ತಿದೆ ಇಲ್ಲಿರುವುದು ನನಗೆ ಹೆಚ್ಚು ಸಂತಸ ತಂದಿದೆ, ನನ್ನ ಹಿತೈಷಿಗಳ ಜೊತೆ ನಾನು ಯಾವಾಗಲೂ ಸಂಪರ್ಕದಲ್ಲಿರುತ್ತೇನೆ, ನಾನು ಯಾವಾಗಲೂ ಒಂಟಿ ಎಂದು ಕೊಳ್ಳುವುದಿಲ್ಲ, ಅಥವಾ ಅವರನ್ನು ಮಿಸ್ ಮಾಡಿಕೊಳ್ಳುವುದಿಲ್ಲ, ಎಲ್ಲಾ ಕೇಸುಗಳಲ್ಲಿ ನಾನು ಖುಲಾಸೆಯಾಗಿ ಆದಷ್ಟು ಶೀಘ್ರವೇ ಬಳ್ಳಾರಿಗೆ ಮರಳುತ್ತೇನೆ.
ಪ್ರ: ನೀವು ಇನ್ನೂ ಬಿಜೆಪಿಯಲ್ಲಿದ್ದೀರಾ? ಹಾಗೂ ಪಕ್ಷದ ಪರ ಪ್ರಚಾರ ಮಾಡುತ್ತೀರಾ?
ಉ: ನಾನು ಬಿಜೆಪಿಯನ್ನು ತೊರೆದಿಲ್ಲ ಎಂದ ಮೇಲೆ ಮತ್ತೆ ಪಕ್ಷ ಸೇರುವ ಪ್ರಶ್ನೆ ಎಲ್ಲಿ ಬರುತ್ತದೆ. ಬಾದಾಮಿ ಮತ್ತು ಮೊಳಕಾಲ್ಮೂರಿನಲ್ಲಿ ನನ್ನ ಸ್ನೇಹಿತ ಶ್ರೀರಾಮುಲು ಪರ ಪ್ರಚಾರ ಮಾಡುತ್ತೇನೆ, ಆತ ಎರಡು ಕ್ಷೇತ್ರಗಳಲ್ಲೂ ಜಯ ಸಾಧಿಸುತ್ತಾರೆ ಎಂಬ ಆತ್ಮ ವಿಶ್ವಾಸವಿದೆ.ಸಿಎಂ ಸಿದ್ದರಾಮಯ್ಯ ಅವರ ಅಹಂಕಾರ ಅಡಗಿಸಬೇಕು, ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು, ಅದಕ್ಕಾಗಿ ನಾನು ನನ್ನ ಶೈಲಿಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತೇನೆ.
ಪ್ರ: ನಿಮ್ಮ ಪ್ರಕಾರ ಬಿಜೆಪಿ ಎಷ್ಟು ಸೀಟುಗಳಲ್ಲಿ ಜಯ ಸಾಧಿಸಲಿದೆ? ಚಿತ್ರದುರ್ಗದಲ್ಲಿ ನಿಮ್ಮ ಟಾರ್ಗೆಟ್ ಏನು?
ಉ: ನನ್ನ ಸಮೀಕ್ಷೆ ಪ್ರಕಾರ ಬಿಜೆಪಿ 132 ಸೀಟುಗಳ ಬಹಮತ ಪಡೆಯುತ್ತದೆ. ಚಿತ್ರದುರ್ಗದಲ್ಲಿ ನಾವು 5 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ, ಆರನೇ ಸೀಟಿಗಾಗಿ ನಾವು ರಣತಂತ್ರ ರೂಪಿಸಬೇಕಿದೆ.
ಪ್ರ: ಕೊನೆಯ ಹಂತದಲ್ಲಿ ಮೋದಿ ಪ್ರಚಾರ ಚುನಾವಣೆ ಗೇಮ್ ಚೇಂಜ್ ಮಾಡುತ್ತದೆಯೇ?
ಉ: ಖಂಡಿತ, ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹು ದೊಡ್ಡ ಗೇಮ್ ಚೇಂಜರ್, ದೇಶದ ಯಶಸ್ವಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುವುದರಿಂದ ಬಿಜೆಪಿಯ ಮಿಷನ್-150 ಗೆ ನೆರವಾಗಲಿದೆ.
ಪ್ರ: ನಿಮ್ಮನ್ನು ಮತ್ತು ಯಡಿಯೂರಪ್ಪ ಅವರನ್ನು ಜೈಲುಹಕ್ಕಿಗಳೆಂದು ಸಿದ್ದರಾಮಯ್ಯ ಟೀಕಿಸಿದ್ದಾರಲ್ಲ? ಅದಕ್ಕೆ ನಿಮ್ಮ ಪ್ರತಿಕ್ರಿಯೆ?
ಉ: ಸಿದ್ದರಾಮಯ್ಯ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನನ್ನ ವಿರುದ್ಧದ ಶೇ,.90 ರ್ಷಟು ಕೇಸುಗಳು ಖುಲಾಸೆಯಾಗಿದ್ದು, ಉಳಿದ ಪ್ರಕರಣಗಳಲ್ಲೂ ನಾನು ಕ್ಲೀನ್ ಚಿಟ್ ಪಡೆಯತ್ತೇನೆ, ನನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು ಎಂದು ಸಾಬೀತು ಮಾಡುತ್ತೇನೆ, ಜೈಲು ವಾಸ ಹಾಗೂ ಕಾನೂನು ಹೋರಾಟ ಒಂದು ಕೆಟ್ಟ ಕನಸು, ಅದನ್ನು ನೆನಪಿಸಿಕೊಳ್ಳಲು ನಾನು ಇಷ್ಟ ಪಡುವುದಿಲ್ಲ.
ಪ್ರ: ಶ್ರೀರಾಮುಲು ರೈಸಿಂಗ್ ಸ್ಟಾರೆ್ ಎಂದು ಬಿಜೆಪಿ ಬಿಂಬಿಸುತ್ತಿದೆ, ಇದಕ್ಕೆ ಏನು ಹೇಳುತ್ತೀರಾ...?
ಉ: ನಾನು ಮತ್ತು ಶ್ರೀರಾಮುಲು ತುಂಬಾ  ಚಿಕ್ಕ ವಯಸ್ಸಿನಿಂದಲೂ ಸ್ನೇಹಿತರು.  ಈ ಹಂತ ತಲುಪುವ ಮುನ್ನ ನಾವು ಜೀವನದಲ್ಲಿ ಹಲವು ಏರಿಳಿತಗಳನ್ನು ನೋಡಿದ್ದೇವೆ, ಅಗತ್ಯ ಇರುವವರಿಗೆ ಸಹಾಯ ಹಾಗೂ ತುಳಿತಕ್ಕೊಳಗಾಗುವವರ ಜೊತೆ ಅವರಿರುತ್ತಾರೆ. ಶ್ರೀರಾಮಲು ರಾತ್ರೋರಾತ್ರಿ ನಾಯಕರಾದವರಲ್ಲ, ಬಳ್ಳಾರಿ ಕಾರ್ಪೋರೇಟರ್ ಆಗಿದ್ದವರು, ನಂತರ ಶಾಸಕ, ಸಚಿವ ಹಾಗೂ ಸಂಸದರಾಗಿದ್ದವರು. ಅವರು ಹುಟ್ಟು ನಾಯಕರು, ರಾಜ್ಯದ ಹಲವು  ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ಶ್ರೀರಾಮುಲು ಮೇಲಿದೆ,
ಪ್ರ: ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೇ ಜನಾರ್ದನ ರೆಡ್ಡಿ ಸಕ್ರಿಯ ರಾಜಕಾರಣದಲ್ಲಿ ಪಾಲ್ಗೋಳ್ಳುತ್ತಾರಾ?
ಉ: ಬಿಜೆಪಿ ಅಧಿಕಾರಕ್ಕೆ ಬರಲು ಹಾಗೂ ಶ್ರೀರಾಮುಲು ಗೆಲ್ಲಬೇಕೆಂಬ ಉದ್ದೇಶದಿಂದ ನಾನು ಇಲ್ಲಿದ್ದೇನೆ. ರಾಜಕೀಯ ಮತ್ತು ಸಾಮಾಜಿಕ ಜೀವನಗಳಲ್ಲಿ ನನಗೆ ಅನುಭವ ದೊರೆತಿದೆ. ನನಗೆ ಸಕ್ರಿಯ ರಾಜಕಾರಣಕ್ಕೆ ಬರುವ ಯಾವುದೇ ಅಭಿಲಾಷೆಯಿಲ್ಲ. ಸಮಾಜ ಸೇವೆಗಳಿಗೆ ನನ್ನನ್ನು ತೊಡಗಿಸಿಕೊಳ್ಳುತ್ತೇನೆ.
ಪ್ರ: ಶ್ರೀರಾಮುಲು ಅವರಿಗೆ ಮೊಳಕಾಲ್ಮೂರು ಕ್ಷೇತ್ರವನ್ನೇ ಆಯ್ದುಕೊಳ್ಳಲು ಕಾರಣವೇನು?
ಉ: ಹಲವು ವರ್ಷಗಳಿಂದ ಮೊಳಕಾಲ್ಮೂರು ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ, ಮೊಳಾಕಾಲ್ಮೂರು ಬಳ್ಳಾರಿಗೆ ಸಮೀಪವಾಗಿದೆ,ಬಳ್ಳಾರಿ ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ರಾಯಚೂರುಗಳು ಸುತ್ತಮುತ್ತಲಿದ್ದು, ಶ್ರೀರಾಮುಲು ಗೆಲುವಿಗೆ ಸಹಾಯ ಮಾಡುತ್ತದೆ.
ಪ್ರ: ಮೊಳಕಾಲ್ಮೂರು ಕ್ಷೇತ್ರ ಗೆದ್ದರೇ  ಹೇಗೆ ತಾಲೂಕನ್ನು ಅಭಿವೃದ್ಧಿ ಪಡಿುಸುತ್ತೀರಿ?
ಉ: ಮೂಲಭೂತ ಸೌಕರ್ಗಳ ಅಭಿವೃದ್ಧಿಗೆ ಮೊದಲ ಆದ್ಯತೆ, ಮೊಳಕಾಲ್ಮೂರನ್ನು ಇಡಿ ರಾಜ್ಯದಲ್ಲಿ ಮಾದರಿ ತಾಲೂಕನ್ನಾಗಿ ಪರಿವರ್ತಿಸುತ್ತೇವೆ, ಪ್ರಮುಖ ನೀರಾವರಿ ಯೋಜನೆಗಳಾದ ಸಮಸ್ಯೆಗಳನ್ನು ಬಗೆಹರಿಸಿ, ರಸ್ತೆ ಸರಿಪಡಿಸುತ್ತೇವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.