ರಾಜಕೀಯ

ಚುನಾವಣೆ ಗೆಲುವಿಗಾಗಿ ಯಾಗಕ್ಕೆ ಮೊರೆ ಹೋದ ಮುಖ್ಯಮಂತ್ರಿ ಕುಟುಂಬ

ಮೂಢನಂಬಿಕೆಗಳ ವಿರುದ್ಧ ಮೌಢ್ಯ ನಿಷೇಧ ಕಾಯ್ದೆಯ ಅಸ್ತ್ರ ಬಿಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ, ಚುನಾವಣೆ ಗೆಲುವಿಗಾಗಿ ಯಜ್ಞ, ಯಾಗದ ಮೊರೆ ಹೋಗಿದೆ.

ಚುನಾವಣೆ  ಗೆಲುವಿಗಾಗಿ ಯಾಗಕ್ಕೆ ಮೊರೆ ಹೋದ ಮುಖ್ಯಮಂತ್ರಿ ಕುಟುಂಬ
ಸಿಎಂ ಸಿದ್ದರಾಮಯ್ಯ
Published On :

ಮಂಗಳೂರು: ಮೂಢನಂಬಿಕೆಗಳ ವಿರುದ್ಧ ಮೌಢ್ಯ ನಿಷೇಧ ಕಾಯ್ದೆಯ ಅಸ್ತ್ರ ಬಿಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ, ಚುನಾವಣೆ ಗೆಲುವಿಗಾಗಿ ಯಜ್ಞ, ಯಾಗದ ಮೊರೆ ಹೋಗಿದೆ.

ಸಿದ್ದರಾಮಯ್ಯ ಸ್ಪರ್ಧಿಸಿರುವ ಚಾಮುಂಡೇಶ್ವರಿ ಹಾಗೂ ಬದಾಮಿ ಎರಡು ಕ್ಷೇತ್ರಗಳಲ್ಲಿ ಕಠಿಣ ಸವಾಲು ಎದುರಾಗಿರುವುದರಿಂದ  ಕೇರಳ ಹಾಗೂ ಉಡುಪಿಯ ಜ್ಯೋತಿಷಿಗಳ  ಸಲಹೆ ಪರಿಗಣಿಸಿ  ದೇವರ ಮೊರೆ ಹೋಗಿದ್ದಾರೆ.

ಕಳೆದ 15 ದಿನಗಳಿಂದ ಮುಖ್ಯಮಂತ್ರಿ ಗೆಲುವಿಗೆ ಹಾಗೂ ದೋಷ ನಿವಾರಣೆಗಾಗಿ ರಾಜ್ಯ ಹಾಗೂ ಕೇರಳದಲ್ಲಿ ವಿವಿಧ ಯಜ್ಞ ಯಾಗಗಳನ್ನು ಸಿಎಂ ಕುಟುಂಬ ಸದಸ್ಯರು ನಡೆಸಿಕೊಂಡು ಬಂದಿದ್ದಾರೆ.

ಸಿಎಂ ಪತ್ನಿ ಕೇರಳ, ನಂಜನಗೂಡು ಹಾಗೂ ಬೆಂಗಳೂರಿನ ವಿವಿಧೆಡೆ  ಮೂರು ನಾಲ್ಕು ದಿನದಿಂದ  ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ.

ಕಾರಿನ ಮೇಲೆ  ಕಾಗೆ ಕುಳಿತ ಬಳಿಕ ಸಿಎಂ ಮನೆಯವರು ಕೇರಳದ ಜ್ಯೋತಿಷಿಗಳನ್ನು ಸಂಪರ್ಕಿಸಿದ್ದು, ಅವರು ಹಲವು ದೋಷ ನಿವಾರಣಾ ಕ್ರಮಗಳನ್ನು ಸೂಚಿಸಿದ್ದರು. ಇದರಂತೆ ಆಗ ಕೆಲವೊಂದು ಧಾರ್ಮಿಕ  ಕ್ರಮಗಳನ್ನು ನಡೆಸಿದ್ದರು.

ಈಗ ಮತ್ತೆ ಚುನಾವಣೆಯಲ್ಲಿ ಎದುರಾಗಿರುವ ಸಂಕಟ ನಿವಾರಿಸಲು ಉಡುಪಿ, ಕೇರಳ  ಮೂಲದ ಜ್ಯೋತಿಷಿಗಳ ಸಲಹೆಯಂತೆ ಮತ್ತಷ್ಟು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಶುಕ್ರವಾರ ನಂಜನಗೂಡಿನಲ್ಲಿ  ಪೂರ್ಣ ನವಗ್ರಹ ಶಾಂತಿ ಹೋಮ ನಡೆಸಲಾಗಿದೆ. ಆದರೆ. ಸಿಎಂ ಸಿದ್ದರಾಮಯ್ಯ ಉಪಸ್ಥಿತರಿರಲಿಲ್ಲ. ಪತ್ನಿ ಹಾಗೂ ಕುಟುಂಬದ ಕೆಲ ಸದಸ್ಯರು ಭಾಗವಹಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.