ಬಿಜೆಪಿಯವರು ಸಂವಿಧಾನ ವಿರೋಧಿಗಳು ಮಾತ್ರವಲ್ಲ, ಮನುಷ್ಯ ವಿರೋಧಿಗಳೂ ಕೂಡ: ಸಿಎಂ ಸಿದ್ದರಾಮಯ್ಯ
ಬಿಜೆಪಿ ನಾಯಕರು ಸಂವಿಧಾನ ವಿರೋಧಿಗಳು ಮಾತ್ರರಲ್ಲ, ಮನುಷ್ಯ ವಿರೋಧಿಗಳೂ ಕೂಡ.. ಸದಾಕಾಲ ಕರಾವಳಿಯಲ್ಲಿ ಕೋಮು ಸೌಹಾರ್ಧ ಕದಡಲು ಪ್ರಯತ್ನಿಸುತ್ತಿರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Published On :
ಮಂಗಳೂರು: ಬಿಜೆಪಿ ನಾಯಕರು ಸಂವಿಧಾನ ವಿರೋಧಿಗಳು ಮಾತ್ರರಲ್ಲ, ಮನುಷ್ಯ ವಿರೋಧಿಗಳೂ ಕೂಡ.. ಸದಾಕಾಲ ಕರಾವಳಿಯಲ್ಲಿ ಕೋಮು ಸೌಹಾರ್ಧ ಕದಡಲು ಪ್ರಯತ್ನಿಸುತ್ತಿರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಗೂ ಮುನ್ನ ಸರಣಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, "ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯ 19 ಕ್ಷೇತ್ರಗಳಲ್ಲಿ13 ರಲ್ಲಿ ಕಾಂಗ್ರೆಸ್ ಗೆದ್ದಿದೆ. ದಕ್ಷಿಣಕನ್ನಡದಲ್ಲಿ 7(8), ಉಡುಪಿಯಲ್ಲಿ 3(5) ಮತ್ತು ಉತ್ತರ ಕನ್ನಡದಲ್ಲಿ 3(6). ಉ.ಕನ್ನಡದ ಇಬ್ಬರು ಪಕ್ಷೇತರ ಶಾಸಕರು ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಕರಾವಳಿ ಜಾತ್ಯತೀತರ ನೆಲೆ. ಕಳೆದ ಚುನಾವಣಾ ಪ್ರಚಾರದ ಕಾಲದಲ್ಲಿ ನರೇಂದ್ರಮೋದಿಯವರೇ ಕರಾವಳಿ ಭಾಗಕ್ಕೆ ಬಂದು ಕೋಮುಭಾವನೆಯ ಬೆಂಕಿ ಉಗುಳುವ ಭಾಷಣ ಮಾಡಿ ಹೋಗಿದ್ದರು. ಆದರೆ ಮೂರೂ ಜಿಲ್ಲೆಗಳಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿರುವುದು ಕೇವಲ ನಾಲ್ಕು ಸ್ಥಾನ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ 'ಕರಾವಳಿಯಲ್ಲಿ ಉಗ್ರಗಾಮಿಗಳಿದ್ದಾರೆ.. ಜೆಹಾದಿಗಳಿದ್ದಾರೆ.. ಎಂದು ಬಿಜೆಪಿ ನಾಯಕರು ತಮ್ಮದೇ ಊರಿನ, ರಾಜ್ಯದ ಮಾನ ಕಳೆಯುತ್ತಿದ್ದಾರೆ. ಇದು ಊರಿಗೆ, ಜನತೆಗೆ ಮಾಡುವ ಅವಮಾನ. ಜನ ಸೌಹಾರ್ದಪ್ರಿಯರು ಜಾತ್ಯತೀತರು ಮತ್ತು ದೇಶಪ್ರೇಮಿಗಳು. ಇಲ್ಲಿ ಇಂದು ಕಾಂಗ್ರೆಸ್, ಮುಂದೆಯೂ ಕಾಂಗ್ರೆಸ್. ದಕ್ಷಿಣ ಕನ್ನಡದ ಏಳು ಕಾಂಗ್ರೆಸ್ ಶಾಸಕರಲ್ಲಿ ಇಬ್ಬರು ಮುಸ್ಲಿಮರು, ಒಬ್ಬರು ಕ್ರಿಶ್ಚಿಯನ್ ಮತ್ತು ಒಬ್ಬರು ಜೈನರು, ನಾಲ್ವರೂ ಅಲ್ಪಸಂಖ್ಯಾತ ಸಮುದಾಯದವರು. ಬಹುಸಂಖ್ಯಾತ ಹಿಂದೂಗಳು ಕೋಮುವಾದಿಗಳಾಗಿದ್ದರೆ ಇದು ಸಾಧ್ಯವಿತ್ತೇ?.
'ಬಿಜೆಪಿ ನಾಯಕರಿಗೆ ಜನ ನೆಮ್ಮದಿಯಿಂದ ಬದುಕುವುದು ಬೇಕಿಲ್ಲ. ಅವರಿಗೆ ಜನ ಹೊಡೆಯಬೇಕು, ಕಡಿಯಬೇಕು, ಬೆಂಕಿ ಇಡಬೇಕು, ಅಮಾಯಕರು ಸಾಯುವ ಬೆಂಕಿಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿ ಕೊಳ್ಳಬೇಕು. ಇದು ಸಾವಿನ ರಾಜಕಾರಣ. ನಮ್ಮದು ಜನರಿಗೆ ಅನ್ನ, ಹಾಲು, ಮನೆ, ಔಷಧ, ಉದ್ಯೋಗ ಕೊಡುವ ಬದುಕಿನ ರಾಜಕಾರಣ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಸಂವಿಧಾನ ವಿರೋಧಿಗಳು ಮಾತ್ರವಲ್ಲ, ಮನುಷ್ಯ ವಿರೋಧಿಯಾಗಿರುವ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಜನ ತಪ್ಪು ಮಾಡಿಬಿಟ್ಟರು. ಈ ಬಾರಿ ಮೈಮರೆತು ತಪ್ಪುಮಾಡಬೇಡಿ. ಜಾತ್ಯತೀತರು ನಮ್ಮಲ್ಲಿ ಬಹುಸಂಖ್ಯೆಯಲ್ಲಿದ್ದಾರೆ ಕೋಮುವಾದಿಗಳ ಸಂಖ್ಯೆ ಸಣ್ಣದು. ಕೋಮುವಾದದ ಹುಟ್ಟಡಗಿಸಬೇಕಾದರೆ ಜಾತ್ಯತೀತವಾದಿಗಳು ಸಂಘಟಿತರಾಗಿ ದನಿ ಎತ್ತಬೇಕು. ಒಡೆಯುವ ಪ್ರಯತ್ನ ನಡೆದಾಗ ಕಟ್ಟುವ ಕೈಗಳೆಲ್ಲ ಒಂದಾಗಬೇಕು. ಮನುಷ್ಯಪರವಾದ ಸಮಾಜವನ್ನು ಕಟ್ಟಲು ಕೈಜೋಡಿಸಬೇಕು ಎಂದು ಸಿದ್ದರಾಮಯ್ಯ ಕರಾವಳಿ ಜನತೆಯಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್MANGALURUಮಂಗಳೂರುPoliticsರಾಜಕೀಯTwitterSiddaramaiahಸಿದ್ದರಾಮಯ್ಯಟ್ವಿಟರ್Karnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


