ಅಂಬರೀಶ್ ಜೆಡಿಎಸ್ ಸೇರುವುದಾದರೆ ಅವರಿಗೆ ಸ್ವಾಗತ: ಎಚ್.ಡಿ. ಕುಮಾರಸ್ವಾಮಿ
ಮಾಜಿ ಸಚಿವ, ನಟ ಅಂಬರೀಶ್ ಜೆಡಿಎಸ್ ಗೆ ಬರುವುದೆಂದಾದರೆ ಅವರಿಗೆ ಆತ್ಮೀಯ ಸ್ವಾಗತವಿದೆ" ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Published On :
ಮಂಡ್ಯ: "ಮಾಜಿ ಸಚಿವ, ನಟ ಅಂಬರೀಶ್ ಜೆಡಿಎಸ್ ಗೆ ಬರುವುದೆಂದಾದರೆ ಅವರಿಗೆ ಆತ್ಮೀಯ ಸ್ವಾಗತವಿದೆ" ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮದ್ದೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ್ದ ಕುಮಾರಸ್ವಾಮಿ "ಅಂಬರಿಶ್ ಗೆ ಪಕ್ಷಕ್ಕೆ ಸೇರ್ಪಡೆಯಾಗುವ ಇಚ್ಚೆ ಇದ್ದಲ್ಲಿ ನಾವು ಅವರನ್ನು ಸ್ವಾಗತಿಸಲು ಸಿದ್ದರಿದೇವೆ. ಅಗತ್ಯವಾದಲ್ಲಿ ಅವರ ಮನೆಗೆ ತೆರಳಿ ಭೇಟಿಯಾಗುತ್ತೇನೆ." ಎಂದರು.
"ಅಂಬರೀಶ್ ತಾವೆಲ್ಲಿಯೂ ಜೆಡಿಎಸ್ ಸೇರ್ಪಡೆಯಾಗುತ್ತೇನೆಂದು ಹೇಳಿಲ್ಲ. ಆರೋಗ್ಯ ಸಮಸ್ಯೆ ಇರುವ ಕಾರಣ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಅವರು ದೇವೇಗೌಡರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದದ್ದಾರೆ"
ಅಂಬರೀಶ್ ಪಕ್ಷ ಸೇರ್ಪಡೆಗೆ ಆಸಕ್ತರಾಗಿದ್ದರೆ ಅವರಿಗೆ ಸ್ವಾಗತವಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕಲ್ಪನಾ ಸಿದ್ದರಾಜು ಅವರೊಡನೆ ಮಾತುಕತೆಗಾಗಿ ಮದ್ದೂರಿಗೆ ಆಗಮಿಸಿದ್ದ ಕುಮಾರಸ್ವಾಮಿ ಮಾದ್ಯಮದವರೊಂದಿಗೆ ಮಾತನಾಡಿದ್ದಾರೆ.
ಕಲ್ಪನಾ ಸಿದ್ದರಾಜು ಕೆಲ ಸಮಯದಿಂದ ಪಕ್ಷ ಚಟುವಟಿಕೆಗಳಿಂದ ದೂರವಿದ್ದರು. ಆದರೆ ಈಗ ಮತ್ತೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ಅವರಿಗೆ ಪಕ್ಷ ಉತ್ತಮ ಸ್ಥಾನ ಮಾನವನ್ನು ನಿಡಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್JDSಜೆಡಿಎಸ್HD Kumaraswamyambarishಅಂಬರೀಶ್Karnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆಎಚ್.ಡಿ.ಮಾರಸ್ವಾಮಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


