ರಾಜಕೀಯ

'ಇನ್ನೂ 5 ವರ್ಷ ಬರೊಲ್ಲ, ಏನಿವಾಗ..'; ಕಾರ್ಯಕರ್ತನ ಪ್ರಶ್ನೆಗೆ ಸಚಿವ ಲಾಡ್ ಉಡಾಫೆ ಉತ್ತರ!

ಇಷ್ಟು ದಿನ ಕ್ಷೇತ್ರಕ್ಕೆ ಏಕೆ ಬಂದಿಲ್ಲ ಎಂಬ ಕಾರ್ಯಕರ್ತನ ಪ್ರಶ್ನೆಗೆ ಸಚಿವ ಲಾಡ್ ನೀಡಿರುವ ಉಡಾಫೆ ಉತ್ತರ ಕಾರ್ಯಕರ್ತರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

'ಇನ್ನೂ 5 ವರ್ಷ ಬರೊಲ್ಲ, ಏನಿವಾಗ..'; ಕಾರ್ಯಕರ್ತನ ಪ್ರಶ್ನೆಗೆ ಸಚಿವ ಲಾಡ್ ಉಡಾಫೆ ಉತ್ತರ!
ಸಂಗ್ರಹ ಚಿತ್ರ
Published On :
ಹುಬ್ಬಳ್ಳಿ: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕ್ಷೇತ್ರಕ್ಕೆ ಆಗಮಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ವಾಗ್ವಾದ ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಇಷ್ಟು ದಿನ ಕ್ಷೇತ್ರಕ್ಕೆ ಏಕೆ ಬಂದಿಲ್ಲ ಎಂಬ ಕಾರ್ಯಕರ್ತನ ಪ್ರಶ್ನೆಗೆ ಸಚಿವ ಲಾಡ್ ನೀಡಿರುವ ಉಡಾಫೆ ಉತ್ತರ ಕಾರ್ಯಕರ್ತರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ಹುಬ್ಬಳ್ಳಿಯ ಕಲಘಟಗಿ ವಿಧಾಸಭೆ ಕ್ಷೇತ್ರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಘಟನೆ ನಡೆದಿದೆ. ಕಾರ್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ, 'ನಾನು ಇನ್ನೂ 5 ವರ್ಷ ಕ್ಷೇತ್ರಕ್ಕೆ ಬರೊಲ್ಲ. ನಾನು ಬರದಿದ್ರೆ ನಿಮಗೇನು ತೊಂದರೆ' ಎಂದು ಕಲಘಟಗಿ ವಿಧಾಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸಚಿವ ಸಂತೋಷ್​ ಲಾಡ್​ ಕಾರ್ಯಕರ್ತರ ಪ್ರಶ್ನೆಗೆ ದರ್ಪದಿಂದ ಉತ್ತರಿಸಿದ್ದಾರೆ.
ಕಲಘಟಗಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರೊಬ್ಬರು ನೀವು ಐದು ವರ್ಷಕ್ಕೊಮ್ಮೆ ಕ್ಷೇತ್ರಕ್ಕೆ ಬಂದರೆ ಕಷ್ಟ ಎಂದು ಪ್ರಶ್ನಿಸಿದರು. ಇದಕ್ಕೆ ಉದ್ಧಟತನದಿಂದ ಪ್ರತಿಕ್ರಿಯಿಸಿದ ಲಾಡ್​ ನಿನ್ನ ಸಮಸ್ಯೆಗಳ ಪಟ್ಟಿ ಕೊಡು, ನಾನು ಇನ್ನೂ 5 ವರ್ಷ ಕ್ಷೇತ್ರಕ್ಕೆ ಬರುವುದಿಲ್ಲ ಎಂದು ಧಿಮಾಕಿನಿಂದ ಉತ್ತರಿಸಿದ್ದಾರೆ. ಸಂತೋಷ್​ ಲಾಡ್​ ಉದ್ಧಟತನದ ಉತ್ತರ ಕಂಡು ಕಾರ್ಯಕರ್ತರು ದಂಗಾಗಿದ್ದಾರೆ. ಸಂತೋಷ್​ ಲಾಡ್​ ಕಾರ್ಯಕರ್ತರಿಗೆ ಗದರಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಇನ್ನು 2013ರಲ್ಲಿ ಕ್ಷೇತ್ರಗಳ ವಿಂಗಡಣೆ ಬಳಿಕ ಸಂತೋಷ್ ಲಾಡ್ ತಮ್ಮ ತವರು ಬಳ್ಳಾರಿಯ ಸಂಡೂರು ಬಿಟ್ಟು ಹುಬ್ಬಳ್ಳಿಯ ಕಲಘಟಗಿ ಕ್ಷೇತ್ರದಿಂದ ಸ್ಪರ್ದೆ ಮಾಡಿದ್ದರು. ಅಂದು ಗೆದ್ದಿದ್ದ ಸಂತೋಷ್ ಲಾಡ್ ಸಚಿವರೂ ಕೂಡ ಆಗಿದ್ದಾರೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಆಗಿರುವ ಲಾಡ್ ಉತ್ತರ ಕೇಳಿ ಕಾರ್ಯಕರ್ತರು ಕಂಗಾಲಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.