ಸಿಎಂ ಸಿದ್ದರಾಮಯ್ಯ ಕಾದರೂ ಕೈಗೆ ಸಿಗದ ರೆಬಲ್ ಸ್ಟಾರ್ ಅಂಬರೀಷ್
ಟಿಕೆಟ್ ಸಿಕ್ಕರೂ ಇನ್ನೂ ತಮ್ಮ ಸ್ಪರ್ಧೆ ಕುರಿತು ಗುಟ್ಟುಬಿಟ್ಟುಕೊಡದ ಅಂಬರೀಷ್ ಅವರು ಕಾಂಗ್ರೆಸ್ ನಾಯಕರಿದೆ ದೊಡ್ಡ ತಲೆನೋವನ್ನು ತಂದಿಟ್ಟಿದ್ದಾರೆ...

Published On :
ಮೈಸೂರು: ಟಿಕೆಟ್ ಸಿಕ್ಕರೂ ಇನ್ನೂ ತಮ್ಮ ಸ್ಪರ್ಧೆ ಕುರಿತು ಗುಟ್ಟುಬಿಟ್ಟುಕೊಡದ ಅಂಬರೀಷ್ ಅವರು ಕಾಂಗ್ರೆಸ್ ನಾಯಕರಿದೆ ದೊಡ್ಡ ತಲೆನೋವನ್ನು ತಂದಿಟ್ಟಿದ್ದಾರೆ.
ಅಂಬರೀಷ್ ಅವರ ಭೇಟಿಗಾಗಿ ಸ್ವತಃ ಸಿದ್ದರಾಮಯ್ಯ ಅವರೇ ಕಾದು ಕುಳಿತರೂ, ಸಿಎಂಗೂ ಸಿಗದ ಅಂಬರೀಷ್ ಕಾಂಗ್ರೆಸ್ ಶಾಕ್ ನೀಡಿದ್ದಾರೆ.
ಭಾನುವಾರ ಕೂಡಾ ಹೈ ಡ್ರಾಮಾ ಮುಂದುವರೆದಿತ್ತು. ಶನಿವಾರ ಸಿಎಂ ನಿವಾಸಕ್ಕೆ ತೆರಳದೇ ಹಾಗೂ ಯಾರನ್ನೂ ಭೇಟಿಯಾಗದೇ ಮೈಸೂರಿಗೆ ಅಂಬರೀಷ್ ತೆರಳಿದ್ದರು. ಅಂಬರೀಷ್ ಮೈಸೂರಿಗೆ ಆಗಮಿಸಿದ್ದ ಸುದ್ದಿ ಕೇಳಿ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಅವರನ್ನು ಭೇಟಿಯಾಗಲು ಭಾನುವಾರ ಇಡೀ ದಿನ ಸತತವಾಗಿ ಪ್ರಯತ್ನಪಟ್ಟರು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಭಾನುವಾರ ಮೈಸೂರಿನಲ್ಲಿಯೇ ಇದ್ದರು. ಈ ಇಬ್ಬರೂ ನಾಯಕರ ಭೇಟಿಯಾಗುವ ಸಾಧ್ಯತೆಗಳಿವೆ ಎಂದೇ ಹೇಳಲಾಗುತ್ತಿತ್ತು.
ಅಂಬರೀಷ್ ಭೇಟಿಗೆ ಬಂದರೆ ಅವರನ್ನು ಭೇಟಿ ಮಾಡಲು ಸಿದ್ದರಾಮಯ್ಯ ಅವರು ಸಿದ್ಧರಿದ್ದರು ಎಂದು ಬಲ್ಲ ಮೂಲಗಳು ಮಾಹಿತಿ ನೀಡಿದ್ದವು. ಆದರೆ, ಅಂಬರೀಷ್ ಸಿಎಂ ಭೇಟಿಗೂ ಹೋಗಲಿಲ್ಲ. ಅಷ್ಟೇ ಅಲ್ಲ, ಕಾರ್ಯಕರ್ತರು, ಬೆಂಬಲಿಗರೂ ಕಾಯುತ್ತಿದ್ದಾರೆಂದು ಎಂದು ತಿಳಿದಿದ್ದರೂ ಯಾರನ್ನೂ ಭೇಟಿ ಮಾಡದೆ ಸಂಜೆ ವೇಳೆಗೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಹೀಗಾಗಿ ಯಾವ ಚರ್ಚೆಯೂ ನಡೆಯದೇ ಅಂಬರೀಷ್ ಸ್ಪರ್ಧಿಸುವರೋ, ಇಲ್ಲವೋ ಎಂಬುದು ಭಾನುವಾರ ಕೂಡ ಸ್ಪಷ್ಟವಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್Siddaramaiahಸಿದ್ದರಾಮಯ್ಯಅಂಬರೀಷ್ಮಂಡ್ಯMandyaAmbareeshKarnataka Assembly Electionಕರ್ನಾಟಕ ವಿಧಾನಸಭಾ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


