ರಾಜಕೀಯ

ಅಮಿತ್ ಶಾ ಸನಾತನ ಹಿಂದು: ಸಿದ್ದರಾಮಯ್ಯ ಟೀಕೆಗೆ ಜಾವಡೇಕರ್ ಸ್ಪಷ್ಟನೆ

ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು 'ಸನಾತನ ಹಿಂದೂ' ಎನ್ನುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಹೇಳಿದ್ದಾರೆ.

ಅಮಿತ್ ಶಾ ಸನಾತನ ಹಿಂದು: ಸಿದ್ದರಾಮಯ್ಯ ಟೀಕೆಗೆ ಜಾವಡೇಕರ್ ಸ್ಪಷ್ಟನೆ
ಪ್ರಕಾಶ್ ಜಾವಡೇಕರ್
Published On :
ಬೆಂಗಳೂರು: ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು 'ಸನಾತನ ಹಿಂದೂ'  ಎನ್ನುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಹೇಳಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ "ಶಾ ಹಿಂದೂ ಅಲ್ಲ" ಎನ್ನುವ ಹೇಳಿಕೆಗೆ ಪ್ರತಿಯಾಗಿ ಜಾವಡೇಕರ್ ಈ ಸ್ಪಷ್ಟನೆ ನಿಡಿದ್ದಾರೆ. "ಅಮಿತ್ ಶಾ ಹಾಗೂ ಅವರ ಪಿಳಿಗೆಯವರೆಲ್ಲರೂ ಸನಾತನ ಹಿಂದೂಗಳಾಗಿದ್ದಾರೆ" ಜಾವಡೇಕರ್ ಎಎನ್ಐಗೆ ತಿಳಿಸಿದರು.
"ಚುನಾವಣೆಯಲ್ಲಿ ಸೋಲುವ  ಭಯವಿದ್ದ ಸಿದ್ದರಾಮಯ್ಯ ಅಮಿತ್ ಶಾ ಅವರ ಬಗ್ಗೆ ಕೆಟ್ಟ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಹಿಂದೂ ಅಲ್ಲ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷ ಮೂಲ ವರ್ತನೆಯನ್ನು ಬಹಿರಂಗವಾಗಿಸಿದೆ" ಸಿದ್ದರಾಮಯ್ಯ  ಹೇಳಿಕೆಯನ್ನು ಖಂಡಿಸಿದ ಕೇಂದ್ರ ಸಚಿವರು ಹೇಳಿದ್ದಾರೆ.
ಇಂದು ಬೆಳಿಗ್ಗೆ ಮೈಸೂರಿನಲ್ಲಿ ಮಾದ್ಯಮಗೋಷ್ಠಿ ನಡೆಸಿದ್ದ ಸಿದ್ದರಾಮಯ್ಯ "ಅಮಿತ್ ಶಾ ನಾನು (ಸಿದ್ದರಾಮಯ್ಯ) ಹಿಂದೂ ಅಲ್ಲ ಎನ್ನುತ್ತಾರೆ. ಆದರೆ ಸತ್ಯ ಹೇಳಬೇಕೆಂದರೆ ಅವರೇ ಹಿಂದೂ ಧರ್ಮೀಯರಲ್ಲ. ಅವರು ಜೈನರು. ಶಾ ಹಿಂದುತ್ವದ  ಬಗ್ಗೆ ಒಲವಿದ್ದವರಿರಬಹುದು ಆದರೆ ಅವರು ’ತಾನು ಹಿಂದೂ, ಜೈನನಲ್ಲ’ ಎಂದು ಬಹಿರಂಗವಾಗಿ ಹೇಳಲಿ" ಎಂದು ಸವಾಲು ಹಾಕಿದ್ದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾ ರಾಜ್ಯದ ನಾನಾ ಕಡೆ ರೋಡ್ ಶೋ ಸೇರಿ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಶಾ ತಮ್ಮ ಪ್ರಚಾರ, ಸಾರ್ವಜನಿಕ ಸಭೆಗಳ ಮೂಲಕ ಜನರನ್ನು ಒಲಿಸಿಕೊಳ್ಳುತ್ತಿದ್ದು ಕರ್ನಾಟಕವನ್ನು ಸಹ ಕಾಂಗ್ರೆಸ್ ಮುಕ್ತವಾಗಿಸಲಿದ್ದಾರೆ, ಜಾವಡೇಕರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.