ರಾಜಕೀಯ

ರಾಜ್ಯದಲ್ಲಿ ಮೋದಿ ಅಲೆ ನಡೆಯಲ್ಲ, ಪ್ರಧಾನಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ: ವೀರಪ್ಪ ಮೊಯ್ಲಿ

ಕರ್ನಾಟಕ ವಿಧಾನಸಭೆ ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರ ಬಿರುಸುಗೊಳ್ಳುತ್ತಿದೆ. ಈ ಸಂಬಂಧ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ....

ರಾಜ್ಯದಲ್ಲಿ ಮೋದಿ ಅಲೆ ನಡೆಯಲ್ಲ, ಪ್ರಧಾನಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ: ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ
Published On :
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರ ಬಿರುಸುಗೊಳ್ಳುತ್ತಿದೆ. ಈ ಸಂಬಂಧ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ  ವೀರಪ್ಪ ಮೊಯ್ಲಿ ಕರ್ನಾಟಕದಲ್ಲಿ ಮೂರು ಪಕ್ಷಗಳ ನಡುವೆ ಕಠಿಣ ಹೋರಾಟವಿರಲಿದ್ದು ಕಾಂಗ್ರೆಸ್ ಯಾವ ಕಾರಣಕ್ಕೂ ಜೆಡಿಎಸ್ ನೊಡನೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಬಳ್ಳಾರಿಯಲ್ಲಿ ಗಾಲಿ ಜನಾರ್ಧನ ರೆಡ್ಡಿ ಸೋದರರಿಗೆ ಭಾರತೀಯ ಜನತಾ ಪಕ್ಷ ಟಿಕೆಟ್ ನೀಡಿರುವುದನ್ನು ಟೀಕಿಸಿದ ಮೋದಿ "ಕರ್ನಾಟಕದ ಪ್ರಮುಖ ವಿರೋಧ ಪಕ್ಷ ಬಿಜೆಪಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದರ ಕುರಿತಂತೆ ನಂಬಿಕೆ ಹೊಂದಿಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ" ಎಂದಿದ್ದಾರೆ.
224 ಸದಸ್ಯ ಬಲದ ವಿಧಾನಸಭೆಗೆ ಮೇ 12ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಇದಾಗಲೇ 218 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ  
"ಈ ಚುನಾವಣೆ ಗೆಲುವು ಅಷ್ಟೇನೂ ಸರಳವಾದದ್ದಲ್ಲ, ಈ ಚುನಾವಣೆ ಹಾಗು ಯುದ್ಧ ಎರಡೂ ಒಂದೇ ಆಗಿದೆ.ನಾವು ಕಠಿಣ ಹೋರಾಟಕ್ಕೆ ಸಿದ್ದರಾಗಿದ್ದೇವೆ. ನಾವು ಗೆಲ್ಲುತ್ತೇವೆನ್ನುವ ಭರವಸೆ ಇದೆ.ರಾಜ್ಯದ ಪ್ರತಿ ಶಾಸಕ ಸ್ಥಾನಕ್ಕೂ ನಾವು ಸ್ಪರ್ಧೆ ನೀಡಬಲ್ಲೆವು" ಮೊಯ್ಲಿ ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಸರಳ ಬಹುಮತ ಗಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮೊಯ್ಲಿ ನಾವು ಚುನಾವಣೆ ಬಳಿಕ ಜೆಡಿಎಸ್ ಬೆಂಬಲಕ್ಕಾಗಿ ನೋಡುವ ಪ್ರಶ್ನೆ ಇಲ್ಲ. ಕಳೆದ ಐದು ವರ್ಷದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನಿಡಿದೆ.ಹೀಗಾಗಿ ಯಾವ ಸಮೀಕ್ಷೆಯಂತೆ ಫಲಿತಾಂಶ ಬರದೆ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ಅವರು ಹೇಳಿದ್ದಾರೆ.
2004ರಲ್ಲಿ ಕಾಂಗ್ರೆಸ್ ಜೆಡಿಎಸ್ ನೊಡನೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ದು ಈ ಸರ್ಕಾರ ಕೇವಲ ಇಪ್ಪತ್ತು ತಿಂಗಳಲ್ಲಿ ಉರುಳಿತ್ತು.
ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಉತ್ತಮ ಸ್ಥಿತಿಯಲ್ಲಿದೆ. ಬಿಜೆಪಿಯ ಹಣಬಲ, ಕೋಮುವಾದ ಕರ್ನಾಟಕದಲ್ಲಿ ಕೆಲಸ ಮಾಡುವುದಿಲ್ಲ ಎಂದು ಮೊಯ್ಲಿ ಹೇಳಿದ್ದಾರೆ.
"ಮೋದಿ ಅಲೆ ರಾಜ್ಯದಲ್ಲಿಲ್ಲ. ಪ್ರಧಾನಿ ಮೋದಿ ಇದಾಗಲೇ ತನ್ನೆಲ್ಲಾ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಜನರ ಮನಸ್ಸಿನಲ್ಲಿ ಮೋದಿ ಬಗ್ಗೆ ಇದ್ದ ಒಅಲವೆಲ್ಲ ಅಳಿಸಿ ಹೋಗಿದೆ. ಈ ಚುನಾವಣೆ ಪ್ರಚಾರದ ವೇಳೆ ಅದು ಗೋಚರಕ್ಕೆ ಬರಲಿದೆ.
"ರಾಜ್ಯ ಬಿಜೆಪಿ ಅಧ್ಯಕ್ಷ, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರ ವರ್ಚಸ್ಸು ಸಹ ಕುಸಿದಿದ್ದು ಕಳೆದ ಐದು ವರ್ಷದಲ್ಲಿ ಅದು ತಳಮಟ್ಟದಲ್ಲೇ ಉಳಿದಿದೆ" ಚಿಕ್ಕಬಳ್ಳಾಪುರದಿಂದ ಎರಡು ಬಾರಿ ಸಂಸದರಾಗಿದ್ದ ಮೊಯ್ಲಿ ನುಡಿದರು.
"ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಸೋದರ ಸೋಮಶೇಖರ ರೆಡ್ಡಿಯವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ರಾಜ್ಯದಲ್ಲಿ ರಾಜಕೀಯ ವಾತಾವರಣವನ್ನು ಇನ್ನೂ ಕಲುಷಿತಗೊಳಿಸಿದೆ 
"ಕಾರ್ಕಳದಲ್ಲಿ ನನ್ನ ಪುತ್ರನಿಗೆ ಟಿಕೆಟ್ ನಿಡಬಾರದೆನ್ನುವುದು ನನ್ನ ಇಚ್ಚೆಯಾಗಿದೆ. ಏಕೆಂದರೆ ನಮಗೆ ಅದು (ಕಾರ್ಕಳ) ಸೂಕ್ತ ಕ್ಷೇತ್ರವಲ್ಲ. ಎಂದಿದ್ದ ಮೊಯ್ಲಿ ಪಕ್ಷದಲ್ಲಿ ಹಣದ ಪ್ರಭಾವ ಹೆಚ್ಚಿದೆ ಎನ್ನುವ ವಿವಾದಾತ್ಮಕ ಟ್ವೀಟ್ ಮಾಡಿದ್ದ ಬಗ್ಗೆ ಪ್ರತಿಕ್ರಯಿಸಿದ್ದಾರೆ. "ಆ ಟ್ವೀಟ್ ಮಾಡಿದ್ದು ನಾನಲ್ಲ" ಅವರು ಹೇಳಿದ್ದಾರೆ.
ಮೇಲುಕೋಟೆಯಲ್ಲಿ ಮಾಜಿ ಶಾಸಕ ಪುಟ್ಟಣ್ಣಯ್ಯ ಅವರ ಪುತ್ರನಿಗೆ ನಮ್ಮ ಪಕ್ಷ ಬೆಂಬಲ ಸೂಚಿಸಲಿದೆ ಎಂದ ಮೊಯ್ಲಿ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರೀಸ್ ಗೆ ಜನಬೆಂಬಲವಿದೆ. ಅವರಿಗೆ ಟಿಕೆಟ್ ನೀಡುವರೆ ಇಲ್ಲವೆ ಎನ್ನುವುದು ಇನೂ ತೀರ್ಮಾನ ಮಾಡಬೇಕಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಎದುರು ನೋಡುತ್ತಿದ್ದೇವೆ ಎಂದರು.
"ರಾಯಚೂರಿನ ಮಾಜಿ ಶಾಸಕ ಸಯ್ಯದ್ ಯಾಸಿನ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಆದರೆ ಅವರ ಹೆಸರಷ್ಟೇನೂ ಚೆನ್ನಾಗಿಲ್ಲ, ನಾವು ವರಿಗೆ ಬದಲು ಬೇರೆಯವರಿಗೆ ಟಿಕೆಟ್ ನೀಡಲು ಬಯಸಿದ್ದೇವೆ.ಎಂದಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.