ರಾಜಕೀಯ

ನನ್ನ ಮಗಳಿಗೆ ಕಥುವಾ ಸಂತ್ರಸ್ತೆಯ ಹೆಸರಿಡುವೆ: ಪ್ರತಿಭಾ ಕುಳಾಯಿ

ಜಮ್ಮು ಕಾಶ್ಮೀರದಲ್ಲಿ ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ಹೆಸರನ್ನು ನನ್ನ ಮಗಳಿಗಿಡುತ್ತೇನೆ" ಕೆಪಿಸಿಸಿ ಮಹಿಳಾ ಘಟಕ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.

ನನ್ನ ಮಗಳಿಗೆ ಕಥುವಾ ಸಂತ್ರಸ್ತೆಯ ಹೆಸರಿಡುವೆ: ಪ್ರತಿಭಾ ಕುಳಾಯಿ
ಪ್ರತಿಭಾ ಕುಳಾಯಿ
Published On :
ಮಂಗಳೂರು: "ಜಮ್ಮು ಕಾಶ್ಮೀರದಲ್ಲಿ ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ಹೆಸರನ್ನು ನನ್ನ ಮಗಳಿಗಿಡುತ್ತೇನೆ"  ಕೆಪಿಸಿಸಿ ಮಹಿಳಾ ಘಟಕ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಹೇಳಿದ್ದಾರೆ. 
ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರತಿಭಾ "ಕಥುವಾ ಘಟನೆ ಅತ್ಯಂತ ಖೇದಕರ. ಓರ್ವ ಮಹಿಳೆಯಾಗಿ ನಾನದನ್ನು ಖಂಡಿಸುತ್ತೇನೆ. ಹಾಗೆಯೇ ನನ್ನ ಮಗಳಿಗೆ ಸಹ ನಾನು ಅದೇ ಸಂತ್ರಸ್ತೆಯ ಹೆಸರನ್ನಿಡುತ್ತೇನೆ" ಎಂದರು.
ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಭಾ "ನಾನು ಭಾರತೀಯಳೆಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ. ಹೀಗೆಂದದ್ದಕ್ಕೆ ನನ್ನ ಕಾರಿಗೆ ಕಲ್ಲು ತೂರಲುಬಹುದು, ಆದರೆ ಕಾಶ್ಮೀರದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಲಾಗುತ್ತಿದೆ. ಬಿಜೆಪಿ ಆಡಳಿತ ಹೆಣ್ಣು ಮಕ್ಕಳ ರಕ್ಷಣೆಯನ್ನೇ ಕಡೆಗಣಿಸಿದೆ. ನರೇಂದ್ರ ಮೋದಿ ಅವರಿಗೆ ಸಂಸಾರ ಜೀವನ ಅನುಭವವಿಲ್ಲ. ಅವರು ಹೇಗೆ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸುತ್ತಾರೆ? ಎಂದು ಪ್ರಶ್ನಿಸಿದರು.
ಯೋಗಿ ಆದಿತ್ಯನಾಥ್ ಅವರೊಬ್ಬ ಜೋಗಿ ಎಂದು ವ್ಯಂಗ್ಯ ಮಾಡಿದ ಪ್ರತಿಭಾ . ಬಿಜೆಪಿಯ ಹಿಂದೂ ಕಾರ್ಯಕರ್ತರು  ನಡೆಸುವ ದೌರ್ಜನ್ಯಕ್ಕೆ ಸಿಕ್ಕು ಭಾರತೀಯ ಮಹಿಳೆಯರ ಬದುಕು ಮೂರಾಬಟ್ಟೆಯಾಗಿದೆ. ಭಾರತ್ ಮಾತಾ ಕಿ ಜೈ ಎನ್ನುವವರೇ ಹೆಣ್ಣು ಮಕ್ಕಳ ಮೇಲೆ ಮುಗಿ ಬೀಳುತ್ತಿದ್ದಾರೆ ಎಂದರು.
ಮಂಗಳೂರಿನಲ್ಲಿಯೂ ಇಂತಹಾ ಘಟನೆಗಳಾಗುತ್ತಿದೆ ಎಂದ ಪ್ರತಿಭಾ ಕುಳಾಯಿ "ಮಂಗಳೂರಿನಲ್ಲಿ ಸಹ ಬಿಜೆಪಿ ಹಿಂದೂಗಳ ಹಾವಳಿ ಇದೆ. ಕಳೆದ ಬಾರಿಯ ಲೋಕಸಭೆ ಚುನಾವಣೆ ಸಮಯದಲ್ಲಿ ನನಗೆ ಸಹ ಇಂತಹಾ ಕೆಟ್ಟ ಅನುಭವಗಳಾಗಿತ್ತು ಎಂದು ನುಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.