ರಾಜಕೀಯ

ಕರ್ನಾಟಕ ಚುನಾವಣೆ: ಬಿಜೆಪಿ 2ನೇ ಪಟ್ಟಿಯಲ್ಲಿ ರೆಡ್ಡಿ ಸಹೋದರ, ಬಂಗಾರಪ್ಪ ಪುತ್ರನಿಗೆ ಟಿಕೆಟ್, 82 ಅಭ್ಯರ್ಥಿಗಳ ಘೋಷಣೆ

ಮೇ 15 ರಂದು ನಡೆಯಲಿರುವ ರಾಜ್ಯ ವಿಧಾನಸಭೆಯ ಚುನಾವಣೆಯ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿರುವ ಬಿಜೆಪಿ ಇಂದು ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ

ಕರ್ನಾಟಕ ಚುನಾವಣೆ: ಬಿಜೆಪಿ 2ನೇ ಪಟ್ಟಿಯಲ್ಲಿ ರೆಡ್ಡಿ ಸಹೋದರ, ಬಂಗಾರಪ್ಪ ಪುತ್ರನಿಗೆ ಟಿಕೆಟ್, 82 ಅಭ್ಯರ್ಥಿಗಳ ಘೋಷಣೆ
ಬಿಜೆಪಿ ಚಿಹ್ನೆ
Published On :

ನವದೆಹಲಿ : ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭೆಯ ಚುನಾವಣೆಯ  ಮೊದಲ ಅಭ್ಯರ್ಥಿಗಳ  ಪಟ್ಟಿಯನ್ನು ಈಗಾಗಲೇ  ಬಿಡುಗಡೆ ಮಾಡಿರುವ ಬಿಜೆಪಿ ಇಂದು ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಈ ಸಂಬಂಧ ನಿನ್ನೆ ದೆಹಲಿಯಲ್ಲಿ   ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ  ಸಭೆ ನಡೆಸಿದ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿ ಗಾಲಿ ಜನಾರ್ಧನ್ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರ ಕುಮಾರ ಬಂಗಾರಪ್ಪ ಸೇರಿದಂತೆ 82 ಅಭ್ಯರ್ಥಿಗಳ ಪಟ್ಟಿಯನ್ನು   ಅಖೈರುಗೊಳಿಸಿದ್ದು, ಇಂದು ಪಟ್ಟಿ ಬಿಡುಗಡೆಯಾಗಿದೆ.

ಟಿಕೆಟ್ ಪಡೆದ   ಪ್ರಮುಖ ಅಭ್ಯರ್ಥಿಗಳ ಕ್ಷೇತ್ರ- ಹೆಸರು
ಬಳ್ಳಾರಿ ನಗರ - ಜಿ. ಸೋಮಶೇಖರ್ ರೆಡ್ಡಿ
ಸೊರಬ- ಕುಮಾರ್ ಬಂಗಾರಪ್ಪ
ಕೆ. ಆರ್. ಪುರ  ನಂದೀಶ್ ರೆಡ್ಡಿ,  ಬ್ಯಾಟರಾಯನಪುರ - ಎ. ರವಿ
ಮಹಾಲಕ್ಷ್ಮಿ ಲೇಔಟ್- ಎನ್.ಎಲ್. ನರೇಂದ್ರಬಾಬು
ಶಿವಾಜಿನಗರ- ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಚಿಕ್ಕೋಡಿ -ಸದಲಗ- ಅಣ್ಣಾ ಸಾಹೇಬ್ ಜೊಲ್ಲೆ,
ಗೋಕಾಕ್, - ಅಶೋಕ್ ಪೂಜಾರಿ
ರಾಮದುರ್ಗ- ಮಹದೇವಪ್ಪ  ಎಸ್. ಯಡವಾಡ್
ತೇರದಾಳ - ಸಿದ್ದು ಸವದಿ,  ಜಮಖಂಡಿ-  ಶ್ರೀಕಾಂತ್ ಕುಲಕರ್ಣೀ,
ಬಿಳಗಿ-  ಮುರುಗೇಶ್ ನಿರಾಣಿ,  ಬಾಗಲಕೋಟೆ- ವೀರಣ್ಣ ಚರಂತಿಮಠ
ದೇವರ ಹಿಪ್ಪರಗಿ- ಸೋಮಣ್ಣಗೌಡ  ಪಾಟೀಲ್  ಸೇರಿದಂತೆ ಮತ್ತಿತರಿಗೆ ಎರಡನೇ ಪಟ್ಟಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.