ಮತಯಾಚನೆಗೆ ಬಂದ ಅಭ್ಯರ್ಥಿಗೆ 500 ರು. ನೀಡಿದ ಮತದಾರ!
ಮೇ 12ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮತಬೇಟೆಯಲ್ಲಿ ತೊಡಗಿದ್ದಾರೆ...

Published On :
ಅಂಕೋಲಾ: ಮೇ 12ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮತಬೇಟೆಯಲ್ಲಿ ತೊಡಗಿದ್ದಾರೆ. ಇನ್ನು ಮತದಾರರಿಗೆ ಅಭ್ಯರ್ಥಿಗಳು ಹಣದ ಆಮಿಷವೊಡ್ಡುವುದು ಸಾಮಾನ್ಯ ಆದರೆ ಅಂಕೋಲದಲ್ಲಿ ಮತಯಾಚನೆಗೆ ಬಂದ ಅಭ್ಯರ್ಥಿಗೆ ಮತದಾರರೊಬ್ಬರು 500 ರುಪಾಯಿ ನೀಡಿ ಗಮನ ಸೆಳೆದಿದ್ದಾರೆ.
ಅಂಕೋಲಾದ ಲಕ್ಷ್ಮೀಶ್ವರ ನಗರ ನಿವಾಸಿ ಪ್ರಕಾಶ್ ನಾಯ್ಕ್ ಎಂಬುವರು ಮನೆಗೆ ಮತ ಕೇಳಲು ಬಂದ ಮಾಜಿ ಸಚಿವ ಕಾರವಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಅವರಿಗೆ 500 ರುಪಾಯಿ ನೀಡಿ ನಿಮಗೆ ಮತ ಹಾಕುತ್ತೇನೆ ಎಂದು ಹೇಳಿದ್ದಾರೆ.
ಚುನಾವಣೆಗಳು ಬಂದಾಗ ರಾಜಕಾರಣಿಗಳು ಜನರಿಗೆ ಹಣ ನೀಡುತ್ತಾರೆ ಆ ಪ್ರಕ್ರಿಯೆ ನಿಲ್ಲಬೇಕು ಹೀಗಾಗಿ ನಾನು ಅಭ್ಯರ್ಥಿಗೆ ನಾನು ದುಡಿದ ಹಣ ನೀಡಿದ್ದೇನೆ ಎಂದು ಹೇಳಿದ್ದಾರೆ.
ಕಾರವಾರದಲ್ಲಿ ಈ ಬಾರಿ ಬಿಜೆಪಿಯಿಂದ ರೂಪಾಲಿ ನಾಯ್ಕ್, ಕಾಂಗ್ರೆಸ್ ನಿಂದ ಹಾಲಿ ಶಾಸಕ ಸತೀಶ್ ಸೈಲ್ ಮತ್ತು ಆನಂದ್ ಅಸ್ನೋಟಿಕರ್ ಸ್ಪರ್ಧಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
JDSಜೆಡಿಎಸ್KarwarಕಾರವಾರKarnataka Assembly ElectionAnand Asnotikarಕರ್ನಾಟಕ ವಿಧಾನಸಭೆ ಚುನಾವಣೆಆನಂದ್ ಆಸ್ನೋಟಿಕರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


