ರಾಜಕೀಯ

ಬೇಟಿ ಬಚಾವೋ ಎಂಬುದು ಎಚ್ಚರಿಕೆಯ ಸಂದೇಶ : ರಣದೀಪ್ ಸುರ್ಜೀವಾಲ

ಬೇಟಿ ಬಚಾವೋ ಎಂಬ ಪ್ರಧಾನಿ ನರೇಂದ್ರಮೋದಿ ಅವರ ಘೋಷಣೆ ಅಭಿಯಾನವಲ್ಲ, ಅದು ಹೆಣ್ಣುಮಕ್ಕಳಿಗೆ ಎಚ್ಚರಿಕೆಯ ಸಂದೇಶವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬೇಟಿ ಬಚಾವೋ ಎಂಬುದು ಎಚ್ಚರಿಕೆಯ ಸಂದೇಶ : ರಣದೀಪ್  ಸುರ್ಜೀವಾಲ
ರಣದೀಪ್ ಸುರ್ಜೀವಾಲ
Published On :

ಬೆಂಗಳೂರು : ಬೇಟಿ ಬಚಾವೋ ಎಂಬ ಪ್ರಧಾನಿ ನರೇಂದ್ರಮೋದಿ ಅವರ   ಘೋಷಣೆ ಅಭಿಯಾನವಲ್ಲ, ಅದು ಹೆಣ್ಣುಮಕ್ಕಳಿಗೆ ಎಚ್ಚರಿಕೆಯ ಸಂದೇಶವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ವಕ್ತಾರ ರಣದೀಪ್ ಸುರ್ಜಿವಾಲ, ಉನ್ನಾವೊ ಹಾಗೂ ಕುಥುವಾ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಿಜೆಪಿ ರಕ್ಷಿಸುತ್ತಿದೆ ಎಂದರು.

ಗೂಂಡಾಗಳಿಂದ ಹೆಣ್ಣಮಕ್ಕಳನ್ನು ರಕ್ಷಿಸಿ ಎಂದು ಬಿಜೆಪಿ ದೇಶದ ಜನರಲ್ಲಿ ಹೇಳುತ್ತದೆ. ಮೋದಿ ಬೇಟಿ ಬಚಾವೋ ಎಂದಾಗ ಅದು ಎಚ್ಚರಿಕೆ ಸಂದೇಶವಾಗಿದ್ದು, ಅಭಿಯಾನವಲ್ಲಾ ಎಂಬುದನ್ನು  ದೇಶದಲ್ಲಿನ ಚಿಕ್ಕಮಕ್ಕಳು ಸಹ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದರು.  

ಬಿಜೆಪಿಯ ಸತ್ಯಾಗ್ರಹ ಬಗ್ಗೆ ವಾಗ್ದಾಳಿ ನಡೆಸಿದ ಸುರ್ಜಿವಾಲ, ದೇಶದಲ್ಲಿನ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಬಿಜೆಪಿ ಉಪವಾಸ ಸತ್ಯಾಗ್ರಹ ನಡೆಸುತ್ತಿದೆಯಾ ಎಂದು ಪ್ರಶ್ನಿಸಿದರು.

ಕುಥುವಾ ಅತ್ಯಾಚಾರ ಪ್ರಕರಣದ ಬಗ್ಗೆ ರಾಹುಲ್ ಗಾಂಧಿ ಮೌನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಸುರ್ಜೀವಾಲ, ಸಂತ್ರಸ್ತ ಕುಟುಂಬ ಸದಸ್ಯರಿಗೆ , ಪರಿಹಾರ, ನ್ಯಾಯ, ಒದಗಿಸಬೇಕೆಂದು ಆಗ್ರಹಿಸಿದರು.

ಸಂಸತ್ತಿನ ಕಲಾಪ ವ್ಯರ್ಥವಾಗಿಸಲು ಬಿಜೆಪಿ ಟಿಡಿಪಿ ಹಾಗೂ ಎಐಎಡಿಎಂಕೆ ಪಕ್ಷಗಳನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ ಸುರ್ಜೀವಾಲ್, ಲೋಕಸಭೆಯಲ್ಲಿ ಶೇ.1 ರಷ್ಟು ರಾಜ್ಯಸಭೆಯಲ್ಲಿ ಶೇ. 6 ರಷ್ಟು ಮಾತ್ರ ಕಲಾಪ ನಡೆದಿದೆ. 2009, 2014 ರ ಅವಧಿಯಲ್ಲಿ ಶೇ. 66.8 ರಷ್ಟು ಅಧಿವೇಶನ ನಡೆದಿತ್ತು ಎಂದು ಹೇಳಿದರು.






Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.