ನಾನು ಜಾತಿವಾದಿಯಲ್ಲ, ಮಾನವತಾವಾದಿ: ಒಕ್ಕಲಿಗ ಸಮುದಾಯದ ಓಲೈಕೆಗೆ ಮುಂದಾದ ಸಿಎಂ
ನಾನೊಬ್ಬ ಜಾತಿವಾದಿಯಲ್ಲ, ನಾನು ಒಕ್ಕಲಿಗ ವಿರೋಧಿಯೂ ಅಲ್ಲ, ನನ್ನ ರಾಜಕೀಯ ವೈರಿಗಳು ನನಗೆ ಒಕ್ಕಲಿಗ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಿದ್ದಾರೆ,...

Published On :
ಮೈಸೂರು: ನಾನೊಬ್ಬ ಜಾತಿವಾದಿಯಲ್ಲ, ನಾನು ಒಕ್ಕಲಿಗ ವಿರೋಧಿಯೂ ಅಲ್ಲ, ನನ್ನ ರಾಜಕೀಯ ವೈರಿಗಳು ನನಗೆ ಒಕ್ಕಲಿಗ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಿದ್ದಾರೆ, ನಾನೊಬ್ಬ ಮಾನವತಾವಾದಿ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ನಡೆದ ಒಕ್ಕಲಿಗ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಾನು ಜಾತಿವಾದಿಯಲ್ಲ, ಸಮಾಜದ ಎಲ್ಲಾ ಸಮುದಾಯದ ಜನರಿಗೆ ಉಪಯೋಗವಾಗುವಂತೆ ಕಾರ್ಯಕ್ರಮಗಳನ್ನು ನನ್ನ ಸರ್ಕಾರ ಜಾರಿಗೆ ತಂದಿದೆ. ನನ್ನನ್ನು ಅಹಿಂದ ಮುಖಂಡ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ನಾನು ತುಂಬಾ ಅಹಂಕಾರ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಹೇಳಿದರು.
ನನ್ನ ಭಾಷೆ ಒರಟು, ಬೇರೆಯವರ ರೀತಿ ಪಾಲಿಶ್ ಮಾಡಿ ನಾನು ಮಾತನಾಡುವುದಿಲ್ಲ, ನನಗೆ ಜನಗಳ ಹಿತವಷ್ಟೆ ಮುಖ್ಯ, ನಾನು ಹಿರಿಯರಿಗೆ ಹಾಗೂ ಸಾಮಾನ್ಯ ವ್ಯಕ್ತಿಗಳಿಗೆ ಗೌರವ ನೀಡುತ್ತೇನೆ ಎಂದು ಹೇಳಿದ ಸಿದ್ದರಾಮಯ್ಯ ತಮ್ಮ ಸರ್ಕಾರದ ಯೋಜನೆಗಳ ಬಗ್ಗೆ ವಿವರ ನೀಡಿದರು,
ಅನ್ನಬಾಗ್ಯ., ಕ್ಷೀರ ಭಾಗ್ಯ, ಉಚಿತ ಶೂ, ಲ್ಯಾಪ್ ಟ್ಯಾಪ್, ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಅನಿಲ ಭಾಗ್ಯ ಎಲ್ಲಾ ಯೋಜನೆಗಳು ಎಲ್ಲರಿಗಾಗಿ, ಕೇವಲ ಒಂದು ಸಮುದಾಯಕ್ಕಾಗಿ ಅಲ್ಲ ಎಂದು ತಿಳಿಸಿದ್ದಾರೆ,
ವರುಣಾ ಕಾಲುವೆ ಬಗ್ಗೆ ಮಾತನಾಡಿದ ಸಿಎಂ ವರುಣಾ ಪ್ರಾಜೆಕ್ಟ್ ಅನ್ನು ಯಾರೂ ಪೂರ್ಣಗೊಳಿಸಿದರು, ಇದು ಕೇವಲ ಒಂದು ಸಮುದಾಯದ ರೈತರಿಗೆ ಮಾತ್ರ ಉಪಯೋಗವಾಗುತ್ತಿದೆಯೆ ಎಂದು ಪ್ರಶ್ನಿಸಿದರು.
ನಾನು ಉತ್ತರ ಕರ್ನಾಟಕದಿಂದ ಸ್ಪರ್ದಿಸುತ್ತೇನೆ ಎಂಬುದಾಗಿ ಕೆಲವರು ಇಲ್ಲಸಲ್ಲದ ಸುದ್ದಿಯನ್ನು ಹರಿಬಿಡುತ್ತಿದ್ದಾರೆ ಎಂದು ಹೇಳಿದ ಅವರು, ನಾನು ಕೇವಲ ನಾಮಪತ್ರ ಸಲ್ಲಿಸಿದರೇ ಸಾಕು ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲ್ಲುತ್ತೇನೆ ಎಂಬ ಆತ್ಮ ವಿಶ್ವಾಸ ವ್ಯಕ್ತ ಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Siddaramaiahಸಿದ್ದರಾಮಯ್ಯChamundeshwariಒಕ್ಕಲಿಗVokkaligaಚಾಮುಂಡೇಶ್ವರಿKarnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


