ರಾಜಕೀಯ

ರಾಮನಗರದಲ್ಲಿ ಕುಮಾರಸ್ವಾಮಿ ಗೆದ್ದರೆ ಪತ್ರಕರ್ತರಿಗೆ ಸೈಟು: ಜೆಡಿಎಸ್ ಮುಖಂಡ ಭರವಸೆ

ಜೆಡಿಎಸ್ ತಾಲೂಕ ಅಧ್ಯಕ್ಷ ರಾಜಶೇಖರ್ ಅವರು ಶುಕ್ರವಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಪತ್ರಿಕಾಗೋಷ್ಠಿಯಲ್ಲೇ ....

ರಾಮನಗರದಲ್ಲಿ ಕುಮಾರಸ್ವಾಮಿ ಗೆದ್ದರೆ ಪತ್ರಕರ್ತರಿಗೆ ಸೈಟು: ಜೆಡಿಎಸ್ ಮುಖಂಡ ಭರವಸೆ
ಎಚ್ ಡಿ ಕುಮಾರಸ್ವಾಮಿ
Published On :
ರಾಮನಗರದ: ಜೆಡಿಎಸ್ ತಾಲೂಕ ಅಧ್ಯಕ್ಷ ರಾಜಶೇಖರ್ ಅವರು ಶುಕ್ರವಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಪತ್ರಿಕಾಗೋಷ್ಠಿಯಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ರಾಮನಗರದಿಂದ ಮತ್ತೆ ಗೆದ್ದುಬಂದರೆ ಪತ್ರಕರ್ತರಿಗೆ ಉಚಿತ ಸೈಟ್ ನೀಡುವುದಾಗಿ ಭರವಸೆ ನೀಡಿದರು. 
ಸ್ಥಳೀಯ ಪತ್ರಕರ್ತರಿಗೆ ಸೈಟ್ ನೀಡುವ ಯೋಜನೆ ಹಲವು ದಿನಗಳಿಂದ ಬಾಕಿ ಉಳಿದಿದ್ದು, ಈ ಬಾರಿ ಕುಮಾರಿಸ್ವಾಮಿ ಅವರು ರಾಮನಗರದಿಂದ ಗೆದ್ದು, ಮುಖ್ಯಮಂತ್ರಿಯಾದರೆ ಸೈಟ್ ನೀಡುವ ಭರವಸೆ ಈಡೇರಿಸುವುದಾಗಿ ರಾಜಶೇಖರ್ ಹೇಳಿದರು.
ಇದರಿಂದ ಮುಜುಗರಕ್ಕೊಳಗಾದ ಇತರೆ ಮುಖಂಡರು‌ ತಪ್ಪನ್ನು ಸರಿಪಡಿಸುವ ಪ್ರಯತ್ನ ಮಾಡಿದರು.
ಕುಮಾರಸ್ವಾಮಿ ಅವರು ರಾಮನಗರ ಮತ್ತು ಚೆನ್ನಪಟ್ಣಣ ಎರಡೂ ಕಡೆ ಸ್ಪರ್ಧಿಸುತ್ತಿದ್ದು, ಎರಡೂ ಕಡೆ ಗೆದ್ದರೆ ಚೆನ್ನಪಟ್ಟಣ ಕ್ಷೇತ್ರಕ್ಕೆ ರಾಜಿನಾಮೆ ನೀಡುತ್ತಾರೆ ಎಂದು ಹೇಳುವ ಮೂಲಕ ಪತ್ರಿಕಾಗೋಷ್ಠಿಯಲ್ಲಿದ್ದ ಇತರೆ ಪಕ್ಷದ ಮುಖಂಡರಿಗೆ ಮತ್ತೆ ಮುಜಗರ ಉಂಟು ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.