ರಾಜಕೀಯ

ಪ್ರಶ್ನೆ ಪತ್ರಿಕೆ ಸೋರಿಕೆ, ಮಾಹಿತಿ ಸೋರಿಕೆ - ಇದು ಮೋದಿ ಕಾಲ: ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ

ನರೇಂದ್ರ ಮೋದಿ ಯಾವತ್ತೂ ಭ್ರಷ್ಠಾಚಾರ ನಿರ್ಮೂಲನೆ ಬಗೆಗೆ ಮಾತನಾಡುತ್ತಿರುತ್ತಾರೆ, ಆದರೆ ದೇಶದಲ್ಲಿ ಒಂದು ಕಡೆ ಪ್ರಶ್ನೆಪತ್ರಿಕೆ ಸೋರಿಕೆ, ಮತ್ತೊಂದು ಕಡೆ ಚುನಾವಣಾ ಆಯೋಗದಿಂದ ಮಾಹಿತಿ ಸೋರಿಕೆ ಆಗುತ್ತಿದೆ..........

ಪ್ರಶ್ನೆ ಪತ್ರಿಕೆ ಸೋರಿಕೆ, ಮಾಹಿತಿ ಸೋರಿಕೆ - ಇದು ಮೋದಿ ಕಾಲ: ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :
ಶಿವಮೊಗ್ಗ: ನರೇಂದ್ರ ಮೋದಿ ಯಾವತ್ತೂ ಭ್ರಷ್ಠಾಚಾರ ನಿರ್ಮೂಲನೆ ಬಗೆಗೆ ಮಾತನಾಡುತ್ತಿರುತ್ತಾರೆ, ಆದರೆ ದೇಶದಲ್ಲಿ ಒಂದು ಕಡೆ ಪ್ರಶ್ನೆಪತ್ರಿಕೆ ಸೋರಿಕೆ, ಮತ್ತೊಂದು ಕಡೆ ಚುನಾವಣಾ ಆಯೋಗದಿಂದ ಮಾಹಿತಿ ಸೋರಿಕೆ ಆಗುತ್ತಿದೆ ಇದು ಮೋದಿ ಕಾಲ? ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ
ಮಲೆನಾಡಿನ ಸೆರಗಾದ ಶಿವಮೊಗ್ಗದಲ್ಲಿ ಐದನೇ ಹಂತದ ಜನಾಶೀರ್ವಾದ ಯಾತ್ರೆಗೆ ಚಾಲನೆ ನಿಡಿದ ರಾಹುಲ್ ಗಾಂಧಿ ಇಂದು ಶಿವಮೊಗ್ಗದಲ್ಲಿ ರೋಡ್ ಶೋ ನಡೆಸಿದ್ದಾರೆ. 
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮೋದಿಯವರು ಪಕ್ಕದಲ್ಲಿರಿಸಿಕೊಂಡು ಪೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಶಿವಮೊಗ್ಗ ಗೋಪಿ ಸರ್ಕಲ್ ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಹೇಳಿದರು.
"ಎಚ್ಎಎಲ್ ಜತೆ ಆಗಬೇಕಿದ್ದ ರಫೆಲ್ ಒಪ್ಪಂದವನ್ನು ಮೋದಿ ತಮ್ಮ ಮಿತ್ರರಿಗೆ ಮೂರು ಪಟ್ಟು ಹೆಚ್ಚು ಮೊತ್ತಕ್ಕೆ ಖರೀದಿಸಲು ನೀಡಿದ್ದಾರೆ. ಅಲ್ಲದೆ ಭಾರತ ಗಡಿ ಪ್ರದೇಶದಲ್ಲಿ ಕ್ಯಾತೆ ತೆಗೆಯುವ ಚೀನಾ ಅಧ್ಯಕ್ಷರನ್ನು ಮೋದಿ ಆಲಿಂಗಿಸಿಕೊಳ್ಳುತ್ತಾರೆ. 
ರಾಜ್ಯದ ರೈತರ ಸಾಲಮನ್ನಾಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮುಂದಾಗಲಿಲ್ಲ, ಕೇಂದ್ರ ಸರ್ಕಾರ ದೇಶದಲ್ಲಿ ದಲಿತರು, ಹಿಂದುಳಿದವರ ಕಲ್ಯಾಣಕ್ಕೆ ಎಷ್ಟು ಹಣ ಖರ್ಚು ಮಾಡಿದೆಯೋ ಅದರ ಅರ್ಧದಷ್ಟು ಹಣವನ್ನು ಕರ್ನಾಟಕ ಸರ್ಕಾರ ಖರ್ಚು ಮಾಡಿದೆ. ಕರ್ನಾಟಕದ ಹೆಣ್ಣುಮಕ್ಕಳಿಗೆ ರಾಜ್ಯ ಸರ್ಕಾರವು ಕಿಂಡರ್‌ಗಾರ್ಟನ್‌ನಿಂದ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ಒದಗಿಸುತ್ತಿದೆ.ಎಂದರು.
ಯಡಿಯೂರಪ್ಪ ಸರ್ಕಾರ ಅತ್ಯಂತ ಭ್ರಷ್ಠ ಸರ್ಕಾರವೆಂದು ಅವರ ಪಕ್ಷದ ಅಧ್ಯಕ್ಷರೇ ಹೇಳಿದ್ದಾರೆ. ಇದು ಅವರ ಜೀವಮಾನದಲ್ಲಿ ಹೇಳಿರುವ ಮೊಟ್ಟ ಮೊದಲ ಸತ್ಯ! ರಾಹುಲ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸಹ ರಾಹುಲ್ ಗಾಧಿ ಅವರಿಗೆ ಸಾಥ್ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.