ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ: ಎಂಬಿ ಪಾಟೀಲ್, ಖಂಡ್ರೆ ಹೇಳಿಕೆಗೆ ಸಿಎಂ ಕ್ಲಾಸ್!
ಲಿಂಗಾಯತ -ವೀರಶೈವ ಪ್ರತ್ಯೇಕ ಧರ್ಮ ವಿವಾದ ಸಂಬಂಧ ಸಿದ್ಧಗಂಗಾ ಶ್ರೀಗಳ ಹೆಸರನ್ನು ಮಧ್ಯೆ ಎಳೆದು ತಂದ ಎಂ ಬಿ ಪಾಟೀಲ್ ಹಾಗೂ ಮನಸ್ಸಿಗೆ ಬಂದಂತೆ ...

Published On :
ಬೆಂಗಳೂರು: ಲಿಂಗಾಯತ -ವೀರಶೈವ ಪ್ರತ್ಯೇಕ ಧರ್ಮ ವಿವಾದ ಸಂಬಂಧ ಸಿದ್ಧಗಂಗಾ ಶ್ರೀಗಳ ಹೆಸರನ್ನು ಮಧ್ಯೆ ಎಳೆದು ತಂದ ಎಂ ಬಿ ಪಾಟೀಲ್ ಹಾಗೂ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆಂದು ಸಚಿವ ಈಶ್ವರ ಖಂಡ್ರೆ ಅವರನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಪಾಟೀಲ್ ಮತ್ತು ಖಂಡ್ರೆ ವಿರುದ್ಧ ಗರಂ ಆಗಿದ್ದರು ಎಂದು ಮೂಲಗಳು ತಿಳಿಸಿವೆ.
ಬಾಯಿಗೆ ಬಂದ ಹಾಗೆ ಮಾತಾಡಿ ಮತ್ತೆ ಅದೇ ಸಮರ್ಥನೆ ಮಾಡೋದು ಸರ್ಕಾರಕ್ಕೆ ಅವಮಾನವಾಗಿದೆ ಎಂದು ಕೋಪಗೊಂಡರಲ್ಲದೆ ಲಿಂಗಾಯತ ಧರ್ಮ ವಿಚಾರದಲ್ಲಿ ಯಾಕೆ ಬಾಲಿಶವಾಗಿ ವರ್ತಿಸುತ್ತಿದ್ದೀರಿ ಎಂದು ಇಬ್ಬರಿಗೂ ಸಿಎಂ ಬಿಸಿ ಮುಟ್ಟಿಸಿದ್ದಾರೆ.
ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ, ಮಾತನಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ಈ ವಿಷಯವನ್ನು ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತದೆ. ನಿಮ್ಮ ಹೇಳಿಕೆಯಿಂದಾಗಿ ಸರ್ಕಾರ ಮಾಧ್ಯಮಗಳಿಗೆ ಹೇಳಿಕೆ ನೀಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವರ ವಿರುದ್ಧ ಸಿಎಂ ಗರಂ ಆಗಿದ್ದಾರೆ.
ಈ ವೇಳೆ ಸ್ಪಷ್ಟನೆ ನೀಡಲು ಮುಂದಾದ ಎಂ.ಬಿ. ಪಾಟೀಲ್ ಅವರನ್ನು ತಡೆದ ಸಿಎಂ ಸ್ಪಷ್ಟನೆ ನೀಡುವುದು ಬೇಡ ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ. ಸ್ವತಂತ್ರ ಲಿಂಗಾಯತ ಧರ್ಮದ ಬಗ್ಗೆ ಸ್ವೇಚ್ಛಾಚಾರದ ಎಡವಟ್ಟು ಹೇಳಿಕೆಗಳನ್ನು ನೀಡುತ್ತಿದ್ದ ಸಚಿವ ಎಂಬಿ ಪಾಟೀಲರಿಗೆ ಕೊನೆಗೂ ಸಿಎಂ ಸಿದ್ದರಾಮಯ್ಯ ಅವರು ಲಗಾಮು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Siddaramaiahಸಿದ್ದರಾಮಯ್ಯಎಂಬಿ ಪಾಟೀಲ್ಈಶ್ವರ ಖಂಡ್ರೆEshwar KhandreVeerashaiva-Lingayat religionವೀರಶೈವ- ಲಿಂಗಾಯತ ಧರ್ಮ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


