ರಾಜಕೀಯ

ಉತ್ತಮ ವಿಧೇಯಕಕ್ಕೆ ವಿರೋಧ ಎಂದಿಗೂ ಇದ್ದೇ ಇರುತ್ತದೆ: ಸಚಿವ ರಮೇಶ್ ಕುಮಾರ್

ಕೆಪಿಎಂಇಎ ಕಾಯ್ದೆ ಕುರಿತಂತೆ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರ ನಡುವಿನ ಜಟಾಪಟಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಉತ್ತಮವಾದ ವಿಧೇಯಕಕ್ಕೆ ವಿರೋಧ ಎಂದಿಗೂ ಇದ್ದೇ ಇರುತ್ತದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್...

ಉತ್ತಮ ವಿಧೇಯಕಕ್ಕೆ ವಿರೋಧ ಎಂದಿಗೂ ಇದ್ದೇ ಇರುತ್ತದೆ: ಸಚಿವ ರಮೇಶ್ ಕುಮಾರ್
ಆರೋಗ್ಯ ಸಚಿವ ರಮೇಶ್ ಕುಮಾರ್
Published On :
ಬೆಳಗಾವಿ: ಕೆಪಿಎಂಇಎ ಕಾಯ್ದೆ ಕುರಿತಂತೆ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರ ನಡುವಿನ ಜಟಾಪಟಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಉತ್ತಮವಾದ ವಿಧೇಯಕಕ್ಕೆ ವಿರೋಧ ಎಂದಿಗೂ ಇದ್ದೇ ಇರುತ್ತದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ. 
ವಿಧಾನಮಂಡಲ ಅಧಿವೇಶನದ ಶೂನ್ಯ ಅವಧಿಯಲ್ಲಿ ಮಾತನಾಡಿರುವ ರಮೇಶ್ ಕುಮಾರ್ ಅವರು, ಉತ್ತಮವಾದ ವಿಧೇಯಕಕ್ಕೆ ಎಂದಿಗೂ ವಿರೋಧಗಳು ಇದ್ದೇ ಇರುತ್ತವೆ. ಆದರೆ, ಪ್ರಸ್ತುತ ಉದ್ಭವಗೊಂಡಿರುವ ತಪ್ಪು ತಿಳುವಳಿಕೆಗಳ ಕುರಿತಂತೆ ಸ್ಪಷ್ಟನೆ ನೀಡಲು ಸರ್ಕಾರ ಸಿದ್ಧವಾಗಿದೆ. ವೈದ್ಯರು ತಮ್ಮ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಹಿಂದಕ್ಕೆ ಸರಿಯುತ್ತಿದ್ದಾರೆಂದು ಹೇಳಿದ್ದಾರೆ. 
ಜನರ ತೆರಿಗೆ ಹಣವನ್ನು ಸರ್ಕಾರ ಬಳಕೆ ಮಾಡುತ್ತಿದ್ದು, ಬಡವರಿಗೆ ಸೇವೆ ಸಲ್ಲಿಸಲು ಸರ್ಕಾರ ಬದ್ಧವಾಗಿದೆ. ಸರ್ಕಾರಿ ಆಸ್ಪತ್ರೆಗಳ ಮೇಲೆ ಸರ್ಕಾರ ಅವಲಂಬನೆಗೊಂಡಿರುವುದು ಸತ್ಯ. ಆದರೆ, ವೈದ್ಯರು ತಮ್ಮ ಎಲ್ಲಾ ಆಗ್ರಹಗಳು ಈಡೇರಲೇ ಬೇಕು ಎಂದು ಆಗ್ರಹಿಸಿದರೆ ಅದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.