ಬಿಜೆಪಿ ಭಿನ್ನಮತ: ಮುರಳಿಧರ ರಾವ್ ವರದಿಯಲ್ಲಿ ಯಡಿಯೂರಪ್ಪ, ಶೋಭಾ ವಿರುದ್ಧವೂ ದೂರು
ಬಿಜೆಪಿಯಲ್ಲಿ ಮೂಡಿರುವ ಭಿನ್ನಮತದ ಬಿರುಕಿಗೆ ಒಗ್ಗಟ್ಟಿನ ತೇಪೆ ಹಾಕುವ ಪ್ರಯತ್ನವಾಗಿ ಪಕ್ಷದ ರಾಜ್ಯ ಘಟಕದಲ್ಲಿನ ಸಂಪೂರ್ಣ ಬೆಳವಣಿಗೆಗಳ ಮಾಹಿತಿ ಹೊತ್ತು ..

Published On :
ಬೆಂಗಳೂರು: ಬಿಜೆಪಿಯಲ್ಲಿ ಮೂಡಿರುವ ಭಿನ್ನಮತದ ಬಿರುಕಿಗೆ ಒಗ್ಗಟ್ಟಿನ ತೇಪೆ ಹಾಕುವ ಪ್ರಯತ್ನವಾಗಿ ಪಕ್ಷದ ರಾಜ್ಯ ಘಟಕದಲ್ಲಿನ ಸಂಪೂರ್ಣ ಬೆಳವಣಿಗೆಗಳ ಮಾಹಿತಿ ಹೊತ್ತು ದೆಹಲಿಗೆ ತೆರಳಿದ್ದ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಪಕ್ಷದ ರಾಷ್ಟ್ರೀಯ ಅಮಿತ್ ಷಾ ಅವರಿಗೆ ಸಮಗ್ರ ವರದಿ ಸಲ್ಲಿಸಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಅವರ ಆಪ್ತೆ ಶೋಭಾ ಕರಂದ್ಲಾಜೆ ವಿರುದ್ಧವೂ ದೂರು ನೀಡಿದ್ದಾರೆ.
ಯಡಿಯೂರಪ್ಪ ಅವರು ಶೋಭಾ ಅವರ ಮಾತು ಕೇಳುವುದನ್ನು ಬಿಟ್ಟರೆ ಸಮಸ್ಯೆ ತನ್ನಿಂದ ತಾನೇ ನಿವಾರಣೆಯಾಗಲಿದೆ ಎಂದು ಪಕ್ಷದ ರಾಜ್ಯ ಮುಖಂಡರು ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದಾರೆ. ಎಲ್ಲಾ ನಿರ್ಧಾರಗಳಲ್ಲೂ ಶೋಭಾ ಕರಂದ್ಲಾಜೆ ಮೂಗೂ ತೂರಿಸುತ್ತಿದ್ದಾರೆ.ಶೋಭಾ ಅವರು ಪಕ್ಷಕ್ಕೆ ನಿಷ್ಠರಾದವರನ್ನು ಕಡೆಗಣಿಸಿ, ತಮಗೆ ಆಪ್ತರಾದವರಿಗೆ ಮಣೆ ಹಾಕುತ್ತಿದ್ದಾರೆ ಎಂದೂ ಹೇಳಲಾಗಿದೆ.
ಕೆ.ಎಸ್ ಈಶ್ವರಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ನಾಯಕರು ಒತ್ತಾಯಿಸಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎರಡು ತಿಂಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮನ್ವಯ ಸಮಿತಿ ರಚಿಸಿದ್ದರು. ಆದರೆ ಯಡಿಯೂರಪ್ಪ ಇದುವರೆಗೂ ಒಂದೇ ಒಂದು ಸಭೆ ಕೂಡ ನಡೆಸಲಿಲ್ಲಯ. ಜೊತೆಗೆ ಭಿನ್ನಮತೀಯರ ಸಮಸ್ಯೆಗಳನ್ನು ಆಲಿಸಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.
ಪಕ್ಷದ ಸಂಘಟನೆಯ ಹಾಗೂ ಭವಿಷ್ಯದ ದೃಷ್ಟಿಯಿಂದ ಭಿನ್ನರ ವಿರುದ್ಧ ಶೀಘ್ರ ಕ್ರಮ ಅನಿವಾರ್ಯ, ಬಂಡಾಯವನ್ನು ಕೂಡಲೇ ಶಮನಗೊಳಿಸದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ ಎಂದು ಮನವರಿಕೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Muralidhar RaoYeddyurappaShobha Karandlajeಶೋಭಾ ಕರಂದ್ಲಾಜೆreportಅಮಿತ್ ಶಾವರದಿAmith shahಯಡಯೂರಪ್ಪಮರಳೀಧರ ರಾವ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


