ರೈತರ ಅನಧಿಕೃತ ಪಂಪ್ ಸೆಟ್ ತೆಗೆಸಲು ಹೋದರೆ ನಮ್ಮ ಕುರ್ಚಿ ಅಲುಗಾಡುತ್ತದೆ: ಡಿ.ಕೆ ಶಿವಕುಮಾರ್
ರಾಜ್ಯದಲ್ಲಿರುವ ನದಿ, ಕೆರೆ, ಕಾಲುವೆಗಳಿಗೆ ಲಕ್ಷಾಂತರ ರೈತರು ಅನಧಿಕೃತವಾಗಿ ಪಂಪ್ ಸೆಟ್ ಗಳನ್ನು ಅಳವಡಿಸಿದ್ದು, ಈ ರೈತರುಗಳ ವಿರುದ್ಧ ಕ್ರಮ ...

Published On :
ಬೆಂಗಳೂರು: ರಾಜ್ಯದಲ್ಲಿರುವ ನದಿ, ಕೆರೆ, ಕಾಲುವೆಗಳಿಗೆ ಲಕ್ಷಾಂತರ ರೈತರು ಅನಧಿಕೃತವಾಗಿ ಪಂಪ್ ಸೆಟ್ ಗಳನ್ನು ಅಳವಡಿಸಿದ್ದು, ಈ ರೈತರುಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅಸಾಧ್ಯ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಡಿ.ಕೆ ಶಿವಕುಮಾರ್, ಬೋರ್ ವೆಲ್ ಗಳನ್ನು ತೆಗೆಸಿದ ಬಳಿಕ ಅದರಲ್ಲಿ ಕಡಿಮೆ ನೀರು ಬರುತ್ತಿದ್ದರೇ, ಬೋರ್ ವೆಲ್ ನೀರು ನಿಂತು ಹೋದರೇ ಹಾಗೂ ಬೋರ್ ವೆಲ್ ನ ನೀರು ಜಮೀನಿಗೆ ಸಾಕಾಗದಿದ್ದಾಗ ರೈತರುಗಳು 15 ರಿಂದ 20 ಕಿ.ಮೀ ವರೆಗೆ ಅನಧಿಕೃತ ಪಂಪ್ ಸೆಟ್ ಗಳನ್ನು ಹಾಕಿ ನದಿ, ಕೆರೆ, ಕಾಲುವೆಗಳಿಂದ ನೀರನ್ನು ಪಡೆಯುತ್ತಾರೆ.
ಈ ರೈತರ ವಿರುದ್ಧ ಕ್ರಮ ಕೈಗೊಳ್ಳಲು ಹೋದರೇ ರೈತರು ಪ್ರತಿಭಟನೆಗೆ ಇಳಿಯುತ್ತಾರೆ, ಆಗ ನಮ್ಮ ಹಾಗೂ ನಿಮ್ಮ ಕುರ್ಚಿ ಅಲುಗಾಡುತ್ತದೆ ಎಂದು ತಮಾಷೆಯಾಗಿ ಉತ್ತರಿಸಿದರು.
ನೀರಾವರಿ ಅಳವಡಿಸಿಕೊಂಡಿರುವ ಪ್ರತಿ ರೈತನಿಗೂ ಸರ್ಕಾರ 60 ಸಾವಿರ ರು. ವಿದ್ಯುತ್ ಸಬ್ಸಿಡಿ ನೀಡುತ್ತಿದೆ. ಇಡೀ ದೇಶದಲ್ಲಿಯೇ ಕರ್ನಾಟಕ ಹೆಚ್ಚು ವಿದ್ಯುತ್ ಸಬ್ಸಿಡಿಯನ್ನು ರೈತರು ಸಬ್ಸಿಡಿ ಮೂಲಕ ನೀಡುತ್ತಿದೆ ಎಂದು ಹೇಳಿದರು.
ಸದ್ಯ 4,84,690 ಅನದಿಕೃತ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದ್ದು, 3,63,065 ಪಂಪ್ ಸೆಟ್ ಗಳಿಗೆ 10 ಸಾವಿರ ರು ನ ನಂತೆ ಪಾವತಿಸಬೇಕಾಗಿದೆ. 2,48,574 ಪಂಪ್ ಸೆಟ್ ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


