ರಾಜಕೀಯ

8 ಎಂಎಲ್ ಸಿಗಳಿಗೆ ಅಮಾನತು ಭೀತಿ: ಸಭಾಪತಿ ಶಂಕರಮೂರ್ತಿ ನೊಟೀಸ್

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 8 ಎಂಎಲ್ ಸಿಗಳು ಅಮಾನತು ಭೀತಿ ಎದುರಿಸುತ್ತಿದ್ದಾರೆ...

8 ಎಂಎಲ್ ಸಿಗಳಿಗೆ ಅಮಾನತು ಭೀತಿ: ಸಭಾಪತಿ ಶಂಕರಮೂರ್ತಿ ನೊಟೀಸ್
ಡಿ.ಎಚ್. ಶಂಕರಮೂರ್ತಿ
Published On :
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 8 ಎಂಎಲ್ ಸಿಗಳು ಅಮಾನತು ಭೀತಿ ಎದುರಿಸುತ್ತಿದ್ದಾರೆ.
ಪರಿಷತ್ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಸಭಾಪತಿ ಡಿಎಚ್ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಕಾಂಗ್ರೆಸ್‌ ಸದಸ್ಯರು ನೋಟಿಸ್ ನೀಡಿದ ಬೆನ್ನಲ್ಲೇ 2016ರ ಬಿಬಿಎಂಪಿ ಮೇಯರ್ ಚುನಾವಣೆ ಹಾಗೂ 2017ರ ಬಳ್ಳಾರಿ ಸಿಟಿ ಕಾರ್ಪೋರೇಷನ್ ಚುನಾವಣೆಯಲ್ಲಿ ತಪ್ಪು ವಿಳಾಸ ನೀಡಿದ್ದಾರೆಂಬ ಆರೋಪದ ಮೇಲೆ ಶಂಕರಮೂರ್ತಿ ಅವರು 8 ಪರಿಷತ್ ಸದಸ್ಯರಿಗೆ ನೊಟೀಸ್ ನೀಡಿದ್ದಾರೆ.
ಸಭಾಪತಿ ಡಿಎಚ್‌ ಶಂಕರಮೂರ್ತಿ ಅವರು ಪರಿಷತ್‌ ಸದಸ್ಯರುಗಳಾದ ಅಪ್ಪಾಜಿ ಗೌಡ, ರಘು ಆಚಾರ್, ಎಂ.ಡಿ.ಲಕ್ಷ್ಮೀನಾರಾಯಣ ಬೋಸ್‌ರಾಜ್‌ , ಆರ್.ಬಿ ತಿಮ್ಮಾಪುರ, ಎಸ್‌.ರವಿ, ಅಲ್ಲಂ ವೀರಭದ್ರಪ್ಪ  ಮತ್ತು ಸಿ.ಆರ್‌ ಮನೋಹರ್‌ ಅವರಿಗೆ ನೊಟೀಸ್‌ ನೀಡಿದ್ದಾರೆ. 
ರಾಜ್ಯ ಸಭೆಯಲ್ಲಿ ಇಂತಹ ಪ್ರಕರಣಕ್ಕೆ ಕ್ರಿಮಿನಲ್‌ ಕೇಸ್‌ ಹಾಕಲಾಗುತ್ತದೆ. ನಿಮ್ಮ ಮೇಲೆ ಕ್ರಿಮಿನಲ್‌ ಕೇಸ್‌ ಏಕೆ ಹಾಕಬಾರದು ಎಂದು ಪ್ರಶಿನಿಸಿರುವ ಸಭಾಪತಿ ಪ್ರಶ್ನಿಸಿ ಜೂನ್‌ 5 ರ ಒಳಗೆ ಉತ್ತರ ನೀಡುವಂತೆ ಕೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.