ಸಂವಿಧಾನ ಕುರಿತು ಹೇಳಿಕೆ: ಕೇಂದ್ರ ಸಚಿವ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಬಿಜೆಪಿ ನಕಾರ
ಜಾತ್ಯಾತೀತವನ್ನು ತೆಗೆದುಹಾಕಿ ಸಂವಿಧಾನವನ್ನು ಬದಲಿಸುತ್ತೇವೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಬಿಜೆಪಿ ನಿರಾಕರಿಸಿದೆ...

Published On :
ಬೆಂಗಳೂರು: ಜಾತ್ಯಾತೀತವನ್ನು ತೆಗೆದುಹಾಕಿ ಸಂವಿಧಾನವನ್ನು ಬದಲಿಸುತ್ತೇವೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಬಿಜೆಪಿ ನಿರಾಕರಿಸಿದೆ.
ಕರ್ನಾಟಕ ವಾಮನಚಾರ್ಯದ ಬಿಜೆಪಿ ವಕ್ತಾರ ಮಾತನಾಡಿ, ಹೆಗ್ಡೆ ಹೇಳಿಕೆಯಲ್ಲಿ ಭಾಗಿಯಾಗಲು ಬಿಜೆಪಿ ಇಚ್ಛಿಸುವುದಿಲ್ಲ. ಹೆಗ್ಡೆಯವರ ಹೇಳಿಗೆ ನಮಗೆ ದೊಡ್ಡ ವಿಚಾರವಲ್ಲ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಹೆಗ್ಡೆಯವರು ನಾನೊಬ್ಬ ಮುಸ್ಲಿಂಎಂದು ಹೆಮ್ಮೆಯಿಂದ ಹೇಳಿದರೆ, ನನಗೆ ಖುಷಿಯಾಗುತ್ತದೆ. ನಾನೊಬ್ಬ ಕ್ರಿಶ್ಚಿಯನ್, ಲಿಂಗಾಯತ, ಬ್ರಾಹ್ಮಣ, ಹಿಂದೂ ಎಂದು ಹೇಳಿದರೆ ನನಗೆ ಖುಷಿಯಾಗುತ್ತದೆ. ಏಕೆಂದರೆ ಅವರಿಗೆ ಅವರ ರಕ್ತದ ಪರಿಚಯವಿರುತ್ತದೆ. ಆದರೆ, ಪ್ರಸ್ತುತ ಜಾತ್ಯಾತೀತ ಎನ್ನುವ ಹೊಸ ಸಂಪ್ರದಾಯ ಬಂದಿದೆ.
ಜಾತ್ಯಾತೀತ ಎಂದು ಕರೆದುಕೊಳ್ಳುತ್ತಾರಲ್ಲ ಅವರಿಗೆ ತಾವು ಯಾರೆಂಬುದೇ ಗೊತ್ತಿರುವುದಿಲ್ಲ ಅಂಥಹವರಿಗೆ ತಮ್ಮ ರಕ್ತದ ಪರಿಚಯ ಇರುವುದಿಲ್ಲ ಇವರನ್ನು ಮಾತ್ರ ಜಾತ್ಯಾತೀತರು ಎಂದು ಕರೆಯಬೇಕಾಗುತ್ತದೆ. ಮಾತು ಎತ್ತಿದರೆ ದೊಡ್ಡ ವಿಚಾರವಾದಿಗಳು, ಜಾತ್ಯಾತೀತರು ಎನ್ನುತ್ತಾರೆ. ಅಪ್ಪ, ಅಮ್ಮನ ಪರಿಚಯ ಮಾತ್ರ ಇರುವುದಿಲ್ಲ. ಆದರೂ ಈ ನನ್ನ ಮಕ್ಕಳು ವಿಚಾರವಾದಿಗಳು.
ದೇಶದ ಪ್ರತಿಯೊಬ್ಬರಲ್ಲೂ ಅವರ ಜಾತಿಯ ಬಗ್ಗೆ, ಸಂಸ್ಕೃತಿಯ ಬಗ್ಗೆ ಪರಿಚಯ ಇರಬೇಕು. ಜಾತಿ ಧರ್ಮದಿಂದ ಗುರ್ತಿಸಿಕೊಳ್ಳುವರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ. ಆದರೆ, ಜಾತ್ಯತೀತ ಎಂದು ಕರೆದುಕೊಂಡವರನ್ನು ಯಾರು? ಏನಿದ್ದಾರೆ? ಎಂದು ಸಂಶಯದಿಂದಲೇ ನೋಡಲೇಬೇಕಾಗುತ್ತದೆ. ಸಂವಿಧಾನದಲ್ಲೇ ಜಾತ್ಯಾತೀತದ ಬಗ್ಗೆ ಪ್ರಸ್ತಾಪವಿದೆ. ಅದನ್ನು ಒಪ್ಪಿಕೊಳ್ಳಬೇಕು ಎಂದು ಕೆಲವರು ಹೇಳುತ್ತಾರೆ. ಸಂವಿಧಾನದ ಮೇಲೆ ನನಗೆ ಗೌರವವಿದೆ. ಸಂವಿಧಾನ ಕಾಲಕ್ಕೆ ತಕ್ಕಂತೆ ಸಾಕಷ್ಟು ಬಾರಿ ಬದಲಾವಣೆಯಾಗಿದೆ. ಮುಂದೆಯೂ ಬದಲಾಗುತ್ತದೆ. ಸಂವಿಧಾನ ಬದಲಾಯಿಸುವುದಕ್ಕೋಸ್ಕರವೇ ನಾವು ಬಂದಿರೋದು ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


