ಐಟಿ ದಾಳಿಗೂ ಮೊದಲು ಮತ್ತು ನಂತರ ನಡೆದದ್ದನ್ನು ಹೇಳಿದರೆ ಆಗಬಾರದ್ದೆಲ್ಲಾ ಆಗುತ್ತದೆ: ಡಿಕೆಶಿ
ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿನ್ನೆ ಹೊಸದೊಂದು ಕುತೂಹಲದ ಬಾಂಬ್ ಸಿಡಿಸಿದ್ದಾರೆ. ಆದಾಯ....

Published On :
ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿನ್ನೆ ಹೊಸದೊಂದು ಕುತೂಹಲದ ಬಾಂಬ್ ಸಿಡಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುವ ಮೊದಲು ಮತ್ತು ನಂತರ ಏನೆಲ್ಲಾ ನಡೆಯಿತು ಎಂಬುದನ್ನು ಹೇಳಿದರೆ ಆಗಬಾರದ್ದೆಲ್ಲಾ ಆಗುತ್ತದೆ, ವಿಷಯ ಎಲ್ಲೆಲ್ಲಿಗೋ ಹೋಗುತ್ತದೆ, ಅದರ ಪರಿಣಾಮ ಜೋರಾಗಬಹುದು ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಪಕ್ಷಕ್ಕೆ ಸೇರಿಕೊಳ್ಳುವಂತೆ ಬಿಜೆಪಿ ಆಹ್ವಾನ ನೀಡಿತ್ತೇ ಎಂದು ಸುದ್ದಿಗಾರರು ಕೇಳಿದಾಗ ಡಿ.ಕೆ.ಶಿವಕುಮಾರ್ ಈ ರೀತಿ ಉತ್ತರಿಸಿದರು.
ಬಿಜೆಪಿಯ ಹಿರಿಯ ಮುಖಂಡರೊಬ್ಬರು ಪಕ್ಷಕ್ಕೆ ಆಹ್ವಾನಿಸಿದ್ದಕ್ಕೆ ತಿರಸ್ಕರಿಸಿದ ಕಾರಣ ಡಿಕೆಶಿ ಮನೆ ಮೇಲೆ ಐಟಿ ದಾಳಿ ನಡೆಸಲಾಯಿತು ಎಂಬ ವದಂತಿ ಹಬ್ಬಿತ್ತು. ಈ ಸಂಬಂಧ ನಿಮಗೆ ಬಿಜೆಪಿ ಸೇರಲು ಆಹ್ವಾನ ಬಂದಿತ್ತೇ ಎಂದು ನಿನ್ನೆ ಸುದ್ದಿಗಾರರು ಅವರನ್ನು ಕೇಳಿದಾಗ, ಏನೆಲ್ಲಾ ಆಯಿತು ಎಂಬ ಬಗ್ಗೆ ನಾನು ಈಗ ಮಾತನಾಡಿದರೆ ಆಗಬಾರದ್ದೆಲ್ಲಾ ಆಗುತ್ತದೆ. ಹೆರಿಗೆ ನೋವು ಏನೆಂಬುದು ಅನುಭವಿಸಿದವರಿಗೆ ಗೊತ್ತು. ಗುಜರಾತ್ ಫಲಿತಾಂಶ ಬಂದ ಬಳಿಕ ಮಾತನಾಡುತ್ತೇನೆ, ಅಲ್ಲಿಯವರೆಗೆ ಏನೂ ಹೇಳುವುದಿಲ್ಲ ಎಂದು ಉತ್ತರಿಸಲು ನಿರಾಕರಿಸಿದರು.
ನಿನ್ನೆ ಡಿಕೆಶಿಯವರ ಸದಾಶಿವನಗರ ನಿವಾಸಕ್ಕೆ ಬೇಲಿ ಮಠದ ಶ್ರೀಗಳು, ಸಚಿವ ಸತೀಶ್ ಜಾರಕಿಹೊಳಿ ಮೊದಲಾದವರು ಭೇಟಿ ಮಾಡಿ ಧೈರ್ಯ ತುಂಬಿದ್ದರು. ಕಳೆದ ಮೂರು ದಿನಗಳಿಂದ ಸಾಕಷ್ಟು ಶ್ರೀಗಳು ಆಶೀರ್ವಾದ ಮಾಡಿ ಮನಸ್ಸಿಗೆ ಸಮಾಧಾನ ಹೇಳುತ್ತಿದ್ದಾರೆ. ಸುತ್ತೂರು ಮಠದ ಶ್ರೀಗಳು ಕೂಡ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಇವರೆಲ್ಲಾ ನನ್ನ ಹಿಂದಿನ ಶಕ್ತಿ ಎಂದು ಡಿಕೆಶಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


