ರಾಜಕೀಯ

ಯಡಿಯೂರಪ್ಪ-ಈಶ್ವರಪ್ಪ ಕಚ್ಚಾಟಕ್ಕೆ ಶಾಕ್ : ನಾಲ್ವರು ಬಿಜೆಪಿ ನಾಯಕರಿಗೆ ಕೊಕ್

ರಾಜ್ಯ ಬಿಜೆಪಿಯಲ್ಲಿ ಉದ್ಭವವಾಗಿರುವ ಭಿನ್ನಮತ ಶಮನಗೊಳಿಸಲು ಬೆಂಗಳೂರಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳಿಧರ ರಾವ್ ..

ಯಡಿಯೂರಪ್ಪ-ಈಶ್ವರಪ್ಪ ಕಚ್ಚಾಟಕ್ಕೆ ಶಾಕ್ : ನಾಲ್ವರು ಬಿಜೆಪಿ ನಾಯಕರಿಗೆ ಕೊಕ್
ಈಶ್ವರಪ್ಪ ಮತ್ತು ಯಡಿಯೂರಪ್ಪ
Published On :
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉದ್ಭವವಾಗಿರುವ ಭಿನ್ನಮತ ಶಮನಗೊಳಿಸಲು ಬೆಂಗಳೂರಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳಿಧರ ರಾವ್ ಇಬ್ಬರ ನಡುವಿನ ಜಗಳ ಬಗೆಹರಿಸಲು ಮುಂದಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಹಲವು ಬಿಜೆಪಿ ನಾಯಕರ ಜೊತೆ ಚರ್ಚಿಸಿದ್ದಾರೆ.
ಬಿಜೆಪಿ ರಾಜ್ಯ ನಾಯಕರ ಜೊತೆ ಸಭೆ ನಡೆಸಿದ ಮುರುಳಿದರ ರಾವ್ ರಾಜ್ಯ ಬಿಜೆಪಿ ಉಪಾಧ್ಯಕ್ಷರುಗಳಾದ ಭಾನು ಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನಾ, ರೈತ ಮೋರ್ಚಾ ಉಪಾಧ್ಯಕ್ಷ ರೇಣುಕಾಚಾರ್ಯ, ಮತ್ತು ಪಕ್ಷದ ವಕ್ತಾರ ಜಿ, ಮಧುಸೂದನ್ ಅವರನ್ನು ಕೂಡಲೆ ಜಾರಿಗೆ ಬರುವಂತೆ ಅವರ ಹುದ್ದೆಗಳಿಂದ ವಜಾಗೊಳಿಸಿದ್ದಾರೆ. ಶಿವಮೊಗ್ಗದಿಂದ ಸಂಜೆ ತಡವಾಗಿ ಬೆಂಗಳೂರಿಗೆ ಆಗಮಿಸಿದ ಈಶ್ವರಪ್ಪ ಪಕ್ಷದ ಯಾರೋಬ್ಬರನ್ನು ಸಂಪರ್ಕಿಸಿಲ್ಲ. 
ಇತ್ತೀಚೆಗೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಈ ಆದೇಶ ಜಾರಿ ಮಾಡಿದ್ದಾರೆ. ಆದರೆ ಈ ಹುದ್ದೆಗಳಿಗೆ ಬದಲಿ ನಾಯಕರನ್ನು ಇದುವರೆಗೂ ಘೋಷಿಸಿಲ್ಲ, ಇತ್ತೀಚೆಗೆ ಈಶ್ವರಪ್ಪ ನಡೆಸಿದ ಬಹಿರಂಗ ಸಭೆಗಳಲ್ಲಿ ಭಾನುಪ್ರಕಾಶ್ ಈಶ್ವರಪ್ಪ ಜೊತೆ ವೇದಿಕೆ ಹಂಚಿಕೊಂಡಿದ್ದರು.
ಮುರುಳಿಧರ ರಾವ್ ಅವರನ್ನು ಭೇಟಿ ಮಾಡಿದ ಹಲವು ರಾಜ್ಯ ಮುಖಂಡರು ಇಬ್ಬರು ನಾಯಕರ ಬಹಿರಂಗ ಕಚ್ಚಾಟದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇಬ್ಬರ ಜಗಳದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಬಹಿರಂಗ ವಾಗಿ ವಾಗ್ದಾಳಿ ನಡೆಸುತ್ತಿರುವ ಈಶ್ವರಪ್ಪರನ್ನು ನಿಯಂತ್ರಣಕ್ಕೆ ತರಲು ಅವರನ್ನು ಪಕ್ಷದಿಂದ ವಜಾಗೊಳಿಸಬೇಕೆಂದು ಕೆಲ ಮುಖಂಡರು ಒತ್ತಾಯಿಸಿದ್ದಾರೆ. 
ಸಭೆ ನಡೆಸಿದ ನಂತರ ಯಡಿಯೂರಪ್ಪ ಮತ್ತು ಮುರುಳಿಧರ ರಾವ್  ಪ್ರತ್ಯೇಕ ವಿಮಾನಗಳಲ್ಲಿ ಆಗಮಿಸಿದರು. ಯಡಿಯೂರಪ್ಪ ನೇರವಾಗಿ ತಮ್ಮ ಮನೆಗೆ ತೆರಳಿದರು, ಮೊದಲೇ ನಿಗದಿತ ಕಾರ್ಯಕ್ರಮಳಿಗಾಗಿ ಯಡಿಯೂರಪ್ಪ ತಡರಾತ್ರಿ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.