ನನ್ನ ಸಾವಿಗೆ ಜೇವರ್ಗಿ ಶಾಸಕ ಕಾರಣ: ಡೆತ್ ನೋಟ್ ಬರೆದಿಟ್ಟು ಆಪ್ ಕಾರ್ಯಕರ್ತ ಆತ್ಮಹತ್ಯೆ
ಜೇವರ್ಗಿ ಶಾಸಕ ಹಾಗೂ ಮಾಜಿಸಿಎಂ ಧರ್ಮಸಿಂಗ್ ಅವರ ಪುತ್ರನ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕು ಆಮ್ ಆದ್ಮಿ ಪಾರ್ಟಿ...

ಶಹಾಪುರ: ಜೇವರ್ಗಿ ಶಾಸಕ ಹಾಗೂ ಮಾಜಿ ಸಿಎಂ ಧರ್ಮಸಿಂಗ್ ಅವರ ಪುತ್ರನ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕು ಆಮ್ ಆದ್ಮಿ ಪಾರ್ಟಿ (ಎಎಪಿ) ಘಟಕದ ಅಧ್ಯಕ್ಷ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರ ಹೊರವಲಯದ ಸಿದ್ದಲಿಂಗೇಶ್ವರ ಬೆಟ್ಟದ ಸಮೀಪ ನಡೆದಿದೆ.
ಜೇವರ್ಗಿಯ ಗಣೇಶ ಕೋಬಾಳಕರ್ (35) ಆತ್ಮಹತ್ಯೆ ಮಾಡಿಕೊಂಡವರು. ಮೃತನ ಬಳಿ ಡೆತ್‌ನೋಟ್ ಪತ್ತೆಯಾಗಿದ್ದು ನನ್ನ ಸಾವಿಗೆ ಜೇವರ್ಗಿ ಶಾಸಕ ಅಜಯ್‌ಸಿಂಗ್ ಅವರೇ ಕಾರಣ. ನನ್ನ ಕೊಲ್ಲಿಸಲು ಸುಫಾರಿ ಕೊಟ್ಟಿದ್ದಾರೆ.
ಎರಡು ದಿನಗಳ ಹಿಂದೆ ನನ್ನ ಅಪಹರಣ ಮಾಡಿದರು. ನಾನು ಅವರಿಂದ ತಪ್ಪಿಸಿಕೊಂಡು ಶಹಾಪುರಕ್ಕೆ ಬಂದೆ. ರಾಜಕೀಯದಲ್ಲಿ ಅವರ ಮುಂದೆ ನಾನು ಏನೂ ಅಲ್ಲ. ಅವರು ನನ್ನ ಮೇಲೆ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ ಎಂದು ಬರೆಯಲಾಗಿದೆ.
ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡೆತ್ ನೋಟ್ ತನಿಖೆಗಾಗಿ ಬೆಂಗಳೂರಿಗೆ ಕಳುಹಿಸುವುದಾಗಿ ಅವರು ಹೇಳಿದ್ದಾರೆ. ಇನ್ನೂ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶಹಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಆದರೆ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನಾನು ಒಬ್ಬ ವೈದ್ಯ, ನನಗೆ ಪ್ರಾಣ ಉಳಿಸಲು ಪ್ರಯತ್ನ ಮಾಡುವುದು ಗೊತ್ತೆ ಹೊರತು ಪ್ರಾಣ ತೆಗೆಯಲು ಬರುವುದಿಲ್ಲ. ಆ ವ್ಯಕ್ತಿ ನನಗೆ ಪರಿಚಯವಿಲ್ಲ ಎಂದು ಶಾಸಕ ಡಾ. ಅಜಯ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


