ಸಮಸ್ಯೆ ಬಗೆಹರಿಸದಿದ್ರೆ ಪ್ಯಾಕ್ ಅಪ್ ಮಾಡಿಸ್ತೇನೆ: ಒಕ್ಕಲಿಗ ಸಂಘದ ಅಧ್ಯಕ್ಷ ಅಪ್ಪಾಜಿಗೌಡರಿಗೆ ಡಿಕೆಶಿ
ಒಕ್ಕಲಿಗರ ಸಂಘದಲ್ಲಿ ಮೂಡಿರುವ ಸಮಸ್ಯೆಯನ್ನು ಬಗೆಹರಿಸಬೇಕು, ಇಲ್ಲದಿದ್ದರೇ ಪ್ಯಾಕ್ ಅಪ್ ಮಾಡಿಸುವುದು ಹೇಗೆಂದು ನನಗೆ ಗೊತ್ತಿದೆ ಎಂದು ಇಂಧನ ಸಚಿವ...

ಬೆಂಗಳೂರು: ಒಕ್ಕಲಿಗರ ಸಂಘದಲ್ಲಿ ಮೂಡಿರುವ ಸಮಸ್ಯೆ ಬಗೆಹರಿಯದೆ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಘದ ಅಧ್ಯಕ್ಷದ ಬಗ್ಗೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಶ್ರೀಗಂಧ ಕಾವಲ್ ನಲ್ಲಿ ನಡೆದ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಒಕ್ಕಲಿಗರ ಸಂಘದಲ್ಲಿ ಹಲವು ದಿನಗಳಿಂದ ಸಮಸ್ಯೆ ಉಂಟಾಗಿದೆ. ಸಂಘದ ಅಧ್ಯಕ್ಷರು ನಿರ್ದೇಶಕರು ಕುರ್ಚಿಗೆ ಅಂಟಿಕೊಂಡಿದ್ದಾರೆ. ಇದೆಲ್ಲಾವನ್ನು ಬಿಟ್ಟು ಸಮುದಾಯದ ಅಭಿವೃದ್ಧಿ ಕಡೆಗೆ ಗಮನ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸಂಘದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವತ್ತ ಸಂಘದ ಅಧ್ಯಕ್ಷರು ಗಮನ ಹರಿಸಬೇಕು, ಸಮಸ್ಯೆ ಬಗೆಹರಿಸಲು ಸ್ವಾಮಿಜಿಗಳು ಮುಂದಾಗಬೇಕು ಎಂದು ನಿರ್ಮಲಾನಂದ ಸ್ವಾಮೀಜಿ ಬಳಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
(ಸೂಚನೆ: ಬೆಂಗಳೂರಿನ ಶ್ರೀಗಂಧ ಕಾವಲ್ ನಲ್ಲಿ ನಡೆದ ಆಸ್ಪತ್ರೆ ಉದ್ಘಾಟನೆ ಸಮಾರಂಭದ ಬಗ್ಗೆ ಕನ್ನಡಪ್ರಭ.ಕಾಂ ನಲ್ಲಿ ಪ್ರಕಟವಾಗಿದ್ದ ವರದಿಗೆ 'ಸಮಸ್ಯೆ ಬಗೆಹರಿಸದಿದ್ರೆ ಪ್ಯಾಕ್ ಅಪ್ ಮಾಡಿಸ್ತೇನೆ: ಆದಿ ಚುಂಚನಗಿರಿ ಶ್ರೀಗಳಿಗೆ ಡಿಕೆಶಿ ಧಮ್ಕಿ' ಎಂಬ ಶೀರ್ಷಿಕೆ ನೀಡಲಾಗಿತ್ತು. ಆದರೆ ಡಿ.ಕೆ ಶಿವಕುಮಾರ್ ಆದಿ ಚುಂಚನಗಿರಿಯ ಶ್ರೀಗಳಿಗೆ ಧಮ್ಕಿ ಹಾಕಿಲ್ಲವೆಂದು ತಿಳಿದುಬಂದಿದೆ. ಶೀರ್ಷಿಕೆಯಿಂದ ಉಂಟಾಗಿದ್ದ ಗೊಂದಲಕ್ಕೆ ಕನ್ನಡಪ್ರಭ.ಕಾಂ ವಿಷಾದಿಸುತ್ತದೆ.)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


