ಶ್ರೀರಾಮ, ಶ್ರೀ ಕೃಷ್ಣ ಮಾಂಸಹಾರಿಗಳಾಗಿದ್ದರು: ಸಚಿವ ಪ್ರಮೋದ್ ಮದ್ವರಾಜ್ ವಿವಾದಾತ್ಮಕ ಹೇಳಿಕೆ
ಶ್ರೀ ಕೃಷ್ಣ ಮತ್ತು ಶ್ರೀರಾಮ ಇಬ್ಬರು ಮಾಂಸಾಹಾರಿಗಳಾಗಿದ್ದರು ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿವಾದಾತ್ಮಕ ಹೇಳಿಕೆ

ಉಡುಪಿ: ಶ್ರೀಕೃಷ್ಣ ಮತ್ತು ಶ್ರೀರಾಮ ಇಬ್ಬರು ಮಾಂಸಾಹಾರಿಗಳಾಗಿದ್ದರು ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಆಹಾರ ಪದ್ಧತಿ ಬಗ್ಗೆ ಚರ್ಚೆ ಆಗುತ್ತಿದೆ. ಸಾಕಷ್ಟು ಮಂದಿ ವಿದ್ವಾಂಸರಿದ್ದಾರೆ. ಈ ಬಗ್ಗೆ ಚರ್ಚೆ ಆಗಲಿ. ಉದ್ದೇಶಪೂರ್ವಕವಾಗಿ ಈ ಮಾತನ್ನು ಹೇಳಿದ್ದೇನೆ ಎಂದರು.
ಮಹಾಸಾಧನೆ ಮಾಡಲು ಜಾತಿ ಮುಖ್ಯ ಅಲ್ಲ. ಮಹಾಭಾರತ ಬರೆದ ವೇದವ್ಯಾಸ ಮದುವೆ ಆಗದ ಮೀನುಗಾರ ಮಹಿಳೆಯ ಪುತ್ರ. ಈ ಕಾಲದಲ್ಲಿ ಅಂತವರು ಇರುತ್ತಿದ್ದರೆ ಸಮಾಜ ಬಹಿಷ್ಕಾರ ಹಾಕುತ್ತಿತ್ತು ಎಂದು ಅವರು ಹೇಳಿದ್ದಾರೆ.
ಇದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ಸ್ಥಳೀಯ ಬಿಜೆಪಿ ಮುಖಂಡರು, ಪ್ರಮೋದ್ ಮಧ್ವರಾಜ್ ಹೇಳಿಕೆ ಅಸಮಂಜಸವಾಗಿದೆ. ಇಂಥಹ ಹೇಳಿಕೆಗಳು ಅನಾವಶ್ಯಕ, ಸರಿಯಾದ ತಿಳುವಳಿಕೆ ಇಲ್ಲದೇ ಇಂಥಹ ಹೇಳಿಕೆ ನೀಡಿದ್ದಾರೆ, ಧಾರ್ಮಿಕ ವಿಷಯದಲ್ಲಿ ಅವರು ತಕ್ಷರು ಅಲ್ಲ, ವಿದ್ವಾಂಸರು ಅಲ್ಲ, ಇಂಥಹ ಹೇಳಿಕೆಗಳು ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತವೆ ಎಂದು ಬಿಜೆಪಿ ಉಡುಪಿ ಜಿಲ್ಲೆ ಕಾರ್ಯಕಾರಿ ಮಂಡಳಿ ಸದಸ್ಯ ಉದಯ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


