ರಾಜಕೀಯ

ರೆಡ್ಡಿ ಪುತ್ರಿ ವಿವಾಹಕ್ಕೆ ಕಪ್ಪುಹಣ: ಪ್ರದಾನಿ ಮೋದಿಗೆ ದೇವೇಗೌಡ ಪತ್ರ

ಅಕ್ರಮ ಗಣಿಗಾರಿಕೆ ಮಾಡಿ ಸಂಪಾದಿಸಿದ ಕಪ್ಪು ಹಣದಿಂದ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಯನ್ನು ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ

ರೆಡ್ಡಿ ಪುತ್ರಿ ವಿವಾಹಕ್ಕೆ ಕಪ್ಪುಹಣ: ಪ್ರದಾನಿ ಮೋದಿಗೆ ದೇವೇಗೌಡ ಪತ್ರ
ಎಚ್.ಡಿ ದೇವೇಗೌಡ
Published On :

ಬೆಂಗಳೂರು: ಅಕ್ರಮ ಗಣಿಗಾರಿಕೆ ಮಾಡಿ ಸಂಪಾದಿಸಿದ ಕಪ್ಪು ಹಣದಿಂದ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಯನ್ನು ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಕಪ್ಪು ಹಣ ವಿರುದ್ಧ ಕ್ರಮಕ್ಕೆ ಅವರು ತಗೆದುಕೊಂಡಿರುವ ನಿರ್ಧಾರವನ್ನು ಶ್ಲಾಘಿಸಿದ್ದೇನೆ ಮತ್ತು ಕಪ್ಪು ಹಣ ಪತ್ತೆಗೆ ನನ್ನ ಬೆಂಬಲ ಯಾವತ್ತೂ ಇದೆ ಎಂದು ಪತ್ರ ಬರೆದಿರುವ ದೇವೇಗೌಡರು ದೇಶದಲ್ಲಿ ಕೆಲ ಜನ ಬಡತನದಲ್ಲಿ ನರಳುತ್ತಿದ್ದಾರೆ.  ಜನಾರ್ದನ ರೆಡ್ಡಿಯವರು 200 ಕೋಟಿ ರೂ. ಖರ್ಚು ಮಾಡಿ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದಾರೆ. ರೆಡ್ಡಿ ಮಗಳ ಮದುವೆಗೆ ಕರ್ನಾಟಕ ಬಿಜೆಪಿಯ ನಿಮ್ಮ ಸಹೊದ್ಯೋಗಿಗಳು ಕೂಡ ಭಾಗವಹಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಮೂಲಕ ನಿಮ್ಮ ಆಶಯವನ್ನು ರಾಜ್ಯ ಬಿಜೆಪಿ ನಾಶ ಮಾಡಿದೆ ಎಂದು ಪತ್ರದಲ್ಲಿ ದೂರಿರುವ ವಿಚಾರವನ್ನು ಅವರು ತಿಳಿಸಿದರು.

ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮದಿಂದ ಬಡವರಿಗೆ ಅನಾನುಕೂಲವಾಗುತ್ತಿದೆ. ದಿನ ನಿತ್ಯದ ಮೂಲಭೂತ ಅವಶ್ಯಕತೆಗಳ ಬಳಕೆಗೆ ಜನಸಾಮನ್ಯರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ತೊಂದರೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಜನರಿಗೆ ಡಿಸಿಸಿ ಬ್ಯಾಂಕುಗಳಲ್ಲಿ ಹಣದ ವ್ಯವಹಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿರುವುದಾಗಿ ದೇವೇಗೌಡ ತಿಳಿಸಿದ್ದಾರೆ.

ಕರ್ನಾಟಕದಲ್ಲಿ 21 ಡಿಸಿಸಿ ಬ್ಯಾಂಕ್ ಗಳಿದ್ದು ಅವುಗಳದ್ದು ಒಟ್ಟು 706 ಶಾಖೆಗಳಿವೆ ಎಂದು ಹೇಳಿದ್ದಾರೆ. ಡಿಸಿಸಿ ಬ್ಯಾಂಕ್ ಗಳಿಂದ ಬೆಳೆ ಸಾಲ ಪಡೆದ ರೈತರು ಬಡ್ಡಿ ಸಬ್ಸಿಡಿ ಪಡೆಯಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.