ಮಂಡ್ಯ ಮಾರುಕಟ್ಟೆಗೆ ಭೇಟಿ ನೀಡಿದ ರಮ್ಯಾ ವಿರುದ್ಧ ಆಕ್ರೋಶ
ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ತಮ್ಮ ನಾಯಕ ರಾಹುಲ್ ಗಾಂಧಿ ರೀತಿಯಲ್ಲಿ ಶುಕ್ರವಾರ ಮಂಡ್ಯದ ಮಾರುಕಟ್ಟೆಗೆ...

Published On :
ಮಂಡ್ಯ: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ತಮ್ಮ ನಾಯಕ ರಾಹುಲ್ ಗಾಂಧಿ ರೀತಿಯಲ್ಲಿ ನೋಟ್ ನಿಷೇಧದಿಂದ ಕಂಗೇಟ್ಟಿರುವ ಸಾಮಾನ್ಯ ಜನರನ್ನು ವಿಚಾರಿಸಲು ಹೋಗಿ ಮುಖಭಂಗ ಅನುಭವಿಸಿದ ಘಟನೆ ಶುಕ್ರವಾರ ಮಂಡ್ಯದಲ್ಲಿ ನಡೆದಿದೆ.
ರಮ್ಯಾ ಅವರು ನಿನ್ನೆ ಮಂಡ್ಯ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿದ್ದ ಕೆಲ ವರ್ತಕರು ಹಾಗೂ ಗ್ರಾಹಕರು ರಮ್ಯ ವಿರುದ್ಧ ಆಕ್ರೋಶ ವ್ಯಕ್ತಪಿಡಿಸಿ ಮೋದಿ, ಮೋದಿ ಎಂದು ಜೈಕಾರ ಕೂಗಿದರು. ಇದರಿಂದ ಕಾಂಗ್ರೆಸ್ ನಾಯಕಿ ತೀವ್ರ ಮುಜಗರ ಎದುರಿಸಬೇಕಾಯಿತು.
ಇತ್ತೀಚಿಗಷ್ಟೇ ದೆಹಲಿ ಹಾಗೂ ಮುಂಬೈನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬ್ಯಾಂಕ್ ಗಳಿಗೆ ಭೇಟಿ ನೀಡಿ, ಕ್ಯೂನಲ್ಲಿ ನಿಂತಿದ್ದ ಗ್ರಾಹಕರನ್ನು ವಿಚಾರಿಸಿದ್ದರು. ಆದರೆ ರಮ್ಯಾ ಬ್ಯಾಂಕ್ ಗೆ ತೆರಳುವ ಬದಲು ಮಂಡ್ಯದ ಮಾರುಕಟ್ಟೆಗೆ ಭೇಟಿ ನೀಡಿ ಪರೀಶೀಲನೆ ನಡೆಸುದರು.
ರಮ್ಯಾ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿದ ಜನ, ಕಾವೇರಿ ನೀರಿನ ಹೋರಾಟದಲ್ಲಿ ಭಾಗವಹಿಸದ ನೀವು ಈಗ ಮಂಡ್ಯಕ್ಕೆ ಏಕೆ ಬಂದಿದ್ದೀರಿ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ರಮ್ಯಾ ಸುಪ್ರೀಂ ಕೋರ್ಟ್ ನಲ್ಲಿ ನಿಮ್ಮ ತಾತ ನಿಂತಿದ್ರ ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಯುವಕ ಹೌದು, ನಮ್ಮ ತಾತ ಮಾದೇ ಗೌಡ್ರು ನಿಂತಿದ್ರು ಎಂದು ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ರಮ್ಯಾ ಮಂಡ್ಯಕ್ಕೆ ಬರುತ್ತಿದ್ದಂತೆಯೇ ನಗರದ ಮಾರ್ಕೆಟ್‌ನಲ್ಲಿ ರಮ್ಯಾ ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ್ದಾರೆ. ಇಷ್ಟು ದಿನಗಳವರೆಗೆ ಬಾರದೆ ಇಂದು ಬಂದ್ದಿದ್ದಾರೆ. ಕಾವೇರಿ ಹೋರಾಟದ ಸಂದರ್ಭದಲ್ಲಿ ಯಾಕೆ ಬರಲಿಲ್ಲ ಎಂದಿಲ್ಲ ಪ್ರಶ್ನೆಗಳನ್ನು ಹಾಕುವ ಮೂಲಕ ಮಂಡ್ಯ ಜನತೆ ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


