ಕಾಂಗ್ರೆಸ್ ಬಗ್ಗೆ ನಿನ್ನ ಕುಟುಂಬಕ್ಕೆ ಸ್ವಲ್ಪವೂ ನಿಷ್ಠೆ ಇಲ್ವಾ ಶಾಸಕನಿಗೆ ಸಿಎಂ ತರಾಟೆ
ಅಧಿಕಾರ ಪಡೆಯಲು ಪಕ್ಷ ಬೇಕು, ಶಾಸಕನಾಗಲು ಪಕ್ಷ ಬೇಕು, ಬ್ಯುಸಿನೆಸ್ ಮಾಡಲು ಪಕ್ಷ ಬೇಕು, ನಿನ್ನ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷದ ಬಗ್ಗೆ ಸ್ವಲ್ಪವು ನಿಷ್ಠೆ ಇಲ್ಲವಾ ..

ಬೆಂಗಳೂರು: ಅಧಿಕಾರ ಪಡೆಯಲು ಪಕ್ಷ ಬೇಕು, ಶಾಸಕನಾಗಲು ಪಕ್ಷ ಬೇಕು, ಬ್ಯುಸಿನೆಸ್ ಮಾಡಲು ಪಕ್ಷ ಬೇಕು, ನಿನ್ನ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷದ ಬಗ್ಗೆ ಸ್ವಲ್ಪವು ನಿಷ್ಠೆ ಇಲ್ಲವಾ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಹಿಯುದ್ದೀನ್ ಬಾವಾಗೆ ಯದ್ವತದ್ವಾ ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಮೊಹಿನುದ್ದೀನ್ ಬಾವಾ ಸಹೋದರ ಬಿಎಂ ಫಾರೂಕ್ ಜೆಡಿಎಸ್ ನಿಂದ ರಾಜ್ಯಸಭೆಗೆ ಸ್ಪರ್ಧಿಸಿರುವುದರ ಬಗ್ಗೆ ಆಕ್ರೋಶಗೊಂಡ ಸಿದ್ದರಾಮಯ್ಯ, ಶಾಸಕ ಮೊಹಿಯುದ್ದೀನ್ ಬಾವಾ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಿನ್ನ ಬೆಂಬಲವಿಲ್ಲದೇ ನಿನ್ನ ಸಹೋದರ ಜೆಡಿಎಸ್ ನಿಂದ ಹೇಗೆ ಕಣಕ್ಕಿಳಿಯಲು ಸಾಧ್ಯ? ನೀನು ಒಂದು ಮಾತು ಹೇಳಿದ್ದರೆ...ಫಾರೂಕ್ ನಾಮಪತ್ರ ವಾಪಸ್ ಪಡೆಯುತ್ತಿದ್ದ. ಉದ್ದೇಶಪೂರ್ವಕವಾಗಿಯೇ ಜೆಡಿಎಸ್ ನಿಂದ ಕಣಕ್ಕೆ ಇಳಿಸಿದ್ದೀಯಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


