ಮೇಲ್ಮನೆ ಸದಸ್ಯರಿಗೆ ಸಿಎಂ ಪಾಠ: ಚಕ್ಕರ್ ಹೊಡೆದ ಸದಸ್ಯರು
ವಿಧಾನಮಂಡಲದ ಕಲಾಪಗಳಿಗೆ ಶಾಸಕರು ಚಕ್ಕರ್ ಹೊಡೆಯುವುದು ಸಾಮಾನ್ಯ. ಆದರೆ, ತರಬೇತಿ ಕಾರ್ಯಕ್ರಮಕ್ಕೂ ಗೈರುಹಾಜರಾಗುವ ಮೂಲಕ ಸಂಸದೀಯ..

ಬೆಂಗಳೂರು: ವಿಧಾನಮಂಡಲದ ಕಲಾಪಗಳಿಗೆ ಶಾಸಕರು ಚಕ್ಕರ್ ಹೊಡೆಯುವುದು ಸಾಮಾನ್ಯ. ಆದರೆ, ತರಬೇತಿ ಕಾರ್ಯಕ್ರಮಕ್ಕೂ ಗೈರುಹಾಜರಾಗುವ ಮೂಲಕ ಸಂಸದೀಯ ಕಲಾಪದ ಬಗೆಗಿನ ತಮ್ಮ ಆಸಕ್ತಿ ಅನಾವರಣ ಮಾಡಿದ್ದಾರೆ.
ವಿಧಾನಸಭೆ ಹಾಗೂ ವಿಧಾನಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ವಿಧಾನಸೌಧದಲ್ಲಿ ಗುರುವಾರ ಆಯೋಜಿಸಲಾಗಿದ್ದ ತರಬೇತಿ ಶಿಬಿರಕ್ಕೆ 11 ಶಾಸಕರು ಮಾತ್ರ ಹಾಜರಾಗಿದ್ದರು. 66 ಶಾಸಕರಿಗೆ ಆಹ್ವಾನ ನೀಡಲಾಗಿತ್ತು. ಸಿಎಂ ಕಾರ್ಯಕ್ರಮಕ್ಕೆ ಹಾಜರಾದಾಗ ಸಭಾಂಗಣದಲ್ಲಿ 6 ಎಂಎಲ್ಸಿಗಳಿದ್ದರು. ಸಿಎಂ ಭಾಷಣ ಮುಗಿಯುವ ವೇಳೆಗೆ 11 ಮಂದಿಯಾದರು.
ಶಾಸಕರು ಶಿಬಿರಕ್ಕೆ ಬರದಿರುವ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಸಿದ್ಧತೆ ಮಾಡಿಕೊಳ್ಳಿ: ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಶಾಸಕರು ಸದನಕ್ಕೆ ಬರುವಾಗ ಪೂರ್ಣ ಮಾಹಿತಿಯೊಂದಿಗೆ ಬರಬೇಕು. ‘ಹೊದ ಪುಟ್ಟ, ಬಂದ ಪುಟ್ಟ’ ಎಂಬ ರೀತಿಯಲ್ಲಿ ಸದನಕ್ಕೆ ಬಂದರೆ ಪ್ರಯೋಜನವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷ ಶಿವಶಂಕರರೆಡ್ಡಿ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


