'ಹಿರಿಯ ನಾಗರಿಕ'ರಿಗೆ ಗೇಟ್ ಪಾಸ್: ಸಿದ್ದು ಸಂಪುಟದಲ್ಲಿ ಯುವ ಸಚಿವರ ಕಾರುಬಾರು
ಪುನಾರಚನೆ ನಂತರ ಸಿದ್ದರಾಮಯ್ಯ ಸಂಪುಟದಲ್ಲಿ ಬಹುತೇಕ ಯುನಾಯಕರೇ ತುಂಬಿ ಹೋಗಿದ್ದಾರೆ. 60 ರಿಂದ 53 ವರ್ಷದ ಒಳಗಿನ ಹಿರಿಯ ..

ಬೆಂಗಳೂರು: ಪುನಾರಚನೆ ನಂತರ ಸಿದ್ದರಾಮಯ್ಯ ಸಂಪುಟದಲ್ಲಿ ಬಹುತೇಕ ಯುನಾಯಕರೇ ತುಂಬಿ ಹೋಗಿದ್ದಾರೆ. 60 ರಿಂದ 53 ವರ್ಷದ ಒಳಗಿನ ಹಿರಿಯ ನಾಯಕರನ್ನು ಸಂಪುಟದಿಂದ ಕೈಬಿಡಲಾಗಿದೆ. ಈ ಹಿಂದೆ ಬಹುತೇಕ 'ಹಿರಿಯ ನಾಗರಿಕ'ರಿಂದ ಸಂಪುಟ ತುಂಬಿತ್ತು.
ಉತ್ತಮವಾಗಿ ಕಾರ್ಯ ನಿರ್ವಹಿಸದ ನೆಪ ಹೇಳಿ ಹಿರಿಯ ಕಾಂಗ್ರೆಸ್ ನಾಯಕರನ್ನು ಸಚಿವ ಸಂಪುಟದಿಂದ ಕೈ ಬಿಡಲಾಗಿದೆ. 84 ವರ್ಷದ ಕಾಗೋಡು ತಿಮ್ಮಪ್ಪ ಸಂಪುಟದ ಹಿರಿಯ ಸಚಿವರಾಗಿದ್ದಾರೆ. 38 ವರ್ಷದ ಪ್ರಿಯಾಂಕ್ ಖರ್ಗೆ ಅತಿ ಕಿರಿಯ ವಯಸ್ಸಿನ ಸಚಿವ ಎಂಬ ಹೆಮ್ಮೆಗೆಪಾತ್ರರಾಗಿದ್ದಾರೆ.
ಸಂಪುಟದಲ್ಲಿ ಯುವ ನಾಯಕರೇ ಇರುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರ ಕಾರ್ಯ ವೈಖರಿಗಳು ಹೆಚ್ಚೆಚ್ಚು ಚೈತನ್ಯದಿಂದ ಕೂಡಿರುತ್ತವೆ. ಮತ್ತು 2018 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
ಸಂಪುಟದಿಂದ ಸಚಿವರನ್ನು ಕೈಬಿಡುವಾಗ ಸಿದ್ದರಾಮಯ್ಯ ಆಗಲಿ ಅಥವಾ ಹೈ ಕಮಾಂಡ್ ಆಗಲಿ ಸಚಿವರ ವಯಸ್ಸನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಜಾತಿ, ಪ್ರದೇಶ, ಕಾರ್ಯವೈಖರಿ ಸೇರಿದಂತೆ ಪ್ರಮುಖವಾಗಿ ವಿದ್ಯಾರ್ಹತೆಗೆ ಆದ್ಯತೆ ನೀಡಿ ಸಚಿವ ಸ್ಥಾನ ನೀಡಲಾಯಿತು.
ಒಟ್ಟಿನಲ್ಲಿ ಪುನಾರಚನೆಯಿಂದ 13 ಮಂದಿ ಸಂಪುಟ ಸೇರಿದ್ದಾರೆ. ಇದರಲ್ಲಿ 60 ವಯಸ್ಸು ಮೇಲ್ಪಟ್ಟವರು ಮೂರು ಮಂದಿ ಮಾತ್ರ ಇದ್ದಾರೆ, ಕಾಗೋಡು ತಿಮ್ಮಪ್ಪ(84), ಎಚ್,ವೈ ಮೇಟಿ(70), ಮತ್ತು ರಮೇಶ್ ಕುಮಾರ್(67), ಸಂಪುಟದಿಂದ ಕೈ ಬಿಟ್ಟಿರುವ ಸುಮಾರು 10 ಸಚಿವರು 60 ವರ್ಷ ದಾಟಿದವರಾಗಿದ್ದರು. ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಕೃಷ್ಣ ಬೈರೇಗೌಡ, ಪ್ರಮೋದ್ ಮಧ್ವರಾಜ್, ಎಸ್ ಎಸ್ ಮಲ್ಲಿಕಾರ್ಜನ್, ವಿನಯ್ ಕುಲಕರ್ಣಿ, ಶರಣ್ ಪ್ರಕಾಶ್ ಪಾಟೀಲ್, ಯು.ಟಿ ಖಾದರ್, ತನ್ವೀರ್ ಸೇಠ್ ಸಿದ್ದರಾಮಯ್ಯ ಸಂಪುಟದಲ್ಲಿರುವ ಯುವ ಸಚಿವರಾಗಿದ್ದಾರೆ.
ಯುವಕರಿಗೆ ಮಣೆ ಹಾಕಿರುವ ಸಿದ್ದರಾಮಯ್ಯ ಸಂಪುಟದಲ್ಲಿ 47 ವರ್ಷದ ದಿನೇಶ್ ಗುಂಡೂರಾವ್ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಗಿ ನೇಮಕಗೊಂಡಿದ್ದಾರೆ. ಇನ್ನೂ ಇಂಧನ ಸಚಿವ ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


