ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ: ಜೆಡಿಎಸ್ ನ 8 ಶಾಸಕರಿಗೆ ಅಗ್ನಿಪರೀಕ್ಷೆ
ಜೆಡಿಎಸ್ 8 ಬಂಡಾಯ ಶಾಸಕರನ್ನು ಅಮಾನತು ಸಂಬಂಧ ಸ್ಪೀಕರ್ ಕೆ.ಬಿ ಕೋಳಿವಾಡ್ ಇಂದು ವಿಚಾರಣೆ ನಡೆಸಲಿದ್ದಾರೆ..

ಬೆಂಗಳೂರು: ಜೆಡಿಎಸ್ 8 ಬಂಡಾಯ ಶಾಸಕರನ್ನು ಅಮಾನತು ಸಂಬಂಧ ಸ್ಪೀಕರ್ ಕೆ.ಬಿ ಕೋಳಿವಾಡ್ ಇಂದು ವಿಚಾರಣೆ ನಡೆಸಲಿದ್ದಾರೆ.
8 ಶಾಸಕರನ್ನು ಅನರ್ಹಗೊಳಿಸಬೇಕೆಂದು ಮನವಿ ಸಲ್ಲಿಸಿದ್ದ ಜೆಡಿಎಸ್ ನ ಇಬ್ಬರು ಶಾಸಕರುಗಳಾದ ಬಿ.ಬಿ ನಿಂಗಯ್ಯ ಮತ್ತು ಸಿಎನ್ ಬಾಲಕೃಷ್ಣ ಅವರಿಗೆ ಸ್ಪೀಕರ್ ಕೋಳಿವಾಡ್ ನೋಟೀಸ್ ನೀಡಿ ವಿವರಣೆ ನೀಡುವಂತೆ ಸೂಚಿಸಿದ್ದಾರೆ.
1986ರ ಕರ್ನಾಟಕ ವಿಧಾನಸಭೆ ನಿಯಮಗಳ ಪ್ರಕಾರ ಶಾಸಕರುಗಳಾದ ಜಮೀರ್ ಅಹಮದ್ ಖಾನ್, ಚಲುವರಾಯ ಸ್ವಾಮಿ, ಇಕ್ಬಾಲ್ ಅನ್ಸಾರಿ, ಎಚ್. ಸಿ ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಗೋಪಾಲಯ್ಯ, ಭೀಮಾ ನಾಯಕ್ ಮತ್ತು ಅಖಂಡ ಶ್ರೀನಿವಾಸ್ ಮೂರ್ತಿ ಅವರುಗಳನ್ನು ಅನರ್ಹಗೊಳಿಸಬೇಕೆಂದು ಸ್ಪೀಕರ್ ಗೆ ಮನವಿ ಸಲ್ಲಿಸಲಾಗಿತ್ತು.
ಈ ಸಂಬಂಧ ಕರ್ನಾಟಕ ವಿಧಾನಸಭೆ ನ್ಯಾಯಾಂಗ ಆಯೋಗವು ಶ್ರವಣಬೆಳಗೊಳದ ಜೆಡಿಎಸ್ ಶಾಸಕ ಬಾಲಕೃಷ್ಣ ಮತ್ತು ಮುದಿಗೆರೆ ಶಾಸಕ ಬಿ.ಬಿ ನಿಂಗಯ್ಯ ಅವರಿಗೆ ನೋಟೀಸ್ ನೀಡಿ ಸ್ಪೀಕರ್ ಮುಂದೆ ತಮ್ಮ ವಕೀಲರ ಜೊತೆ ಹಾಜರಾಗಬೇಕೆಂದು ತಿಳಿಸಿತ್ತು. ಇನ್ನು ಪಕ್ಷದಿಂದ ಅಮಾನತುಗೊಂಡಿರುವ 8 ಜೆಡಿಎಸ್ ಶಾಸಕರಿಗೂ ಸ್ಪೀಕರ್ ಮುಂದೆ ತಮ್ಮ ವಾದ ಮಂಡಿಸುವ ಅವಕಾಶ ನೀಡಲಾಗಿದೆ.
ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿ ಬಿಎಂ ಫಾರೂಕ್ ಗೆ ಮತಚಲಾಯಿಸಬೇಕೆಂದು ಪಕ್ಷ ವಿಪ್ ಜಾರಿ ಮಾಡಿತ್ತು, ವಿಪ್ ಉಲ್ಲಂಘಿಸಿ 8 ಶಾಸಕರು ಅಡ್ಡಮತದಾನ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


