ರಾಜಕೀಯ

ಗೂಳಿಹಟ್ಟಿ ಶರ್ಟ್ ಬಿಚ್ಚಿದ್ದ ಪ್ರಕರಣ: ಸದನದಲ್ಲಿ ಶಾಸಕರ ಪ್ರಬುದ್ಧ ವರ್ತನೆಗಾಗಿ ತರಬೇತಿ

ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಸದನದಲ್ಲಿ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ತರಬೇತಿ ಪಡೆದುಕೊಳ್ಳುವು...

ಗೂಳಿಹಟ್ಟಿ ಶರ್ಟ್ ಬಿಚ್ಚಿದ್ದ ಪ್ರಕರಣ:  ಸದನದಲ್ಲಿ ಶಾಸಕರ ಪ್ರಬುದ್ಧ ವರ್ತನೆಗಾಗಿ ತರಬೇತಿ
ಗೂಳಿಹಟ್ಟಿ ಶೇಖರ್
Published On :

ಬೆಂಗಳೂರು: ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಸದನದಲ್ಲಿ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ತರಬೇತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ವಿಧಾನಸೌಧ ಪ್ರವೇಶಕ್ಕೂ ಮುನ್ನ, ಸದವದ ರೀತಿ ರಿವಾಜು, ನಡತೆಗಳ ಬಗ್ಗೆ ಪ್ರತಿಯೊಬ್ಬ ಶಾಸಕರು ಚೆನ್ನಾಗಿ ತಿಳಿದು ಕೊಳ್ಳಬೇಕಿದೆ. ಉಭಯ ಸದನಗಳಲ್ಲಿ ಕೆಲ ಶಾಸಕರ ವರ್ತನೆಗೆ ಬೇಸತ್ತಿರುವ ಸ್ಪೀಕರ್ ಕೋಳಿವಾಡ ಶಾಸಕರಿಗೆ ತರಬೇತಿ ಅಗತ್ಯ ಎಂದು ಹೇಳಿದ್ದಾರೆ.

ಈ ಹಿಂದೆ ಗೂಳಿಹಟ್ಟಿ ಶೇಖರ್ ಶಾಸಕರಾಗಿದ್ದ ವೇಳೆ ವಿಧಾನಸಭೆಯಲ್ಲಿ ತಮ್ಮ ಶರ್ಟ್ ಬಿಚ್ಚಿ ಎಲ್ಲರ ಮುಂದೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣ ಸಂಬಂಧ, ಸಿಎಂ ಸಿದ್ದರಾಮಯ್ಯ ಅಧ್ಯಕ್ಷರಾಗಿರುವ ಶಾಸಕಾಂಗ ಆಡಳಿತ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಶಾಸಕರ ಎಲ್ಲಾ ವರ್ತನೆಗಳನ್ನು ಇಡೀ ಕರ್ನಾಟಕದ ಜನತೆ ಗಮನಿಸುತ್ತಾ ಇರುತ್ತಾರೆ. ಹೀಗಾಗಿ ಜನಪ್ರತಿನಿಧಿಗಳು ಪ್ರಜ್ಞೆ ಇಟ್ಟುಕೊಂಡು ವರ್ತಿಸಬೇಕು ಎಂಬುದರ ಬಗ್ಗೆ ಶಾಸಕರಿಗೆ ತರಬೇತಿ ನೀಡುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಹೊಸದಾಗಿ ಆಯ್ಕೆಯಾದ ಎಲ್ಲಾ ಶಾಸಕರುಗಳಿಗೂ ತರಬೇತಿ ಕಡ್ಡಾಯ ಎಂದು ಸ್ಪೀಕರ್ ಕೋಳಿವಾಡ ಆದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.