ಸದನದಲ್ಲಿ ಬಿಜೆಪಿ ವಿರುದ್ಧ ಮೈನಾರಿಟಿ ಕಾರ್ಡ್ ಪ್ಲೇ ಮಾಡಿದ ಸಿದ್ದರಾಮಯ್ಯ
ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ. ನೀವು ಹಣ ಪಡೆದು ವರ್ಗಾವಣೆ ಮಾಡುತ್ತೀರಿ. ಇಲ್ಲ ಕೆಲಸಕ್ಕೆ ಬಾರದ ಪೋಸ್ಟ್ ಗಳಿಗೆ ಹಾಕುತ್ತೀರಿ, ಎಂದು ಹೇಳಿದ್ ಶೆಟ್ಟರ್, ಐಎಎಸ್ ..

ಬೆಂಗಳೂರು: ಮಡಿಕೇರಿಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ ವಿಧಾನ ಮಂಡಲದ ಉಭಯ ಸದನಗಳಲ್ಲೂ ಪ್ರತಿಧ್ವನಿಸಿದೆ.
ಜಗದೀಶ್ ಶೆಟ್ಟರ್ ಅವರು ಸರ್ಕಾರದ ಆಡಳಿತ ವೈಖರಿಯನ್ನು ಕಟು ಶಬ್ಧಗಳಲ್ಲಿ ಟೀಕಿಸುತ್ತಾ, ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ. ನೀವು ಹಣ ಪಡೆದು ವರ್ಗಾವಣೆ ಮಾಡುತ್ತೀರಿ. ಇಲ್ಲ ಕೆಲಸಕ್ಕೆ ಬಾರದ ಪೋಸ್ಟ್ ಗಳಿಗೆ ಹಾಕುತ್ತೀರಿ, ಎಂದು ಹೇಳಿದ್ ಶೆಟ್ಟರ್, ಐಎಎಸ್ ಅಧಿಕಾರಿ ರಶ್ಮಿ ಮಹೇಶ್, ಮೃತ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ, ಇನ್ಸ್ ಪೆಕ್ಟರ್ ಜಿ.ಎನ್ ಮೋಹನ್, ಅವರಂತ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಾರೆಂದು ಪಟ್ಟಿ ನೀಡಿದರು. ನಿಮ್ಮ ಮಗನ ವಿರುದ್ಧ ಕೇಸು ಹಾಕಿದ್ದಕ್ಕೆ ಮೋಹನ್ ಎಂಬ ಅಧಿಕಾರಿಯನ್ನು ಅಮಾನತು ಮಾಡಿ ಸೇಡು ತೀರಿಸಿಕೊಂಡಿದ್ದೀರಿ. ಮಾಧ್ಯಮದವರು ಕೇಳಿದರೆ, ನನ್ನ ಮಗನ ಮೇಲೆ ಕೇಸು ಹಾಕಿದರೆ ಬಿಡಲು ಆಗುತ್ತಾ ಎಂದು ದರ್ಪ, ಅಹಂಕಾರ ಪ್ರದರ್ಶಿಸಿದ್ದೀರಿ ಎಂದು ವಾಗ್ಧಾಳಿ ನಡೆಸಿದರು.
ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗಣಪತಿ ಹೇಳಿಕೆಯಂತೆ ಗೃಹ ಸಚಿವ ಜಾರ್ಜ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಶೆಟ್ಟರ್ ನಿಮ್ಮ ಸರ್ಕಾರದ್ದು ದಪ್ಪ ಚರ್ಮ ಎಂದು ಟೀಕಿಸಿದರು.
ತಾಳ್ಮೆ ಕಳೆದು ಕೊಂಡು ಒಮ್ಮೆಲೆ ಸಿಟ್ಟಿನಿಂದ ಎದ್ದು ನಿಂತ ಸಿಎಂ, ನಾಲಿಗೆ ಬಿಗಿ ಹಿಡಿದು ಮಾತನಾಡಿ. ಹಣ ಪಡೆದಿದ್ದಕ್ಕೆ ನಿಮ್ಮಲ್ಲಿ ಏನು ದಾಖಲೆ ಇದೆ? ಹಣ ಪಡೆಯುವುದು ಬಿಜೆಪಿಯವರ ಸಂಸ್ಕೃತಿ. ನಿಮ್ಮ ಕಾಲದಲ್ಲಿ ಹಣ ಇಲ್ಲದೆ ಏನೂ ಆಗುತ್ತಿರಲಿಲ್ಲ. ನೀವು ಪ್ರತಿ ವಿಷಯವನ್ನೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಿರಿ. ನಿಮ್ಮ ಟಾರ್ಗೆಟ್ ಜಾರ್ಜ್ ಎಂಬುದು ನನಗೆ ಗೊತ್ತು. ಮೊದಲಿನಿಂದಲೂ ಪದೇ ಪದೇ ವಿನಾಕಾರಣ ಜಾರ್ಜ್, ಖಮರುಲ್ ಇಸ್ಲಾಂ, ರೋಷನ್ ಬೇಗ್ ರಾಜೀನಾಮೆ ಕೊಡಲಿ ಎಂಬುದೇ ನಿಮ್ಮ ಒತ್ತಾಯ. ನೀವು ಅಲ್ಪಸಂಖ್ಯಾತರ ವಿರೋಧಿಗಳು ಎಂದು ಏರಿದ ಧ್ವನಿಯಲ್ಲಿ ಹರಿಹಾಯ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


