ರಾಜಕೀಯ

ಟಿಕೆಟ್ ಗೆ ಪೈಪೋಟಿ

ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳಲ್ಲಿ ಮೈಕೊರೆಯುವ ಚಳಿಯೂ ಬಿಸಿ ಎನಿಸತೊಡಗಿದೆ. ಕ್ಷೇತ್ರಗಳು ತೆರವಾದ...

ಟಿಕೆಟ್ ಗೆ ಪೈಪೋಟಿ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳಲ್ಲಿ ಮೈಕೊರೆಯುವ ಚಳಿಯೂ ಬಿಸಿ ಎನಿಸತೊಡಗಿದೆ. ಕ್ಷೇತ್ರಗಳು ತೆರವಾದ ದಿನಗಳಿಂದಲೇ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿದ್ದಾರೆ. 
ಕಾಂಗ್ರೆಸ್‍ನಿಂದ ಕಳೆದ ಸಲ ಬೀದರ್ ನಲ್ಲಿ ಸೋತಿದ್ದ ರಹೀಂಖಾನ್‍ಗೆ ಹಾಗೂ ದೇವದುರ್ಗ ದಿಂದ ವೆಂಕ ಟೇಶ್ ನಾಯಕ್ ಪತ್ನಿ ಸಾವಿತ್ರಮ್ಮಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಬೆಂಗಳೂರಿನ ಹೆಬ್ಬಾಳಕ್ಕೆ ಅರ್ಧ ಡಜನ್ ಆಕಾಂಕ್ಷಿಗಳ ಪಟ್ಟಿಯೇ ಇದೆ. ವಿಧಾನ ಪರಿಷತ್ತಿನ ಸದಸ್ಯರಾದ ಕುರುಬ ಸಮುದಾಯಕ್ಕೆ ಸೇರಿದ ಎಚ್. ಎಂ.ರೇವಣ್ಣ, ಬೈರತಿ ಸುರೇಶ್, ಕಳೆದ ಸಲ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿಶಂಕರ ಶೆಟ್ಟಿ, ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಕಳೆದ ಸಲ ಸೋತಿದ್ದ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್  ಮೊಮ್ಮತ ರೆಹಮಾನ್ ಷರೀಫ್  ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಟಿಕೆಟ್ ಪಡೆಯಲು ತೀವ್ರ ಪ್ರಯತ್ನ ನಡೆಸಿದ್ದಾರೆ. 
ಹೊಸಕೋಟೆ ಪ್ರತಿನಿಧಿಸುತ್ತಿರುವ ಎಂ.ಟಿ.ಬಿ. ನಾಗರಾಜು ಹಾಗೂ ಕೆ.ಆರ್.ಪುರಂ ಪ್ರತಿನಿಧಿಸುತ್ತಿ ರುವ ಬೈರತಿ ಬಸವರಾಜು ಇಬ್ಬರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು ಮತ್ತೆ ಪಕ್ಕದಲ್ಲೇ ಅದೇ ಸಮುದಾಯಕ್ಕೆ ಟಿಕೆಟ್ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಇತರೆ ಆಕಾಂಕ್ಷಿಗಳು ಪ್ರಶ್ನಿಸ ತೊಡಗಿದ್ದಾರೆ. ಜತೆಗೆ ರೇವಣ್ಣ ಹಾಗೂ ಬೈರತಿ ಸುರೇಶ್ ಇಬ್ಬರುವಿಧಾನ ಪರಿಷತ್ತಿನ ಸದಸ್ಯ ರಾಗಿ ದ್ದು ಮತ್ತೆ ಅವರಿಗೆ ಅವಕಾಶ ಕೊಡುವುದು ಸರಿಯ ಲ್ಲ, ಬೇರೆಯವರಿಗೆ ಅದರಲ್ಲೂ ಸ್ಥಳೀಯ ರಿಗೆ ಅವಕಾಶ ಕೊಡಬೇಕೆಂದು ಈಗಾಗಲೇ ಆಕಾಂಕ್ಷಿಗಳು ಪಕ್ಷದ ಮುಖಂಡರ ಮೇಲೆ ಒತ್ತಡ ತರುತ್ತಿದ್ದಾರೆ. 
ಈ ಕಾರಣದಿಂದಲೇ ರಾಜ್ಯ ಸರ್ಕಾರ ಯಾರು ಸ್ಪರ್ಧಿಸಿದರೆ ಗೆಲ್ಲಬಹುದು ಎಂಬುದರ ಬಗ್ಗೆ ವರದಿ ಸಲ್ಲಿಸುವಂತೆ ಗುಪ್ತದಳಕ್ಕೆ ಸೂಚಿಸಿದೆ. ಕೆಪಿಸಿಸಿ ಕೂಡ ಖಾಸಗಿ ಸಂಸ್ಥೆಯಿಂದ ವರದಿ ಕೇಳಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಬಿಜೆಪಿಯಿಂದ ದೇವದುರ್ಗಕ್ಕೆ ಮಾಜಿ ಸಚಿವ ಶಿವನಗೌಡ ನಾಯಕ್, ಬೀದರ್‍ಗೆ ಗುರುಪಾದಪ್ಪ ನಾಗಮಾರಪಲ್ಲಿ ಪುತ್ರ ಸೂರ್ಯ-ಕಾಂತ್ ನಾಗಮಾರಪಲ್ಲಿ ಹಾಗೂ ಹೆಬ್ಬಾಳಕ್ಕೆ ಜಗದೀಶ್ ಕುಮಾರ್ ಪತ್ನಿ ಇಲ್ಲವೇ ವಿಧಾನ ಪರಿಷತ್ತಿನ ಸದಸ್ಯರಾ ದ ವೈ.ಎ.ನಾರಾಯಣಸ್ವಾಮಿ ಅವರು ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಜೆಡಿಎಸ್ ಈ ಉಪ ಚುನಾವಣೆಯಲ್ಲಿ ಸ್ಪರ್ಧಿ-ಸುವುದೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.