ರಾಜಕೀಯ

ಶ್ರೀನಿವಾಸ್ ಪ್ರಸಾದ್ ಗಾಗಿ ಪಕ್ಷದ ಅಂತ್ಯವಾಗುವುದಿಲ್ಲ: ಎಚ್. ವಿಶ್ವನಾಥ್

ಹಿರಿಯ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ತಮ್ಮ ರಾಜಕೀಯ ವೃತ್ತಿಬದುಕಿನ ಬಹುಪಾಲು ಸಮಯವನ್ನು ಬಹು ಹಳೇಯ ಪಕ್ಷವಾದ ಕಾಂಗ್ರೆಸ್ ನಲ್ಲೆ ..

ಶ್ರೀನಿವಾಸ್ ಪ್ರಸಾದ್ ಗಾಗಿ ಪಕ್ಷದ ಅಂತ್ಯವಾಗುವುದಿಲ್ಲ: ಎಚ್. ವಿಶ್ವನಾಥ್
ಶ್ರೀನಿವಾಸ್ ಪ್ರಸಾದ್
Published On :

ಮೈಸೂರು: ಹಿರಿಯ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ತಮ್ಮ ರಾಜಕೀಯ ವೃತ್ತಿಬದುಕಿನ ಬಹುಪಾಲು ಸಮಯವನ್ನು ಬಹು ಹಳೇಯ ಪಕ್ಷವಾದ ಕಾಂಗ್ರೆಸ್ ನಲ್ಲೆ ಕಳೆದಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಪಕ್ಷ ಬಿಟ್ಟು ಮತ್ತೊಂದು ಪಕ್ಷ ಸೇರುವುದು ಹೊಸತಲ್ಲ, ಈ ಹಿಂದ ಹಲವು ಬಾರಿ ಅವರು ಪಕ್ಷ ಬದಲಾಯಿಸಿದ್ದಾರೆ. ತಮ್ಮ 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಪ್ರಮುಖ ಪಕ್ಷಗಳನ್ನು ಸೇರಿದ್ದಾರೆ ಹಾಗೇಯೇ ತ್ಯಜಿಸಿದ್ದಾರೆ.

ಬಲ ಪಂಥೀಯ ರಾಜಕೀಯ ತತ್ವ ಸಿದ್ಧಾಂತಗಳನ್ನು ವಿರೋಧಿಸುತ್ತಿದ್ದ ಶ್ರೀನಿವಾಸ್ ಪ್ರಸಾದ್ ಈಗ ಬಿಜೆಪಿ ಸೇರುತ್ತಿದ್ದಾರೆ.

ಎನ್ ಡಿ ಎ ಸರ್ಕಾರದಲ್ಲಿ ಗ್ರಾಹಕರ ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್ ಎನ್ ಡಿ ಎ ಸರ್ಕಾರ ಬಿಜೆಪಿ ಅಜೆಂಡಾಗಳನ್ನು ಎನ್ ಡಿಎ  ಸರ್ಕಾರದಲ್ಲಿ ಹೇರಲಾಗುತ್ತಿದೆ ಎಂದು ಆರೋಪಿಸಿ ಎನ್ ಡಿ ಎ ಒಕ್ಕೂಟ ತೊರೆದ ಪ್ರಸಾದ್ 2004ರ ಮಾರ್ಚ್ ನಲ್ಲಿ ಜೆಡಿಎಸ್ ಸೇರಿದ್ದರು.

1974 ರಲ್ಲಿ ಕೃಷ್ಣರಾಜ ಕ್ಷೇತ್ರದಿಂದ ಎಐಎಡಿಎಂಕೆ ಪಕ್ಷದಿಂದ ಸ್ಪರ್ದಿಸಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಅಂದು ಅವರು ಚುನಾವಣೆಯ್ಲಿ ಗೆಲ್ಲಲಿಲ್ಲ, ಆದರೆ ದಲಿತ ಮತಗಳನ್ನು ಸೆಳೆಯಲು ಶಕ್ತರಾದರು.

1980 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದರು. 1996 ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ  ಕಾಂಗ್ರೆಸ್ ತ್ಯಜಿಸಿದ ಶ್ರೀನಿವಾಸ್ ಪ್ರಸಾದ್ ಸಮತಾ ಪಕ್ಷ ಸೇರಿ ಜಯಗಳಿಸಿದರು.

20014 ರಲ್ಲಿ ಜೆಡಿಎಸ್ ಸೇರಿದ ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯ ಅವರ ಜೆಡಿದಎಸ್ ತೊರೆದು ಅಹಿಂದ ಸ್ಥಾಪಿಸಿದಾಗ, ಸಿದ್ದರಾಮಯ್ ಜೊತೆ ಕಾಂಗ್ರೆಸ್ ಸೇರಿ ನಂಜನಗೂಡು ವಿಧಾನಸಭೆ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದರು.

ಶ್ರೀನಿವಾಸ್ ಪ್ರಸಾದ್ ತಮ್ಮ ತತ್ವ ಸಿದ್ಧಾಂತಗಳನ್ನ ಗಾಳಿಗೆ ತೂರಿರುವುದು ನನಗೆ ಬೇಸರವಾಗಿದೆ. ಅವರು ಪಕ್ಷ ಬದಲಿಸುವುದು ನನಗೆ ಆಶ್ಟರ್ಯ ತಂದಿಲ್ಲ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.