ರಾಜಕೀಯ

ಮೋದಿ ಸರ್ಕಾರ ಮೊಹಮ್ಮದ್ ಬಿನ್ ತುಘಲಕ್ ನಂತೆ ಆಡಳಿತ ನಡೆಸುತ್ತಿದೆ: ಮಲ್ಲಿಕಾರ್ಜುನ ಖರ್ಗೆ

ಕೇಂದ್ರದ ಮೋದಿ ಸರ್ಕಾರ ಸುಲ್ತಾನ್ ಮೊಹಮ್ಮದ್ ಬಿನ್ ತುಘಲಕ್ ನಂತೆ ಆಡಳಿತ ನಡೆಸುತ್ತಿದ್ದು, ನೋಟು ನಿಷೇಧ ಕುರಿತಂತೆ ಹೊಸ ಘೋಷಣೆಗಳನ್ನು ಮಾಡುವ ಮೂಲಕ ಜನರನ್ನು ಗೊಂದಲಕ್ಕೀಡಾಗುವಂತೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ...

ಮೋದಿ ಸರ್ಕಾರ ಮೊಹಮ್ಮದ್ ಬಿನ್ ತುಘಲಕ್ ನಂತೆ ಆಡಳಿತ ನಡೆಸುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ
Published On :

ಬೆಂಗಳೂರು: ಕೇಂದ್ರದ ಮೋದಿ ಸರ್ಕಾರ ಸುಲ್ತಾನ್ ಮೊಹಮ್ಮದ್ ಬಿನ್ ತುಘಲಕ್ ನಂತೆ ಆಡಳಿತ ನಡೆಸುತ್ತಿದ್ದು, ನೋಟು ನಿಷೇಧ ಕುರಿತಂತೆ ಹೊಸ ಘೋಷಣೆಗಳನ್ನು ಮಾಡುವ ಮೂಲಕ ಜನರನ್ನು ಗೊಂದಲಕ್ಕೀಡಾಗುವಂತೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ತುಘಲಕ್ ಸರ್ಕಾರದಂತೆ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ಪ್ರತೀ ದಿನ ಹೊಸ ಹೊಸ ಘೋಷಣೆ ಮಾಡುವ ಮೂಲಕ ಜನರನ್ನು ಗೊಂದಲಕ್ಕೆ ಸಿಕ್ಕಿಸುತ್ತಿದೆ. ಯಾವುದೇ ಮುಂದಾಲೋಚನೆಗಳಿಲ್ಲದೆ ಹೊಸ ಆದೇಶಗಳನ್ನು ಹೊರಡಿಸುತ್ತಿದೆ. ಸರ್ಕಾರದ ನಿರ್ಣಯದಿಂದ ಜನರು ಶೋಷಣೆಗೊಳಗಾಗುತ್ತಿದ್ದಾರೆಂದು ಹೇಳಿದ್ದಾರೆ.

ತನ್ನ ಹೊಸ ನೀತಿಗಳ ಮೂಲಕ ಸರ್ಕಾರ ವಿಫಲವಾಗುತ್ತಿದ್ದು, ಸರ್ಕಾರ ಆದೇಶದಿಂದಾಗಿ ಜನರು ಬೇಸರಗೊಂಡಿದ್ದಾರೆ. ನೋಟು ನಿಷೇಧ ನಿರ್ಧಾರದಿಂದ ಸರ್ಕಾರವೇ ಗೊಂದಲಕ್ಕೊಳಗಾಗಿದ್ದು, ನೋಟು ನಿಷೇಧ ನಿರ್ಧಾರ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಕೆಟ್ಟ ನಿರ್ವಹಣೆಯಾಗಿದೆ ಎಂಬ ಡಾ.ಮನಮೋಹನ್ ಸಿಂಗ್ ಅವರ ಮಾತು ಸತ್ಯವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.