ಬೆಂಗಳೂರಿನ ಪರಿಸ್ಥಿತಿ ಹೇಗಿದೆ? ಪುತ್ರನ ಶವ ಮುಂದಿದ್ದರೂ ಕಾಳಜಿ ಮೆರೆದ ಸಿ.ಎಂ.
ಮಗನ ಅಂತ್ಯಕ್ರಿಯೆ ನಡೆದ ಸಂದರ್ಭದಲ್ಲೂ ಮುಖ್ಯಮಂತ್ರಿ ಅವರು ತೋರಿದ ನಗರದ ಕಾಳಜಿ ಕಂಡು ನಾನು ಅವಾಕ್ಕಾದೆ. ಪರಿಹಾರ ಕಾರ್ಯಾಚರಣೆ ಕುರಿತು ಸಂಕ್ಷಿಪ್ತವಾಗಿ ...

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನಾನೂ ಟಿ.ಕಾಟೂರಿಗೆ ತೆರಳಿದ್ದೆ. ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ ಪಕ್ಕದಲ್ಲಿ ನಿಂತಿದ್ದೆ. ನನ್ನನ್ನು ಕಂಡ ಮುಖ್ಯಮಂತ್ರಿ ಅವರು ಹತ್ತಿರ ಬರುವಂತೆ ಸನ್ನೆ ಮಾಡಿದರು. ಅವರ ಬಳಿ ಹೋದಾಗ ಬೆಂಗಳೂರಿನ ಪ್ರವಾಹದ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಾಚರಣೆ ಕುರಿತು ವಿಚಾರಿಸಿದರು ಎಂದು ಬೆಂಗಳೂರು ನಗರ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಮಗನ ಅಂತ್ಯಕ್ರಿಯೆ ನಡೆದ ಸಂದರ್ಭದಲ್ಲೂ ಮುಖ್ಯಮಂತ್ರಿ ಅವರು ತೋರಿದ ನಗರದ ಕಾಳಜಿ ಕಂಡು ನಾನು ಅವಾಕ್ಕಾದೆ. ಪರಿಹಾರ ಕಾರ್ಯಾಚರಣೆ ಕುರಿತು ಸಂಕ್ಷಿಪ್ತವಾಗಿ ವಿವರಣೆಯನ್ನೂ ನೀಡಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಏನಪ್ಪ, ಪ್ರವಾಹಪೀಡಿತ ಪ್ರದೇಶದಲ್ಲಿ ಏನೇನು ಕೆಲಸ ಮಾಡುತ್ತಿದ್ದೀರಿ? ಜನರ ಬವಣೆ ತಪ್ಪಿಸಿದ್ದೀರಿ ತಾನೆ ಎಂದು ವಿಚಾರಿಸಿದರು. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಅವರು ಮತ್ತೆ ಮತ್ತೆ ನೆನಪಿಸಿದರು ಎಂದು ಹೇಳಿದರು.ಸಿದ್ದರಾಮಯ್ಯ ಅವರು ಬೆಲ್ಜಿಯಂನಲ್ಲಿ ಇದ್ದಾಗಲೂ ಪ್ರವಾಹದ ಮಾಹಿತಿ ಸಿಗುತ್ತಿದ್ದಂತೆ ಆಯುಕ್ತರನ್ನು ಸಂಪರ್ಕಿಸಿ ಮಾತನಾಡಿದ್ದರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


