ರಾಜಕೀಯ

ಸಿಎಂ ತಮ್ಮ ಸಂಪುಟದ ಎಲ್ಲಾ ಸಚಿವರನ್ನು ಕೈಬಿಟ್ಟರೂ ಆಶ್ಚರ್ಯವಿಲ್ಲ: ಶಾಸಕ ರಾಜಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಎಲ್ಲಾ ಸಚಿವರನ್ನು ಕೈಬಿಟ್ಟರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಮಧುಗಿರಿ...

ಸಿಎಂ ತಮ್ಮ ಸಂಪುಟದ ಎಲ್ಲಾ ಸಚಿವರನ್ನು ಕೈಬಿಟ್ಟರೂ ಆಶ್ಚರ್ಯವಿಲ್ಲ: ಶಾಸಕ ರಾಜಣ್ಣ
ಸಿದ್ದರಾಮಯ್ಯ ಜೊತೆ ಸಮಾನ ಮನಸ್ಕ ಶಾಸಕರು
Published On :
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಎಲ್ಲಾ ಸಚಿವರನ್ನು ಕೈಬಿಟ್ಟರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರು ಶನಿವಾರ ಹೇಳಿದ್ದಾರೆ.
ಇಂದು ಸಮಾನ ಮನಸ್ಕ ಶಾಸಕರು ಸಿದ್ದರಾಮಯ್ಯ ಅವರನ್ನು ಅವರ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, 2018ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ಸಿಎಂ ಸಮಾನ ಮನಸ್ಕ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದರು.
ಸಂಪುಟದಲ್ಲಿ ಬಹಳಷ್ಟು ಬದಲಾವಣೆಯಾಗಬೇಕಿದೆ. ಹಾಲಿ ಸಚಿವರನ್ನು ಕೈಬಿಡುವ ಅನಿವಾರ್ಯತೆ ಈಗ ಇದೆ ಮತ್ತು ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಸಿಎಂಗೆ ಬಿಟ್ಟಿದ್ದು ಎಂದು ರಾಜಣ್ಣ ತಿಳಿಸಿದರು.
ಸಂಪುಟಕ್ಕೆ ಹಿರಿಯ ಹಾಗೂ ಕಿರಿಯ ಶಾಸಕರನ್ನು ಸೇರಿಸಿಕೊಳ್ಳಿ ಎಂದು ನಾವು ಕೇಳಿಕೊಂಡಿದ್ದು, ಇದಕ್ಕೆ ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಏಪ್ರಿಲ್ 13ರಂದು ಈ ಕುರಿತು ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಗೂ ಮನವಿ ಮಾಡಲಾಗುವುದು. ಅವರ ಭೇಟಿ ಬಳಿಕ ದೆಹಲಿಗೆ ಭೇಟಿ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದರು. ಅಲ್ಲದೆ ಸಂಪುಟ ಪುನಾರಚನೆ ಬಗ್ಗೆ ಸಿಎಂಗೆ ಫ್ರೀಂ ಹ್ಯಾಂಡ್ ನೀಡಿ ಅಂತ ಹೈಕಮಾಂಡ್ ಗೆ ಮನವಿ ಮಾಡುವುದಾಗಿ ರಾಜಣ್ಣ ಹೇಳಿದರು.
ಸಮಾನ ಮನಸ್ಕರದ್ದು ನಿಗದಿತ ಶಾಸಕರ ಸಭೆ ಅಲ್ಲ. ನಮ್ಮ ಉದ್ದೇಶಗಳಿಗೆ ಸ್ಪಂದಿಸುವ ಎಲ್ಲಾ ಶಾಸಕರಿಗೂ ನಾವು ಆಹ್ವಾನ ನೀಡಿದ್ದೇವು ಎಂದರು.
ಇನ್ನು ಸಿಎಂ ಜೊತೆ ಸಭೆ ಬಳಿಕ ಮಾತನಾಡಿದ ಮತ್ತೊಬ್ಬ ಸಮಾನ ಮನಸ್ಕ ಶಾಸಕ ಎಸ್ ಟಿ ಸೋಮಶೇಖರ್ ಅವರು, ಯಾರನ್ನೂ ಸಂಪುಟದಿಂದ ಕೈಬಿಡಬೇಕೆಂದು ಸಿಎಂಗೆ ಗೊತ್ತು. ತಾಲೂಕ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಯಾರೂ ಉತ್ತಮ ಫಲಿತಾಂಶ ತಂದಿದ್ದಾರೆ ಎಂಬುದು ಗೊತ್ತು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.