ಬಿಜೆಪಿಯವರಿಗೆ ಬಾರುಕೋಲು ಏಟು ಕೊಡಬೇಕು: ಎಚ್‍ಡಿಕೆ
ರೈತರ ಹೆಸರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ರಾಜಕಾರಣ ನಡೆಸುತ್ತಿದ್ದು, ಬಿಜೆಪಿ...

ಬೆಂಗಳೂರು: ರೈತರ ಹೆಸರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ರಾಜಕಾರಣ ನಡೆಸುತ್ತಿದ್ದು, ಬಿಜೆಪಿ ನಾಯಕರಿಗೆ ಬಾರುಕೋಲು ಏಟು ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರು ರೈತರಿಗಾಗಿ ರಕ್ತ ಸುರಿಸುವ ಹೇಳಿಕೆ ನೀಡಿದ್ದಾರೆ. ಯಾರಿಗೆ ಬೇಕು ನಿಮ್ಮ ರಕ್ತ? ನಿಜವಾಗಿಯೂ ರೈತರ ಪರವಾಗಿ ನಿಮಗೆ ಕಾಳಜಿ ಇದ್ದರೆ ನಿಮ್ಮ ಪ್ರಧಾನಿಗಳ ಮೇಲೆ ಒತ್ತಡ ತಂದು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿದ ಸಾಲವನ್ನು ಮನ್ನಾ ಮಾಡಿಸಲಿ. ರಾಜಕಾರಣಿಗಳ ರಕ್ತ ಕೊಳೆತು ಹೋಗಿರುತ್ತದೆ. ಅದನ್ನು ತೆಗೆದುಕೊಂಡು ರೈತರು ಏನು ಮಾಡುತ್ತಾರೆ? ರೈತರ ಸಂಕಷ್ಟ ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಬಾರಕೋಲು ಚಳವಳಿ ನಡೆಸುತ್ತಿರುವ ಬಿಜೆಪಿ ಮುಖಂಡರಿಗೆ ಮೊದಲು ಬಾರುಕೋಲು ತೆಗೆದುಕೊಂಡು ಏಟು ನೀಡಬೇಕು ಎಂದು ವ್ಯಂಗ್ಯವಾಡಿದರು.
ರೈತರಿಗೆ ಸಾಂತ್ವನ ಹೇಳಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರಿಗೆ ರೈತ ಪರ ಕಾಳಜಿ ಇದ್ದರೆ ನಾನು ಅವರ ಭೇಟಿಯನ್ನು ಸ್ವಾಗತಿಸುತ್ತೇನೆ. ಆದರೆ, ಪ್ರಚಾರದ ಉದ್ದೇಶಕ್ಕಾದರೆ ಬರುವುದೇ ಬೇಡ. ರಾಹುಲ್ ಆಗಮನಕ್ಕೆ ಮುನ್ನ ರಾಜ್ಯ ಸರ್ಕಾರ ರೈತರ ಪರವಾದ ಧೋರಣೆ ಏನೆಂಬುದನ್ನು ಸ್ಪಷ್ಟಪಡಿಸಲಿ. ರಾಹುಲ್ ಪ್ರವಾಸ ಹೋದ ಪುಟ್ಟ ಬಂದ ಪುಟ್ಟ ಎಂಬಂತಾಗಬಾರದು ಎಂದರು.
ಲೂಟಿ ಹೊಡೆದವರಿಗೆ ಸಹಕಾರ: ರಾಜ್ಯ ಸರ್ಕಾರ ಭೂಮಿ ಲೂಟಿ ಹೊಡೆದವರಿಗೆ ಸಹಕಾರ ನೀಡುತ್ತಿದೆ.ಸಚಿವ ಆರ್.ವಿ. ದೇಶಪಾಂಡೆ ಸೇರಿದಂತೆ ಅರಣ್ಯ ಭೂಮಿ ಒತ್ತುವರಿ ಮಾಡಿದ ಗಣ್ಯರಿಗೆ ನೋಟಿಸ್ ನೀಡಿದ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ನಾಗರಾಜ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.ರಾಜಕೀಯ ಒತ್ತಡಕ್ಕೆ ಮಣಿದು ಈ ಕ್ರಮ ತೆಗೆದುಕೊಂಡಿದ್ದು, ಅರ್ಕಾವತಿ ಡಿನೋಟಿಫಿಕೇಶನ್ ಕರ್ಮಕಾಂಡದಲ್ಲಿ ಕೋಟ್ಯಂತರ ರುಪಾಯಿ ಲೂಟಿ ಹೊಡೆದ ಅಧಿಕಾರಿಯನ್ನು ಅಲ್ಲಿಗೆ ನಿಯೋಜನೆ ಮಾಡಿದ್ದರ ಹಿಂದಿನ ಮರ್ಮವೇನು? ಬಡವರ ಮನೆಯನ್ನು ಒಡೆದು ಹಾಕುವಾಗ ಕರುಣೆ ಇಲ್ಲದೇ ವರ್ತಿಸಿದ ಸರ್ಕಾರ ಈ ವಿಚಾರದಲ್ಲಿ ಏಕೆ ಮೃಧು ಧೋರಣೆ ತಳೆದಿದೆ ಎಂದು ಪ್ರಶ್ನಿಸಿದರು.
ನಾನು ಯೂ ಟರ್ನ್ ಹೊಡೆಯುತ್ತೇನೆ ಎಂದು ಜಗದೀಶ್ ಶೆಟ್ಟರ್ ಅವರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅರ್ಕಾವತಿ ವಿಚಾರದಲ್ಲಿ ನಾನು ಬಿಡುಗಡೆ ಮಾಡಿದ ದಾಖಲೆಗೂ,ಶೆಟ್ಟರ್ ಅವರು ಬಿಡುಗಡೆ ಮಾಡಿದ ದಾಖಲೆಗೂ ವ್ಯತ್ಯಾಸವಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


