ರಾಜಕೀಯ

ಯೋಚಿಸಿ ಮಾತಾಡಿ ಜಮೀರ್‍ಗೆ ರೇವಣ್ಣ

ಜೆಡಿಎಸ್‍ನ ಶಾಸಕ ಜಮೀರ್ ಅಹಮ್ಮದ್ ಖಾನ್, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಇದು ಬರೀ ಕಾಂಗ್ರೆಸ್ ಮಾತ್ರವಲ್ಲ, ಜೆಡಿಎಸ್ ವಲಯದಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ 12 ದಿನಗಳಿಂದ ಕಾಂಗ್ರೆಸ್ ಸಖ್ಯ ಬೆಳೆಸಲು ಇನ್ನಿಲ್ಲದ ಕರಸತ್ತು...

ಯೋಚಿಸಿ ಮಾತಾಡಿ ಜಮೀರ್‍ಗೆ ರೇವಣ್ಣ
(ಸಂಗ್ರಹ ಚಿತ್ರ)
Published On :

ಬೆಂಗಳೂರು: ಜೆಡಿಎಸ್‍ನ ಶಾಸಕ ಜಮೀರ್ ಅಹಮ್ಮದ್ ಖಾನ್, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಇದು ಬರೀ ಕಾಂಗ್ರೆಸ್ ಮಾತ್ರವಲ್ಲ, ಜೆಡಿಎಸ್ ವಲಯದಲ್ಲೂ
ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ 12 ದಿನಗಳಿಂದ ಕಾಂಗ್ರೆಸ್ ಸಖ್ಯ ಬೆಳೆಸಲು ಇನ್ನಿಲ್ಲದ ಕರಸತ್ತು ನಡೆಸಿದ್ದ ಜಮೀರ್, ಏಕಾಏಕಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹಜ್‍ಯಾತ್ರಾರ್ಥಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಮೀರ್, ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಮೋಸ ಮಾಡಿದೆ. ಆ ಪಕ್ಷವನ್ನು ಎಂದಿಗೂ ನಂಬಬೇಡಿ ಎಂದು ಟೀಕಿಸಿರುವುದು ಎರಡೂ ಪಕ್ಷಗಳ ನಾಯಕರಿಗೆ ಮುಜುಗರ ತಂದಿದೆ. ಈ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಜಮೀರ್ ಅವರಿಗೆ ಕರೆ ಮಾಡಿ ಕಾರಣ ಕೇಳಲು ಯತ್ನಿಸುತ್ತಿದ್ದಂತೆ ಜಮೀರ್ ಮೊಬೈಲ್ ಬಂದ್ ಮಾಡಿ ಮೌನಕ್ಕೆ ಶರಣಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಮೀರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‍ನ ಎಚ್.ಎಂ.ರೇವಣ್ಣ, ರಾಜಕೀಯ ಪ್ರೇರಣೆ ಬಿಟ್ಟು ಯೋಚಿಸಿ ಮಾತನಾಡಿ ಎಂದು ಎಚ್ಚರಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮರಿಗೆ ತೊಂದರೆಯಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಶಾಸಕ ಜಮೀರ್ ರಾಜಕೀಯ ಪ್ರೇರಿತ ಹೇಳಿಕೆ ನೀಡದೇ ಯೋಚಿಸಿ ಮಾತನಾಡಬೇಕು ಎಂದಿದ್ದಾರೆ. ಜಮೀರ್ ಹೇಳಿಕೆ ಕಾಂಗ್ರೆಸ್‍ನಷ್ಟೇ ಅಲ್ಲ, ಜೆಡಿಎಸ್‍ನಲ್ಲೂ ಅಚ್ಚರಿ ತಂದಿದೆ. ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಕೂಡ ಜಮೀರ್ ಹೇಳಿಕೆ ಖಂಡಿಸಿದ್ದು, ಬಿಜೆಪಿ ದೂರವಿಡುವ ಪ್ರಯತ್ನ ಯಶಸ್ವಿಯಾದ ಬೆನ್ನ ಹಿಂದೆಯೇ ಕಾಂಗ್ರೆಸ್ ವಿರುದ್ಧ ಆರೋಪ ಸರಿಯಲ್ಲ ಎಂದು ಬುದಿಟಛಿ ಹೇಳಿದ್ದಾರೆ.

ಮೈತ್ರಿ ರಚನೆಯ ಮತ್ತೊಬ್ಬ ರೂವಾರಿ ಶಾಸಕ ಕೆ.ಗೋಪಾಲಯ್ಯ ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿ, ಜಮೀರ್ ಹಾಗೆ ಹೇಳಬಾರದಿತ್ತು. ನಾವೆಲ್ಲಾ ಸೇರಿ ಅವರೊಂದಿಗೆ ಮಾತಾಡುತ್ತೇವೆ. ಸೋಮವಾರ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಪಾಲಿಕೆಯಲ್ಲಿ ಜೆಡಿಎಸ್ ಹೇಗೆಲ್ಲಾ ಆಡಳಿತ ದಲ್ಲಿ ಭಾಗಿಯಾಗಬೇಕೆಂದು ಚರ್ಚಿಸುತ್ತೇವೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.