ರಾಜಕೀಯ

ಜೆಡಿಎಸ್‍ನಲ್ಲಿ ತೀವ್ರವಾಗಿದೆ ಅಸಮಾಧಾನದ ಹೊಗೆ

ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ನಡುವಿನ ವಾಕ್ಸಮರ ನಂತರ ಪಕ್ಷದೊಳಗಿನ ಅಸಮಾಧಾನ ಇನ್ನೂ ಹೆಚ್ಚಾಗಿದ್ದು...

ಜೆಡಿಎಸ್‍ನಲ್ಲಿ ತೀವ್ರವಾಗಿದೆ ಅಸಮಾಧಾನದ ಹೊಗೆ
ಜೆಡಿಎಸ್
Published On :
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ನಡುವಿನ  ವಾಕ್ಸಮರ ನಂತರ ಪಕ್ಷದೊಳಗಿನ ಅಸಮಾಧಾನ ಇನ್ನೂ ಹೆಚ್ಚಾಗಿದ್ದು, ಅದು
ಒಳಗೇ ಹೊಗೆಯಾಡುತ್ತಿದೆ.ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಪಕ್ಷದ ಜಿಲ್ಲಾ ಮತ್ತು ತಾಲೂಕು ಮಟ್ಟದ ನಾಯಕರ ಸಮಾವೇಶಕ್ಕೆ ಪಕ್ಷದ ಕಾರ್ಯ ಧ್ಯಕ್ಷರಾಗಿದ್ದ ಇಕ್ಬಾಲ್ ಅನ್ಸಾರಿ ಬರಲೇ ಇಲ್ಲ. ಇನ್ನು ಅದೇ ವೇದಿಕೆಯಲ್ಲಿದ್ದ ಚಲುವರಾಯಸ್ವಾಮಿ ಮತ್ತು ಜಿ.ಟಿ. ದೇವೇ ಗೌಡರಿಗೆ ಚಾರ್ಜ್ ಮಾಡಿದ್ದೂ ಉಂಟು. ನಂತರದ ಮಾಗಡಿ ಬಾಲಕೃಷ್ಣ ಬಂಡಾಯದ ವಾಗ್ದಾಳಿ ಮತ್ತ್ಷು ಕುಮಾರ ಸ್ವಾಮಿ ತಿರುಗೇಟು ಇದಕ್ಕೆ ಆಧಾರ.
ಇತ್ತೀಚಿಗೆ ಪಕ್ಷದೊಳಗಿನ ಅಸಮಾಧಾನ ಹೆಚ್ಚಾಗುತ್ತಿದ್ದು, ಬಾಲಕೃಷ್ಣ ರೀತಿ ಇನ್ನೂ ಕೆಲವರು ಅಸಮಾಧಾನಗೊಂಡಿದ್ದು, ಅಂಥ ವರನ್ನು ಕರೆದು ಚರ್ಚಿಸಿ ಬೇಸರದ ಬೆಂಕಿ
ಆರಿಸಬೇಕೆಂದು ಪಕ್ಷದ ಹಿರಿಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಅತೃಪ್ತರಲ್ಲಿ ಕೆಲವರು ಬಹಿರಂಗವಾಗಿ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದು, ಅಂಥವರನ್ನು ಬಿಜೆಪಿ ನಾಯಕರು ಈಗಾಗಲೇ ಸಂಪರ್ಕಿಸಿದ್ದಾರೆ. ಜತೆಗೆ ಮುಂದಿನ ಚುನಾವಣೆಗಳಲ್ಲಿ ಇಚ್ಚಿಸಿದ ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಆಸೆ ತೋರಿಸಿದ್ದಾರೆ ಎನ್ನ ಲಾಗಿದೆ. ಬಿಜೆಪಿಯ ಆಮಿಷವನ್ನು ಕೆಲವು ಅತೃಪ್ತ ಶಾಸಕರು ನಿರಾಕರಿಸಿದ್ದು, ಇನ್ನಷ್ಟು ಕಾಲ ಹೊಂದಾಣಿಕೆ ಮಾಡಿಕೊಂಡು ಪಕ್ಷದಲ್ಲೇ ಉಳಿಯಲು ಚಿಂತಿಸಿದ್ದಾರೆ. ಆದರೆ ಅದಕ್ಕೆ ಪೂರಕವಾಗಿ ಪಕ್ಷದೊಳಗಿನ ನಾಯಕರು ತಮ್ಮನ್ನು ನಡೆಸಿಕೊಳ್ಳುತ್ತಿಲ್ಲ ಎಂಬ ಅಸಮಾಧಾನದಲ್ಲಿದ್ದಾರೆ. ಅಷ್ಟೇ ಅಲ್ಲ. ಪಕ್ಷದಲ್ಲಿ 7ಮಂದಿ ಪದಾಧಿಕಾರಿಗಳ ನ್ನು ಬಿಟ್ಟರೆ ಉಳಿದ ಯಾವೊಬ್ಬ ನಾಯಕರಿಗೂ ಜವಾಬ್ದಾರಿ ಹಂಚಿಲ್ಲ. ಯಾವ ನಾಯಕರೂ ಯಾವುದೇ ಅಭಿಪ್ರಾ ಯಗಳನ್ನು ಹೇಳದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪಕ್ಷದ ರಾಜ್ಯ ಮತ್ತು ಜಿಲ್ಲಾ ಘಟಕಗಳ ನ್ನು ಈತನಕ ಪುನಾರಚನೆ ಮಾಡಲಿಲ್ಲ. ಪಕ್ಷ ಸಂಘಟನೆ ಮಾಡಿ ತಮಗೊಂದು ಸ್ಥಾನ ಸಿಗುವಂತೆ ಮಾಡುತ್ತಿಲ್ಲ ಎಂದು ನೊಂದು ಮಾತನಾಡಲಾರಂಭಿಸಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಕುಮಾರಸ್ವಾಮಿ-ಬಾಲಕೃಷ್ಣ ವಾಕ್ಸಮರ ದ ನಂತರ ಅತೃಪ್ತರು ಸಕ್ರಿಯರಾಗಿದ್ದಾರೆ.
ಅಂತಹವರಿಗೆ ತಿರುಗೇಟು ನೀಡುವ ಬದಲು ಕರೆದು ಚರ್ಚಿಸುವ ಮೂಲಕ ಅತೃಪ್ತಿ ಶಮಗೊಳಿಸಬೇಕು. ಇಲ್ಲದಿದ್ದರೂ ಇದು ಇನ್ನೂ ಹೆಚ್ಚಾಗಲಿದ್ದು, ಇದರ ಲಾಭ ಬಿಜೆಪಿ ಪಡೆದುಕೊಳ್ಳಲಿದೆ ಎಂದು ಪಕ್ಷದ ಹಿರಿಯರು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ.
ಅಸಮಾಧಾನಕ್ಕೆ ಕಾರಣವೇನು ?
ಬಿಬಿಎಂಪಿ ಮೈತ್ರಿ ಬಳಿಕ ಪಕ್ಷವು ಕಾಂಗ್ರೆಸ್ ಸರ್ಕಾರದ ಪರ ನಿಂತಿದೆ ಎಂಬ ಸಂದೇಶ ಹೋಗುತ್ತಿದೆ, ಇದಕ್ಕೆ ನಮ್ಮ ಪಕ್ಷದ ಸರ್ಕಾರದ ವಿರುದ್ಧ ಯಾವುದೇ ಹೋರಾಟ ನಡೆಸದಿರುವುದೇ ಕಾರಣ.ರೈತರ ಆತ್ಮಹತ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೊಂದ ರೈತರ ಕುಟುಂಬಗಳಿಗೆ ಭೇಟಿ ನೀಡುವ ಕಾರ್ಯಕ್ರಮ ರೂಪಿಸಲಾಗಿದ್ದು, ಶಾಸಕರ ತಂಡ ರಚಿಸಲಾಗಿದೆ ಎಂದು ಎಚ್‍ಡಿಕೆ ಹೇಳಿದ್ದರು. ಈತನಕ ಹೋರಾಟ ನಡೆಸಲಿಲ್ಲ.ಮುಂಬರುವ ಪಂಚಾಯಿತಿ ಚುನಾವಣೆಹಿನ್ನೆಲೆಯಲ್ಲಿ ಪಕ್ಷದ ವಿವಿಧ ಘಟಕ ಗಳನ್ನಾದರೂ ಪುನಾರಚನೆ ಮಾಡಬೇಕಿತ್ತು. ಆ ಕೆಲಸಕ್ಕೂ ಇನ್ನೂ ಚಾಲನೆ ಸಿಕ್ಕಿಲ್ಲ. ಈ ವಿಚಾರಗಳ ಬಗ್ಗೆ ಪಕ್ಷದೊಳಗೆ ಅಸಮಾಧಾನವಿದೆ ಎನ್ನುವುದನ್ನು ಪಕ್ಷದ ಶಾಸಕರೇ ಒಪ್ಪಿಕೊಳ್ಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.