ರಾಹುಲ್ ಗಾಂಧಿಗೆ ರಮ್ಯಾ ಸಾಥ್
ರಾಹುಲ್ ಗಾಂಧಿಯವರ ಮಂಡ್ಯ ಭೇಟಿಯ ಐದೂವರೆ ಗಂಟೆಗಳ ಕಾರ್ಯಕ್ರಮದಲ್ಲಿ ಮಾಜಿ ಸಂಸದೆ ರಮ್ಯಾ ಲವಲವಿಕೆಯಿಂದ...

Published On :
ಮಂಡ್ಯ: ರಾಹುಲ್ ಗಾಂಧಿಯವರ ಮಂಡ್ಯ ಭೇಟಿಯ ಐದೂವರೆ ಗಂಟೆಗಳ ಕಾರ್ಯಕ್ರಮದಲ್ಲಿ ಮಾಜಿ ಸಂಸದೆ ರಮ್ಯಾ ಲವಲವಿಕೆಯಿಂದ ಓಡಾಡಿ ಗಮನ ಸೆಳೆದರು. ರಾಹುಲ್ ಆಗಮನದ 5 ನಿಮಿಷ ಮುಂಚಿತವಾಗಿ ರಮ್ಯಾ ವಿ.ಸಿ.ಫಾರ್ಮ್ ಕ್ರೀಡಾಂಗಣಕ್ಕೆ ಆಗಮಿಸಿದರು.
ಕೆನೆಬಣ್ಣದ ಕಾಟನ್ ಸೀರೆ, ಕೆಂಪು ತೋಳಿನ ತುಂಬು ರವಿಕೆ, ಹಣೆ ಮೇಲಿನ ದೊಡ್ಡ ಬೊಟ್ಟಿನಿಂದ ಕಂಗೊಳಿಸುತ್ತಿದ್ದ ರಮ್ಯಾ, ರಾಹುಲ್‍ಗೆ ಸ್ವಾಗತ ಬಯಸಲು ನಿಂತಿದ್ದ ಗಣ್ಯರ ಸಾಲಿಗೆ ತೆರಳಿ ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸಿದರು. ನಂತರ ಅಭಿಮಾನಿಗಳತ್ತ ಕೈ ಬೀಸಿದರು.
ಹೆಲಿಕಾಪ್ಟರ್‍ನಲ್ಲಿ ಬೆಳಗ್ಗೆ 10.45 ಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ, ಗಣ್ಯರ ಸಾಲಿನ ಕೊನೆಯಲ್ಲಿ ನಿಂತಿದ್ದ ಅವರು ರಾಹುಲ್ ಆಗಮಿಸುತ್ತಿದ್ದಂತೆ ಹಲೋ ಎಂದು ಸ್ವಾಗತ ಬಯಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರೊಂದಿಗೆ ರೈತರ ಮನೆಗಳತ್ತ ಪ್ರಯಾಣ ಬೆಳೆಸಿದರು. ರಮ್ಯಾ ಪ್ರತ್ಯೇಕ ಕಾರಿನಲ್ಲಿ ತೆರಳಿದರು.
ಪಾಂಡವಪುರ ತಾಲೂಕು ಸೆಣಬದ ಕೊಪ್ಪಲಿನಲ್ಲಿ ರೈತನಿಗೆ ಅಂತಿಮ ನಮನ ಸಲ್ಲಿಸಲು ಹೋದ ಸಂದರ್ಭದಲ್ಲೂ ರಮ್ಯಾ ಜಗುಲಿ ಮೇಲೆ ರಾಹುಲ್ ಗಾಂಧಿ ಯವರೊಂದಿಗೆ ಕುಳಿತು ಸಾಥ್ ನೀಡಿದರು. ಪಣಕನಹಳ್ಳಿಯಲ್ಲಿಯೂ ಸಹ ರಾಹುಲ್ ಜೊತೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


