ರಾಜಕೀಯ

ದಲಿತರ ಹತ್ಯೆ ನಡೆದಾಗ ಸಾಹಿತಿಗಳು ಎಲ್ಲಿದ್ದರು?

`ಯೋಗ್ಯತೆ ಇದ್ದಿದ್ರೆ ಪ್ರಶಸ್ತಿ ಉಳಿಸಿಕೊಂಡಿರುತ್ತಿದ್ದರು...' ಪ್ರಶಸ್ತಿ ವಾಪಸು ನೀಡಿರುವ ಸಾಹಿತಿಗಳಿಗೆ ಬಿಜೆಪಿ ಸದಸ್ಯ ಅಶ್ವತ್ಥನಾರಾಯಣ ಈ ರೀತಿಯಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ...

ದಲಿತರ ಹತ್ಯೆ ನಡೆದಾಗ ಸಾಹಿತಿಗಳು ಎಲ್ಲಿದ್ದರು?
ಬಿಜೆಪಿ ಸದಸ್ಯ ಅಶ್ವತ್ಥನಾರಾಯಣ (ಸಂಗ್ರಹ ಚಿತ್ರ)
Published On :

ವಿಧಾನಪರಿಷತ್ತು: `ಯೋಗ್ಯತೆ ಇದ್ದಿದ್ರೆ ಪ್ರಶಸ್ತಿ ಉಳಿಸಿಕೊಂಡಿರುತ್ತಿದ್ದರು...' ಪ್ರಶಸ್ತಿ ವಾಪಸು ನೀಡಿರುವ ಸಾಹಿತಿಗಳಿಗೆ ಬಿಜೆಪಿ ಸದಸ್ಯ ಅಶ್ವತ್ಥನಾರಾಯಣ ಈ ರೀತಿಯಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದ ಕಾನೂನು ವ್ಯವಸ್ಥೆ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವರು ಪ್ರಶಸ್ತಿ ವಾಪಸು ಮಾಡಿದ್ದು ಒಳ್ಳೆಯದೇ ಆಯಿತು. ಯೋಗ್ಯತೆ ಇದ್ದಿದ್ದರೆ ಪ್ರಶಸ್ತಿ ಉಳಿಸಿಕೊಂಡಿರುತ್ತಿದ್ದರು ಎಂದು ಕಿಡಿಕಾರಿದ್ದಾರೆ. ಕಂಬಾಲಪಲ್ಲಿ ಪ್ರಕರಣ ಸೇರಿದಂತೆ ನಾಡಿನ ಅನೇಕ ಕಡೆ ದಲಿತ ಮೇಲೆ ದೌರ್ಜನ್ಯ, ಹತ್ಯೆ ನಡೆದಾಗ ಈ ಸಾಹಿತಿಗಳು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.

ಕಳೆದ 2001ರಲ್ಲಿ ನಡೆದ ಚರ್ಚ್ ಮೇಲಿನ ದಾಳಿ ಪ್ರಕರಣ, ಚಿತ್ತರಂಜನ್ ಹತ್ಯೆ, ಪಾನ್ಸರೆ ಹತ್ಯೆ ಸೇರಿದಂತೆ ವಿವಿಧ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ವಿನಾಕಾರಣ ಹಿಂದೂಪರ ಸಂಘಟನೆಗಳ ಮೇಲೆ ಆರೋಪ ಹೊರಿಸಲಾಗುತ್ತಿದೆ. ಆದರೆ, ಬುದ್ದಿಜೀವಿಗಳು ಹಿಂದೂ ಸಂಘಟನೆಗಳ ಮೇಲೆ ಆರೋಪ ಹೊರಿಸುತ್ತಿದ್ದಾರೆಂದು ಟೀಕಿಸಿದರು.ಯಾವುದೇ ಘಟನೆ ನಡೆದಾಗ ಸಾಹಿತಿಗಳು, ಬುದ್ದಿಜೀವಿಗಳು ವಿನಾಕಾರಣ ಆರೋಪ ಹೊರಿಸದಂತೆ ತಾಕೀತು ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.