ಸದನದಲ್ಲಿ ಖಾದರ್ ಗೆ ತರಾಟೆ
ಸರ್ಕಾರಿ ಆಸ್ಪತ್ರೆಗಳಿಗೆ ಸಮರ್ಪಕವಾಗಿ ವೈದ್ಯರನ್ನು ನೇಮಿಸಲು ವಿಫಲವಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

Published On :
ವಿಧಾನಸಭೆ: ಸರ್ಕಾರಿ ಆಸ್ಪತ್ರೆಗಳಿಗೆ ಸಮರ್ಪಕವಾಗಿ ವೈದ್ಯರನ್ನು ನೇಮಿಸಲು ವಿಫಲವಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರನ್ನು ಸದನದಲ್ಲಿ ಗುರುವಾರ ಸದಸ್ಯರು ಪಕ್ಷಾತೀತವಾಗಿ ತರಾಟೆಗೆ ತೆಗೆದುಕೊಂಡರು.
ರಾಜ್ಯದ ಆಸ್ಪತ್ರೆಗಳ ವೈದ್ಯರ ಸಮಸ್ಯೆ ಸದನದಲ್ಲಿ ಅನುರಣಿಸಿತು. ಸಮಸ್ಯೆ ಮುಂದಿಟ್ಟು ಸದಸ್ಯರು ಸರ್ಕಾರಕ್ಕೆ ಚುರುಕು ಮುಟ್ಟಿಸಿದರು. ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರೂ ಸದಸ್ಯರ ಅಭಿ-ಪ್ರಾಯಕ್ಕೆ ದನಿಗೂಡಿಸಿದರು. ``ಎರಡೂವರೆ ವರ್ಷ ಕಳೆದರೂ ವೈದ್ಯರ ನೇಮಕ ಆಗಿಲ್ಲ. ಇದು ಸರ್ಕಾರ ನಡೆಸುವ ರೀತಿನಾ?'' ಎಂದು ಚಾಟಿ ಬೀಸಿದರು.
ವೈದ್ಯರ ಸ್ಥಳ ನಿಯೋಜನೆಗೆ ಅನುಸರಿಸುತ್ತಿರುವ ಕೌನ್ಸೆಲಿಂಗ್ ವ್ಯವಸ್ಥೆ ರದ್ದುಪಡಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿದರು. ಸ್ವಪಕ್ಷೀಯರಾದ, ನಡಹಳ್ಳಿ, ಎನ್.ಎ.ಹ್ಯಾರೀಸ್, ರಾಜಣ್ಣ, ಕೆ.ಆರ್. ರಮೇಶ್ ಕುಮಾರ್ ಅವರು ಟೀಕೆಗಳ ಸುರಿಮಳೆಗರೆದಿದ್ದರಿಂದ ಸರ್ಕಾರಕ್ಕೆ ತೀವ್ರ ಮುಜುಗರವುಂಟಾಯಿತು. ಅಲ್ಲದೆ, ಆಡಳಿತ ಪಕ್ಷದ ಸಾಲಿನಿಂದ ಯಾರೊಬ್ಬರೂ ಸಚಿವ ಖಾದರ್ ಪರ ಸೊಲ್ಲೆತ್ತದ್ದರಿಂದ ಸಚಿವರು ಏಕಾಂಗಿಯಾಗಿ `ಖದರ್' ಕಳೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


